Cyclone Mocha News : ಬಂಗಾಳಕೊಲ್ಲಿಯ ಆಗ್ನೇಯ ಭಾಗದಲ್ಲಿ ಚಂಡಮಾರುತ ಬೀಸುವ ಸೂಚನೆಗಳಿವೆ. ಈ ಹಿನ್ನೆಲೆಯಲ್ಲಿ ಮೇ 7 ರಿಂದ 11 ರವರೆಗೆ ಪಶ್ಚಿಮ ಬಂಗಾಳ ಮತ್ತು ಒಡಿಶಾ ರಾಜ್ಯಗಳಿಗೆ ಎಚ್ಚರಿಕೆ ನೀಡಲಾಗಿದೆ. ಈ ಪ್ರದೇಶಕ್ಕೆ ತೆರಳದಂತೆ ಮೀನುಗಾರರು ಮತ್ತು ಹಡಗುಗಳಿಗೆ ಮುನ್ನೆಚ್ಚರಿಕೆ ನೀಡಲಾಗಿದೆ. ಏಕೆಂದರೆ ಈ ಪ್ರದೇಶದಲ್ಲಿ ಚಂಡಮಾರುತ ಗಂಟೆಗೆ 40-50 ಕಿಲೋಮೀಟರ್ ವೇಗದಲ್ಲಿ ಬೀಸುವ ನಿರೀಕ್ಷೆಯಿದೆ.
ವರ್ಷದ ಮೊದಲ ಚಂಡಮಾರುತ :
ಈ ಚಂಡಮಾರುತವು 2023 ರ ಮೊದಲ ಚಂಡಮಾರುತವಾಗಿದೆ. ಚಂಡಮಾರುತಕ್ಕೆ 'ಮೋಚಾ' ಎಂದು ಹೆಸರಿಡಲಾಗಿದೆ. ಕೆಂಪು ಸಮುದ್ರದ ತೀರದಲ್ಲಿರುವ ತನ್ನ ಬಂದರು ನಗರಗಳಲ್ಲಿ ಒಂದಾದ 'ಮೋಚಾ' ಹೆಸರನ್ನು ಯೆಮೆನ್ ಈ ಚಂಡಮಾರುತಕ್ಕೆ ಸೂಚಿಸಿದೆ. ಚಂಡಮಾರುತಗಳನ್ನು ಹೆಸರಿಸುವ ವ್ಯವಸ್ಥೆಯನ್ನು ವಿಶ್ವ ಹವಾಮಾನ ಸಂಸ್ಥೆಯ ಮೂಲಕ ಅಳವಡಿಸಿಕೊಳ್ಳಲಾಗಿದೆ. ಇದರಲ್ಲಿ ವಿಶ್ವಸಂಸ್ಥೆಯ ಆರ್ಥಿಕ ಮತ್ತು ಸಾಮಾಜಿಕ ಆಯೋಗದ ಸದಸ್ಯ ರಾಷ್ಟ್ರಗಳು ಪಾಲ್ಗೊಳ್ಳುತ್ತವೆ. ಈ ಚಂಡಮಾರುತದ ಹೆಸರನ್ನು ಯೆಮೆನ್ ಸೂಚಿಸಿದೆ.
ಇದನ್ನೂ ಓದಿ : Rain Update: ಮೇ 5ರವರೆಗೆ ರಾಜ್ಯದಲ್ಲಿ ಭಾರೀ ವರ್ಷಧಾರೆ: 15 ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್! ಯಾವ್ಯಾವ ಜಿಲ್ಲೆಗಳಿವೆ?
ಹವಾಮಾನ ಇಲಾಖೆಯ ಅಂದಾಜು :
ಭಾರತೀಯ ಹವಾಮಾನ ಇಲಾಖೆಯ (ಐಎಂಡಿ) ಮಹಾನಿರ್ದೇಶಕ ಮೃತ್ಯುಂಜಯ್ ಮಹಾಪಾತ್ರ ಅವರು ಮೇ 6 ರಂದು ಚಂಡಮಾರುತ ಏಳುವ ಸಾಧ್ಯತೆ ಇದೆ ಎಂದು ಹೇಳಿದ್ದಾರೆ. ಮೇ 8 ರಂದು ಕಡಿಮೆ ಒತ್ತಡದ ಪ್ರದೇಶ ಕೇಂದ್ರೀಕೃತವಾಗಿರುತ್ತದೆ ಮತ್ತು ಮೇ 9 ರಂದು ಚಂಡಮಾರುತವಾಗಿ ತೀವ್ರಗೊಳ್ಳುವ ಸಾಧ್ಯತೆ ಇದೆ ಎಂದು ಮುನ್ಸೂಚನೆ ನೀಡಲಾಗಿದೆ. ಚಂಡಮಾರುತವು ಮಧ್ಯ ಬಂಗಾಳಕೊಲ್ಲಿಯತ್ತ ಚಲಿಸುವ ನಿರೀಕ್ಷೆಯಿದೆ ಎಂದು ಹೇಳಿದ್ದಾರೆ.
"ನಾವು ಸೈಕ್ಲೋನಿಕ್ ಏಳುವ ಮುಂಚಿತವಾಗಿ ಮುನ್ಸೂಚನೆಗಳನ್ನು ನೀಡುತ್ತಿದ್ದೇವೆ. ಈ ಮೂಲಕ ಮೀನುಗಾರರು ಮತ್ತು ಹಡಗು ಈ ಸೂಚನೆಗಳಿಗೆ ಅನುಸಾರವಾಗಿ ತಮ್ಮ ಚಲನ ವಲನಗಳನ್ನು ಯೋಜಿಸಬಹುದು ಎಂದು ಮೃತ್ಯುಂಜಯ್ ಮಹಾಪಾತ್ರ ಹೇಳಿದ್ದಾರೆ. ಆಗ್ನೇಯ ಬಂಗಾಳ ಕೊಲ್ಲಿಯಲ್ಲಿ ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಸೂಚಿಸಲಾಗಿದೆ.
ಇದನ್ನೂ ಓದಿ : Cyberattack: ಸೈಬರ್ ದಾಳಿಗೆ ಮನನೊಂದು ಯುವತಿ ಆತ್ಮಹತ್ಯೆ..!
ಮೇ ತಿಂಗಳಲ್ಲಿ ಬೀಸಲಿವೆ ಹೆಚ್ಚಿನ ಚಂಡಮಾರುತ :
ಮೇ ಮತ್ತು ಜೂನ್‌ನಲ್ಲಿ ಹಿಂದೂ ಮಹಾಸಾಗರ ಪ್ರದೇಶದಲ್ಲಿ ಚಂಡಮಾರುತದ ಸಾಧ್ಯತೆ ಇದೆ. ಈ ಬಾರಿ ಹೆಚ್ಚಿನ ಚಂಡಮಾರುತಗಳು ಮೇ ತಿಂಗಳಲ್ಲಿ ಬೀಸಲಿವೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK
Instagram Link - https://bit.ly/3LyfY2l
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.