ಪೌರತ್ವ ತಿದ್ದುಪಡಿ ಮಸೂದೆ ರಾಜ್ಯ ಸಭೆಯಲ್ಲಿ ಮಂಡನೆ, ಏನಂದ್ರು ಅಮಿತ್ ಶಾ?

ಶರಣಾರ್ಥಿಗಳು ಭಾರತಕ್ಕೆ ಪ್ರವೇಶಿಸಿದ ದಿನದಿಂದಲೇ ಅವರಿಗೆ ನಾಗರಿಕತ್ವ ಒದಗಿಸಲಾಗುವುದು ಮತ್ತು ಅವರ ಉದ್ಯಮಗಳನ್ನು ಖಾಯಂಗೊಳಿಸಲಾಗುವುದು ಎಂದು ಶಾ ಹೇಳಿದ್ದಾರೆ.

Last Updated : Dec 11, 2019, 03:02 PM IST
ಪೌರತ್ವ ತಿದ್ದುಪಡಿ ಮಸೂದೆ ರಾಜ್ಯ ಸಭೆಯಲ್ಲಿ ಮಂಡನೆ, ಏನಂದ್ರು ಅಮಿತ್ ಶಾ? title=

ನವದೆಹಲಿ: ಇಂದು ಮಧ್ಯಾಹ್ನ 12ಗಂಟೆಗೆ ರಾಜ್ಯಸಭೆಯಲ್ಲಿ ಪೌರತ್ವ ತಿದ್ದುಪಡಿ ಮಸೂದೆ-2019ನ್ನು ಮಂಡಿಸಲಾಗಿದೆ. 12ಗಂಟೆಗೆ ರಾಜ್ಯಸಭೆಯ ಕಾರ್ಯಕಲಾಪ ಆರಂಭವಾಗುತ್ತಿದ್ದಂತೆ, ಈ ಮಸೂದೆಯ ಕುರಿತು ಚರ್ಚೆ ಕೂಡ ಆರಂಭಗಾಗಿದೆ. ಮಸೂದೆ ಮಂಡಿಸಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ, ಇದು ಶರಣಾರ್ಥಿಗಳಿಗೆ ಹಕ್ಕು ಹಾಗೂ ಸನ್ಮಾನ ಕಲ್ಪಿಸುವ ಮಸೂದೆಯಾಗಿದೆ. ಕೋಟ್ಯಂತರ ವಲಸಿಗರು ಈ ಪೌರತ್ವ ಮಸೂದೆ ಬಗ್ಗೆ ಸಾಕಷ್ಟು ನಿರೀಕ್ಷೆ ಹೊಂದಿದ್ದಾರೆ ಎಂದಿದ್ದಾರೆ.

ಈ ವೇಳೆ ಶರಣಾರ್ಥಿಗಳು ಭಾರತಕ್ಕೆ ಪ್ರವೇಶಿಸಿದ ದಿನದಿಂದಲೇ ಅವರಿಗೆ ನಾಗರಿಕತ್ವ ಒದಗಿಸಲಾಗುವುದು ಮತ್ತು ಅವರ ಉದ್ಯಮಗಳನ್ನು ಖಾಯಂಗೊಳಿಸಲಾಗುವುದು ಎಂದು ಶಾ ಹೇಳಿದ್ದಾರೆ. ಈ ವೇಳೆ ನೀವು ವೋಟ್ ಬ್ಯಾಂಕ್ ರಾಜಕೀಯ ಮಾಡುತ್ತಿರುವಿರಿ ಎಂದು ಆರೋಪಿಸಿದ್ದ ಪ್ರತಿಪಕ್ಷಗಳಿಗೆ ತಿರುಗೇಟು ನೀಡಿರುವ ಶಾ, ಜನರು ಈ ಮಸೂದೆಯನ್ನು ಜನರು ಒಪ್ಪಿಕೊಂಡಿದ್ದಾರೆ ಹಾಗೂ ಪ್ರಜಾಪ್ರಭುತ್ವದಲ್ಲಿ ಜನಾದೇಶಕ್ಕಿಂತ ದೊಡ್ಡದು ಯಾವುದು ಇಲ್ಲ ಎಂದಿದ್ದಾರೆ.

ಈ ಮಸೂದೆ ದೇಶದ ಮುಸ್ಲಿಮರಿಗೆ ವಿರುದ್ಧವಾಗಿದೆ ಎಂದು ಹೇಳುತ್ತಿರುವ ಕೆಲವರು ದೇಶದ ಜನರನ್ನು ತಪ್ಪುದಾರಿಗೆ ಎಳೆಯಲು ಯತ್ನಿಸುತ್ತಿದ್ದು, ಹೇಗೆ ಈ ಮಸೂದೆ ದೇಶದ ಮುಸ್ಲಿಮರಿಗೆ ಅನ್ಯಾಯ ಮಾಡುತ್ತಿದೆ ಹೇಳಿ? ಎಂದು ಪ್ರಶ್ನಿಸಿದ್ದಾರೆ.

ಇಂತವರ ಮಾತಿಗೆ ಕಿವಿಗೊಡಬೇಡಿ ಎಂದು ದೇಶದ ಮುಸ್ಲಿಮರಿಗೆ ಕರೆ ನೀಡಿರುವ ಗೃಹ ಸಚಿವರು, ಶರಣಾರ್ಥಿಗಳು ಭಾರತಕ್ಕೆ ಗಡಿ ಪ್ರವೇಶಿಸಿದ ದಿನದಿಂದಲೇ ಅವರಿಗೆ ಈ ದೇಶದ ನಾಗರಿಕತ್ವ ನೀಡಲಾಗುವುದು ಮತ್ತು ಅವರ ಉದ್ಯಮಗಳಿಗೆ ಮಾನ್ಯತೆ ಕೂಡ ಒದಗಿಸಲಾಗುವುದು ಎಂದಿದ್ದಾರೆ.

ಈ ವೇಳೆ ಪಾಕಿಸ್ತಾನ, ಅಫ್ಘಾನಿಸ್ತಾನ ಮತ್ತು ಬಾಂಗ್ಲಾದೇಶಗಳಲ್ಲಿ ಅಲ್ಪಸಂಖ್ಯಾತರ ಸಂಖ್ಯೆ ಇಳಿಮುಖವಾಗಿದ್ದು, ಅಲ್ಲಿ ಕಿರುಕುಳದಿಂದ ಬೇಸತ್ತು ಭಾರತ ಪ್ರವೇಶಿಸಿದವರಿಗೋಸ್ಕರ ಈ ಮಸೂದೆ ತರಲಾಗಿದ್ದು, ಇದು ಅವರಿಗೆ ಸಮಾನತೆಯ ಹಕ್ಕು ನೀಡುತ್ತದೆ ಎಂದಿದ್ದಾರೆ. 

ಅಮಿತ್ ಶಾ ಅವರ ಭಾಷಣದ ಹೈಲೈಟ್ಸ್

  • ಐತಿಹಾಸಿಕ ಮಸೂದೆಯೊಂದಿಗೆ ನಾನು ನಿಮ್ಮ ಮುಂದೆ ಉಪಸ್ಥಿತನಾಗಿರುವೆ
  • ಲಕ್ಷಾಂತರ, ಕೋಟ್ಯಾಂತರ ಜನರು ನೋವಿನಿಂದ ಬದಕುತ್ತಿದ್ದಾರೆ. ಅವರಿಗೆ ಹೊಸ ಚೈತನ್ಯ ತುಂಬುವ ಬಿಲ್ ಇದಾಗಿದೆ.
  • ದೇಶ ವಿಭಜನೆಯ ಬಳಿಕ ಉಭಯ ದೇಶಗಳಲ್ಲಿ ಇರುವ ಅಲ್ಪಸಂಖ್ಯಾತರು ಗೌರವಯುತವಾಗಿ ಜೀವಿಸಲಿದ್ದಾರೆ ಎಂಬುದನ್ನು ಕಲ್ಪಿಸಲಾಗಿತ್ತು.
  • ಆದರೆ ಹಲವಾರು ದಶಕಗಳ ಬಳಿಕ ಹಿಂದಿರುಗಿ ನೋಡಿದಾಗ, ಪಾಕಿಸ್ತಾನ, ಅಫ್ಘಾನಿಸ್ತಾನ ಹಾಗೂ ಬಾಂಗ್ಲಾದೇಶಗಳಲ್ಲಿ ಈ ಅಲ್ಪಸಂಖ್ಯಾತರಿಗೆ ಇನ್ನೂ ಸಮಾನತೆಯ ಹಕ್ಕು ಸಿಕ್ಕಿಲ್ಲ.
  • ಪೂರ್ವ ಪಾಕಿಸ್ತಾನದಲ್ಲಿ ಬನ್ ಹಾಗೂ ಮುಜೀಬ್ ಅವರು ಇದಕ್ಕಾಗಿ ಶ್ರಮಿಸಿದರು ಆದರೆ, ದುರದೃಷ್ಟವಶಾತ್ ಅವರ ಹತ್ಯೆ ಮಾಡಲಾಯಿತು ಹಾಗೂ ದೀರ್ಘ ಕಾಲದವರೆಗೆ ಅಲ್ಲಿ ಅಲ್ಪಸಂಖ್ಯಾತರು ಶೋಷಣೆಗೆ ಒಳಗಾದರು.
  • ಅಲ್ಲಿ ಅಲ್ಪಸಂಖ್ಯಾತರ ಸಂಖ್ಯೆ ಇಂದು ಕಡಿಮೆಯಾಗಿದೆ. ಅವರನ್ನು ಹತ್ಯೆಗೈಯಲಾಗಿದೆ ಅಥವಾ ಅವರ ಧರ್ಮ ಪರಿವರ್ತಿಸಲಾಗಿದೆ.
  • ಇದರಿಂದ ಪಾರಾಗಿ ಭಾರತಕ್ಕೆ ಬಂದ ವಲಸಿಗರಿಗೆ ಇದುವರೆಗೆ ಸೌಲಭ್ಯವೂ ಸಿಕ್ಕಿಲ್ಲ ಹಾಗೂ ನಾಗರಿಕತ್ವವೂ ಸಿಕ್ಕಿಲ್ಲ
  • ಈ ಮಸೂದೆ ಧರ್ಮದ ಆಧಾರದ ಮೇಲೆ ಶೋಷಣೆಗೆ ಒಳಗಾದವರಿಗೆ ನ್ಯಾಯ ನೀಡಲಿದೆ.
  • 2019ರಲ್ಲಿ ನಡೆದ ಸಾರ್ವತ್ರಿಕ ಚುನಾವಣೆಯ ವೇಳೆ ಬಿಜೆಪಿ ಹಾಗೂ ಇತರೆ ಮೈತ್ರಿಪಕ್ಷಗಳು ಈ ಕುರಿತು ಘೋಷಣೆ ಪತ್ರ ಬಿಡುಗಡೆಗೊಳಿಸಿದ್ದವು.
  • ಮಲ್ಟಿ ಪಾರ್ಟಿ ಡೆಮೋಕ್ರಾಸಿಯಲ್ಲಿ ಘೋಷಣಾ ಪತ್ರ ಸರ್ಕಾರ ರಚಿಸುವ ಪಕ್ಷಗಳ ಘೋಷಣೆಯಾಗಿರುತ್ತದೆ.
  • ಬಿಜೆಪಿ ತನ್ನ ಘೋಷಣಾಪತ್ರದಲ್ಲಿ ಈ ಕುರಿತು ಘೋಷಿಸಿತ್ತು.
  • ವೋಟ್ ಬ್ಯಾಂಕ್ ರಾಜಕೀಯ ಮಾಡುತ್ತಿರುವಿರಿ ಎನ್ನುವ ಎಲ್ಲರಿಗೂ ನಾನು ಹೇಳಬಯಸುತ್ತೇನೆ "ದೇಶದ ಜನತೆ ಈ ಮಸೂದೆಗೆ ಸಮರ್ಥನೆ ನೀಡಿದ್ದಾರೆ ಹಾಗೂ ಪ್ರಜಾಪ್ರಭುತ್ವದಲ್ಲಿ ಜನಾದೇಶಕ್ಕಿಂತ ದೊಡ್ಡದು ಯಾವುದು ಇಲ್ಲ" 
  • ಭಾರತದಲ್ಲಿ ನೆಲಸಿರುವ ಮುಸ್ಲಿಮರು ಇಲ್ಲಿಯೇ ಇರಲಿದ್ದಾರೆ, ಅವರಿಗೆ ಯಾರು ಕಿರುಕುಳ ನೀಡುವುದಿಲ್ಲ.
  • ಯಾರೇ ನಿಮ್ಮನ್ನು ಭಯಪಡಿಸಿದರೆ, ಹೆದರಬೇಡಿ. ಇದು ನರೇಂದ್ರ ಮೋದಿ ಸರ್ಕಾರ, ಎಲ್ಲರನ್ನು ಜೊತೆಗೆ ಕರೆದುಕೊಂಡು ಹೋಗುತ್ತದೆ.
  • ಯಾರೊಬ್ಬರ ತಪ್ಪು ಮಾತಿಗೆ ಕಿವಿಗೊಡಬೇಡಿ.
  • ಯಾರೇ ದಬಾಯಿಸಿದರು ಅಥವಾ ಬೆದರಿಸಿದರು ಮುಸ್ಲಿಮರು ಹೆದರಬೇಡಿ.
  • ನೆರೆರಾಷ್ಟ್ರಗಳಿಂದ ಬಂದ ಮುಸ್ಲಿಮರಿಗೂ ಕೂಡ ಸಂರಕ್ಷಣೆ ಕಲ್ಪಿಸಲಾಗುವುದು.

Trending News