ಚುನಾವಣೆಯ ನಂತರ ಚೌಕಿದಾರ್ ಜೈಲಿಗೆ ಹೋಗಲಿದ್ದಾನೆ -ರಾಹುಲ್ ಗಾಂಧಿ

ಲೋಕಸಭಾ ಚುನಾವಣೆಯ ನಂತರ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ರಫೇಲ್ ಒಪ್ಪಂದವನ್ನು ತನಿಖೆಗೆ ಒಳಪಡಿಸಲಾಗುವುದು ಆಗ ಚೌಕಿದಾರ್ ಜೈಲಿಗೆ ಹೊಗಲಿದ್ದಾನೆ ಎಂದು ರಾಹುಲ್ ಗಾಂಧಿ ಪ್ರಧಾನಿ ವಿರುದ್ದ ವಾಗ್ದಾಳಿ ನಡೆಸಿದರು.

Last Updated : Apr 5, 2019, 03:07 PM IST
ಚುನಾವಣೆಯ ನಂತರ ಚೌಕಿದಾರ್ ಜೈಲಿಗೆ ಹೋಗಲಿದ್ದಾನೆ -ರಾಹುಲ್ ಗಾಂಧಿ title=
ANI photo

ನವದೆಹಲಿ: ಲೋಕಸಭಾ ಚುನಾವಣೆಯ ನಂತರ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ರಫೇಲ್ ಒಪ್ಪಂದವನ್ನು ತನಿಖೆಗೆ ಒಳಪಡಿಸಲಾಗುವುದು ಆಗ ಚೌಕಿದಾರ್ ಜೈಲಿಗೆ ಹೊಗಲಿದ್ದಾನೆ ಎಂದು ರಾಹುಲ್ ಗಾಂಧಿ ಪ್ರಧಾನಿ ವಿರುದ್ದ ವಾಗ್ದಾಳಿ ನಡೆಸಿದರು.

ಗುರುವಾರದಂದು ನಾಗಪುರ್ ದಲ್ಲಿನ ರ್ಯಾಲಿಯೊಂದರಲ್ಲಿ ಭಾಗವಹಿಸಿ ಮಾತನಾಡಿದ ರಾಹುಲ್ " ಕಾಂಗ್ರೆಸ್ ಪಕ್ಷವು ಆಧಿಕಾರಕ್ಕೆ ಬಂದರೆ ತನಿಖೆಗೆ ಒಳಪಡಿಸಿ ಚೌಕಿದಾರ್ ನನ್ನು ಒಳಗೆ ಹಾಕಲಾಗುವುದು ಎಂದು ಹೇಳಿದರು.ಪ್ರಧಾನ ಮಂತ್ರಿಯವರು ರಫೇಲ್ ಒಪ್ಪಂದ ಮೊತ್ತವನ್ನು ಬದಲು ಮಾಡಿದ್ದಾರೆ.ಇದರಿಂದ ಅದರ ಖರೀಧಿ ಮೊತ್ತವು ಹೆಚ್ಚಳವಾಗಿದೆ ಎಂದು ರಾಹುಲ್ ಆರೋಪಿಸಿದರು.

ಪ್ರತಿ ಯುದ್ಧ ವಿಮಾನದ ಮೊತ್ತ 534 ಕೋಟಿ ರೂ ಆದರೆ ಅದನ್ನು1600 ಕೋಟಿ ರೂಗಳಗೆ ಖರೀದಿ ಮಾಡಲಾಗಿದೆ ಎಂದರು.ಇದೆ ವೇಳೆ ಚೌಕಿದಾರ್ ಅಭಿಯಾನದ ಬಗ್ಗೆ ವ್ಯಂಗ್ಯವಾಡಿದ ಅವರು ನೀವು ಎಂದಾದರೂ ಕಾರ್ಮಿಕನ ಮನೆ ಮುಂದೆ ಚೌಕಿದಾರನನ್ನು ನೋಡಿದ್ದಿರಾ? ಇಲ್ಲ,ಆದರೆ ಅದೇ ಅನಿಲ್ ಅಂಬಾನಿ ಮನೆ ಮುಂದೆ ಸಾವಿರಾರು ಚೌಕಿದಾರರು ನಿಂತಿರುತ್ತಾರೆ. ಅವಧಿ ಮುಗಿಯುವ ವೇಳೆಗೆ ಅಚ್ಚೇ ದೀನ್ ಮುಗಿದು ಎಲ್ಲ ವಿಭಾಗಗಳಲ್ಲಿ ಚೌಕಿದಾರ್ ಚೋರ್ ಹೈ ಎನ್ನುವಂತಾಗಿದೆ.

ಚೌಕಿದಾರ್ ಸಣ್ಣ ಮೊತ್ತವನ್ನು ಲೂಟಿ ಹೊಡೆದಿಲ್ಲ. ಈ ಚುನಾವಣೆಯ ನಂತರ ತನಿಖೆಯನ್ನು ನಡೆಸಲಾಗುತ್ತದೆ.ನಂತರ ಜೈಲಿನೊಳಗೆ ಚೌಕಿದಾರ್ ಇರಬೇಕಾಗುತ್ತದೆ.ಜೈಲಿನ ಹೊರಗಡೆ ಬೇರೆ ಚೌಕಿದಾರರು ಇರಬೇಕಾಗುತ್ತದೆ ಎಂದು ಅವರು ಹೇಳಿದರು  

Trending News