ಸ್ವಚ್ಚ ಗಂಗಾ ನದಿಗಾಗಿ ಅಮರಣಾಂತ ಉಪವಾಸಕ್ಕೆ ಕುಳಿತಿದ್ದ ಜಿ.ಡಿ.ಅಗರವಾಲ್ ಸಾವು

 ಜೂನ್ 22 ರಿಂದ ಗಂಗಾ ನದಿಯ ಸ್ವಚ್ಚತೆಗಾಗಿ ಅಮರಣಾಂತ ಉಪವಾಸ ಸತ್ಯಾಗ್ರಹ ಕುಳಿತಿದ್ದ ಜಿ.ಡಿ.ಅಗರ್ವಾಲ್ ಅವರು  ರಿಷಿಕೇಶ್ ದಲ್ಲಿನ ಏಮ್ಸ್ ಆಸ್ಪತ್ರೆಯಲ್ಲಿ ನಿಧನ ಹೊಂದಿದ್ದಾರೆ.

Last Updated : Oct 11, 2018, 04:41 PM IST
ಸ್ವಚ್ಚ ಗಂಗಾ ನದಿಗಾಗಿ ಅಮರಣಾಂತ ಉಪವಾಸಕ್ಕೆ ಕುಳಿತಿದ್ದ ಜಿ.ಡಿ.ಅಗರವಾಲ್ ಸಾವು title=
Photo:srivastavasajal.blogspot.com

ನವದೆಹಲಿ:  ಜೂನ್ 22 ರಿಂದ ಗಂಗಾ ನದಿಯ ಸ್ವಚ್ಚತೆಗಾಗಿ ಅಮರಣಾಂತ ಉಪವಾಸ ಸತ್ಯಾಗ್ರಹ ಕುಳಿತಿದ್ದ ಜಿ.ಡಿ.ಅಗರ್ವಾಲ್ ಅವರು ರಿಷಿಕೇಶ್ ದಲ್ಲಿನ ಏಮ್ಸ್ ಆಸ್ಪತ್ರೆಯಲ್ಲಿ ನಿಧನ ಹೊಂದಿದ್ದಾರೆ.

ಐಐಟಿ ಕಾನ್ಪುರ್ ದಲ್ಲಿ ನಿವೃತ್ತ ಪ್ರಾಧ್ಯಾಪಕರಾಗಿದ್ದ ಜಿಡಿ ಅಗರವಾಲ್ ಗಂಗಾ ನದಿಯನ್ನು ಸ್ವಚ್ಚಗೊಳಿಸಬೇಕೆಂದು ಅಮರಣಾಂತ ಉಪಹಾಸ ಸತ್ಯಾಗ್ರಹಕ್ಕೆ ಕುಳಿತಿದ್ದರು.ಬುಧುವಾರದಂದು ನೀರನ್ನು ಸಹಿತ ಕುಡಿಯುವುದನ್ನು ನಿಲ್ಲಿಸಿದ್ದರು. ಸಾವಿಗೂ ಮುನ್ನ ಹರಿದ್ವಾರದ ಆಡಳಿತ ವಿಭಾಗವು ಒತ್ತಯಪೂರಕವಾಗಿ ಅವರನ್ನು ಪ್ರತಿಭಟನಾ ಸ್ಥಳದಿಂದ ಏಮ್ಸ್ ಆಸ್ಪತ್ರೆಗೆ ಸ್ಥಳಾಂತರಿಸಿದ್ದರು ಎಂದು ಅವರು ಆರೋಪಿಸಿದ್ದರು/

ಪ್ರೊ.ಅಗರವಾಲ್ ಅವರು ಗಂಗಾ ನದಿಯುದ್ದಕ್ಕೂ ಹೈಡ್ರೋಎಲೆಕ್ಟ್ರಿಕ್ ಪ್ರೊಜೆಕ್ಟ್ ಗಳನ್ನು ನಿರ್ಮಿಸುವುದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದ್ದರು. ಅಲ್ಲದೆ ಇದಕ್ಕೆ ತಡೆಯೋಡ್ದಲು ಗಂಗಾನದಿ ರಕ್ಷಣಾ ನಿರ್ವಹಣೆ ಕಾಯ್ದೆಯನ್ನು ಜಾರಿಗೆ ತರಲು ಅವರು ಅಗ್ರಹಿಸಿದ್ದರು. 

Trending News