CBSE 2023 10th, 12th Result: ಈ ದಿನ ಹೊರ ಬೀಳುವುದು ಸಿಬಿಎಸ್ಇ 10 ಮತ್ತು 12ನೇ ತರಗತಿ ಫಲಿತಾಂಶ

CBSE Class 10 and 12 Results 2023:  CBSE 10ನೇ ಮತ್ತು 12ನೇ ತರಗತಿಯ ಫಲಿತಾಂಶಗಳನ್ನು ಈ ಕೆಳಗಿನ ಅಧಿಕೃತ ವೆಬ್‌ಸೈಟ್‌ಗಳಲ್ಲಿ ಪ್ರಕಟಿಸಲಾಗುತ್ತದೆ. ವಿದ್ಯಾರ್ಥಿಗಳು ಈ ವೆಬ್ ಸೈಟ್ ಮೂಲಕ ತಮ್ಮ ಫಲಿತಾಂಶಗಳನ್ನು ತಿಳಿದುಕೊಳ್ಳಬಹುದು.   

Written by - Ranjitha R K | Last Updated : May 4, 2023, 03:05 PM IST
  • ಶೀಘ್ರದಲ್ಲೇ 10 ಮತ್ತು 12 ನೇ ತರಗತಿ ಫಲಿತಾಂಶ
  • ಈ ವೆಬ್ ಸೈಟ್ ಗಳಲ್ಲಿ ಫಲಿತಾಂಶ ಪರಿಶೀಲಿಸಬಹುದು
  • ಈ ದಿನ ಪ್ರಕಟವಾಗುವುದು ರಿಸಲ್ಟ್
CBSE 2023 10th, 12th Result: ಈ ದಿನ ಹೊರ ಬೀಳುವುದು ಸಿಬಿಎಸ್ಇ 10 ಮತ್ತು 12ನೇ ತರಗತಿ ಫಲಿತಾಂಶ  title=

CBSE Class 10 and 12 Results 2023:  ಸೆಂಟ್ರಲ್ ಬೋರ್ಡ್ ಆಫ್ ಸೆಕೆಂಡರಿ ಎಜುಕೇಶನ್ (CBSE) 10 ಮತ್ತು 12 ನೇ ತರಗತಿ ಫಲಿತಾಂಶಗಳನ್ನು ಶೀಘ್ರದಲ್ಲೇ ಪ್ರಕಟಿಸುವ ನಿರೀಕ್ಷೆಯಿದೆ. ಮಾಧ್ಯಮ ವರದಿಗಳ ಪ್ರಕಾರ CBSE 10 ಮತ್ತು 12 ನೇ ಫಲಿತಾಂಶಗಳು ಈ ವಾರ ಅಥವಾ ಮುಂದಿನ ವಾರ ಪ್ರಕಟಗೊಳ್ಳಬಹುದು. ಆದರೆ, CBSE 10 ನೇ ತರಗತಿ ಮತ್ತು 12 ನೇ ತರಗತಿಯ ಸಾಮಾನ್ಯ ಪರೀಕ್ಷೆಯ ಫಲಿತಾಂಶದ ದಿನಾಂಕದ ಬಗ್ಗೆ ಯಾವುದೇ ಅಧಿಕೃತ ಅಧಿಸೂಚನೆಯನ್ನು ಬಿಡುಗಡೆ ಮಾಡಿಲ್ಲ.

CBSE 10ನೇ ಮತ್ತು 12ನೇ ತರಗತಿಯ ಫಲಿತಾಂಶಗಳನ್ನು ಈ ಕೆಳಗಿನ ಅಧಿಕೃತ ವೆಬ್‌ಸೈಟ್‌ಗಳಲ್ಲಿ ಪ್ರಕಟಿಸಲಾಗುತ್ತದೆ.
- results.cbse.nic.in 
- cbse.gov.in 

ಇದನ್ನೂ ಓದಿ : ಬಂಗಾಳ ಕೊಲ್ಲಿಯಲ್ಲಿ ಏಳಲಿದೆ 2023ರ ಮೊದಲ ಚಂಡಮಾರುತ 'ಮೋಚಾ' ! IMD ಎಚ್ಚರಿಕೆ

CBSE ತರಗತಿ 10, 12 ಫಲಿತಾಂಶ 2023: ಪರೀಕ್ಷೆಯ ಫಲಿತಾಂಶಗಳನ್ನು ಪರಿಶೀಲಿಸುವುದು ಹೇಗೆ? :
- CBSE 10ನೇ ಮತ್ತು 12ನೇ ತರಗತಿಯ ಫಲಿತಾಂಶ 2023 ಪ್ರಕಟವಾದ ನಂತರ, ವಿದ್ಯಾರ್ಥಿಗಳು ಅಧಿಕೃತ ವೆಬ್‌ಸೈಟ್‌ಗಳಾದ results.cbse.nic.in ಮತ್ತು cbse.gov.in ನಲ್ಲಿ ಪರಿಶೀಲಿಸಬಹುದು. 
- CBSE ವೆಬ್‌ಸೈಟ್‌ನ ಮುಖಪುಟದಲ್ಲಿ,Secondary School Examination Class X Results 2023 Announced' ಅಥವಾ 'School Certificate Examination Class XII Results 2023 Announced'ಲಿಂಕ್ ಮೇಲೆ ಕ್ಲಿಕ್ ಮಾಡಬೇಕು.
- ನಂತರ ವಿದ್ಯಾರ್ಥಿಗಳನ್ನು ಹೊಸ ಪುಟಕ್ಕೆ ಡೈರೆಕ್ಟ್ ಮಾಡಲಾಗುತ್ತದೆ. ಅಲ್ಲಿ ಅವರು ತಮ್ಮ CBSE 10 ನೇ ತರಗತಿ ಅಥವಾ 12 ನೇ ತರಗತಿಯ ರೋಲ್ ನಂಬರ್, ಶಾಲಾ ಸಂಖ್ಯೆ, ಹುಟ್ಟಿದ ದಿನಾಂಕ ಮತ್ತು ಪ್ರವೇಶ ಕಾರ್ಡ್ ID ಅನ್ನು ನಮೂದಿಸಬೇಕು.  
- ನಂತರ ವಿದ್ಯಾರ್ಥಿಗಳು 'ಸಬ್ಮಿಟ್  ಬಟನ್ ಅನ್ನು ಕ್ಲಿಕ್ ಮಾಡಬೇಕು. ಇಷ್ಟಾದರೆ CBSE ತರಗತಿ 10/12 ಫಲಿತಾಂಶವು ಅವರ ಮೊಬೈಲ್/ಡೆಸ್ಕ್‌ಟಾಪ್ ಸ್ಕ್ರೀನ್ ಮೇಲೆ ಕಾಣಿಸುತ್ತದೆ.

ಇದನ್ನೂ ಓದಿ :  ಜಗತ್ತಿನ ಅತಿಹೆಚ್ಚು ಜನಸಂಖ್ಯೆ ಹೊಂದಿದ ರಾಷ್ಟ್ರವೆನಿಸಿದ ಭಾರತ: ಇದನ್ನು ಸಂಭ್ರಮಿಸಬೇಕೋ ಅಥವಾ ಚಿಂತಿಸಬೇಕೋ?

10 ನೇ ತರಗತಿ ಮತ್ತು 12 ನೇ ತರಗತಿಯ ಅಂಕಗಳನ್ನು ಪರಿಶೀಲಿಸಲು ಇರುವ ವೆಬ್‌ಸೈಟ್‌ಗಳು : 

CBSE 10 ನೇ ಮತ್ತು 12 ನೇ ವಿದ್ಯಾರ್ಥಿಗಳು ತಮ್ಮ ಫಲಿತಾಂಶಗಳನ್ನು 2023 ಕೆಳಗಿನ ವೆಬ್‌ಸೈಟ್‌ಗಳಲ್ಲಿ ಪರಿಶೀಲಿಸಬಹುದು:

1. cbse.gov.in
2. results.cbse.nic.in
3. parikshasangam.cbse.gov.in

CBSE ಫಲಿತಾಂಶ 2023: ಫೆಬ್ರವರಿ, ಏಪ್ರಿಲ್‌ನಲ್ಲಿ ನಡೆದ Xನೇ ತರಗತಿ, XII ತರಗತಿ ಪರೀಕ್ಷೆಗಳು

CBSE 10 ನೇ ತರಗತಿ ಮತ್ತು 12 ನೇ ತರಗತಿ ಪರೀಕ್ಷೆಗಳನ್ನು  2023 ಫೆಬ್ರವರಿಯಿಂದ ಏಪ್ರಿಲ್ ವರೆಗೆ ನಡೆಸಲಾಗಿತ್ತು. CBSE ಪರೀಕ್ಷೆಗಳು ಫೆಬ್ರವರಿ 15 ರಂದು ಎರಡೂ ತರಗತಿಗಳಿಗೆ ಪ್ರಾರಂಭವಾಗಿ, ಮಾರ್ಚ್ 21 ರಂದು 10 ನೇ ತರಗತಿ ಮತ್ತು ಏಪ್ರಿಲ್ 5 ರಂದು 12 ನೇ ತರಗತಿ ಪರೀಕ್ಷೆ ಕೊನೆಗೊಂಡಿತ್ತು. 

ಇದನ್ನೂ ಓದಿ :  ಜಮ್ಮು-ಕಾಶ್ಮೀರದ ಕಿಶ್ತ್ವಾರ್ ಬಳಿ ಸೇನಾ ಚಾಪರ್ ಪತನ

ಈ ವರ್ಷ 38 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು CBSE 10 ಮತ್ತು 12 ನೇ ಪರೀಕ್ಷೆಗೆ ಹಾಜರಾಗಿದ್ದರು. ಹತ್ತನೇ ತರಗತಿ ಪರೀಕ್ಷೆಯಲ್ಲಿ 21,86,940 ವಿದ್ಯಾರ್ಥಿಗಳು ಮತ್ತು ಹನ್ನೆರಡನೇ ತರಗತಿಯ ಪರೀಕ್ಷೆಗೆ  16,96,770 ವಿದ್ಯಾರ್ಥಿಗಳು ಹಾಜರಾಗಿದ್ದರು.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News