ನವದೆಹಲಿ: ಕಾಂಗ್ರೆಸ್ ಭಾನುವಾರ ಚರಂಜಿತ್ ಸಿಂಗ್ ಚನ್ನಿಯನ್ನು ಅಮರೀಂದರ್ ಸಿಂಗ್ ಅವರ ಪಂಜಾಬ್ ಮುಖ್ಯಮಂತ್ರಿಯ ಉತ್ತರಾಧಿಕಾರಿ ಎಂದು ಹೆಸರಿಸಿದೆ.
ರಾಜ್ಯ ವಿಧಾನಸಭಾ ಚುನಾವಣೆಗೆ ಕೆಲವೇ ತಿಂಗಳುಗಳಿರುವಾಗ ರಾಜ್ಯ ಕಾಂಗ್ರೆಸ್ ಮುಖ್ಯಸ್ಥ ನವಜೋತ್ ಸಿಂಗ್ ಸಿಧು ಅವರೊಂದಿಗಿನ ಅಧಿಕಾರದ ಕದನದಿಂದಾಗಿ ಅಮರಿಂದರ್ ಸಿಂಗ್ (Captain Amarindar Singh) ಅನಿರೀಕ್ಷಿತವಾಗಿ ರಾಜೀನಾಮೆ ನೀಡಿದ ಒಂದು ದಿನದ ನಂತರ ಈ ಬೆಳವಣಿಗೆ ನಡೆದಿದೆ.
ಇದನ್ನೂ ಓದಿ: ಗಾಂಧಿ ಕುಟುಂಬದ ಮೌನವನ್ನು ಪ್ರಶ್ನಿಸಿದ ಪ್ರಕಾಶ್ ಜಾವಡೇಕರ್
ಎಐಸಿಸಿ ಪ್ರಧಾನ ಕಾರ್ಯದರ್ಶಿ ಹರೀಶ್ ರಾವತ್ ಟ್ವೀಟ್ ಮೂಲಕ "ಪಂಜಾಬ್‌ನ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕರಾಗಿ ಚರಣಜಿತ್ ಸಿಂಗ್ ಚನ್ನಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಘೋಷಿಸಲು ನನಗೆ ತುಂಬಾ ಸಂತೋಷವಾಗಿದೆ." ಎಂದು ಘೋಷಿಸಿದ್ದಾರೆ.
ಇದನ್ನೂ ಓದಿ: Punjab New CM : ಪಂಜಾಬ್ ನೂತನ ಸಿಎಂ ಆಗಿ ಸುಖಜಿಂದರ್ ಸಿಂಗ್ ರಾಂಧವ ಆಯ್ಕೆ ಸಾಧ್ಯತೆ!
ಕಾಂಗ್ರೆಸ್‌ನ ಪ್ರಬಲ ಪ್ರಾದೇಶಿಕ ನಾಯಕರುಗಳಲ್ಲಿ ಒಬ್ಬರಾದ ಸಿಂಗ್, ಕಾಂಗ್ರೆಸ್ ಅಧ್ಯಕ್ಷರೊಂದಿಗೆ ಮಾತನಾಡಿದ ನಂತರ ಮತ್ತು ಶನಿವಾರ ಸಂಜೆ ಸಿಎಲ್‌ಪಿಯ ನಿರ್ಣಾಯಕ ಸಭೆಗೆ ಸ್ವಲ್ಪ ಮೊದಲು ತಮ್ಮ ರಾಜಿನಾಮೆಯನ್ನು ಸಲ್ಲಿಸಿದರು. ನಂತರ ಅವರು ಸಿಧು ವಿರುದ್ಧ ತಡೆರಹಿತ ವಾಗ್ದಾಳಿ ನಡೆಸಿದರು.
ಇದನ್ನೂ ಓದಿ-PAN Aadhaar Link:ಮತ್ತೆ ವಿಸ್ತರಣೆಯಾದ ಆಧಾರ್-ಪ್ಯಾನ್ ಜೋಡಣೆಯ Deadline
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.