ಕಮಲೇಶ್ ತಿವಾರಿ ಕುಟುಂಬದೊಂದಿಗೆ ಇಂದು ಸಿಎಂ ಯೋಗಿ ಭೇಟಿ

ಇಂದು ಬೆಳಿಗ್ಗೆ 11 ಗಂಟೆಗೆ ಕಾಳಿದಾಸ್ ಮಾರ್ಗದ 5 ರಲ್ಲಿರುವ ಮುಖ್ಯಮಂತ್ರಿ ನಿವಾಸದಲ್ಲಿ ಕಮಲೇಶ್ ತಿವಾರಿ ಕುಟುಂಬಸ್ಥರನ್ನು ಯೋಗಿ ಆದಿತ್ಯನಾಥ್ ಭೇಟಿ ಮಾಡಲಿದ್ದಾರೆ.

Updated: Oct 20, 2019 , 07:38 AM IST
ಕಮಲೇಶ್ ತಿವಾರಿ ಕುಟುಂಬದೊಂದಿಗೆ ಇಂದು ಸಿಎಂ ಯೋಗಿ ಭೇಟಿ

ಲಕ್ನೋ: ಮಹಾರಾಷ್ಟ್ರದ ಚುನಾವಣಾ ಪ್ರಚಾರದ ಬಳಿಕ ಶನಿವಾರ ಲಕ್ನೋಗೆ ಮರಳಿರುವ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ಭಾನುವಾರ ಬೆಳಿಗ್ಗೆ 11 ಗಂಟೆಗೆ ಇತ್ತೀಚೆಗೆ ಹತ್ಯೆಯಾದ ಹಿಂದೂ ಮಹಾಸಭಾ ಅಧ್ಯಕ್ಷ ಕಮಲೇಶ್ ತಿವಾರಿ ಕುಟುಂಬವನ್ನು ಭೇಟಿ ಆಗಲಿದ್ದಾರೆ.

ಇಂದು ಬೆಳಿಗ್ಗೆ 11 ಗಂಟೆಗೆ ಕಾಳಿದಾಸ್ ಮಾರ್ಗದ 5 ರಲ್ಲಿರುವ ಮುಖ್ಯಮಂತ್ರಿ ನಿವಾಸದಲ್ಲಿ ಕಮಲೇಶ್ ತಿವಾರಿ ಕುಟುಂಬಸ್ಥರನ್ನು ಯೋಗಿ ಆದಿತ್ಯನಾಥ್ ಭೇಟಿ ಮಾಡಲಿದ್ದಾರೆ. ರಾಜ್ಯದಲ್ಲಿ ಭೀತಿ ಮತ್ತು ಭಯದ ವಾತಾವರಣವನ್ನು ಸೃಷ್ಟಿಸಲು ಕಮಲೇಶ್ ತಿವಾರಿ ಅವರನ್ನು ಹತ್ಯೆ ಮಾಡಲಾಗಿದೆ ಎಂದು ಹೇಳಿರುವ ಸಿಎಂ, ತಪ್ಪಿತಸ್ಥರು ಯಾರೇ ಆಗಿರಲಿ ಶಿಕ್ಷೆಯಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ಕೊಲೆಯ ಬಗ್ಗೆ ತನಿಖೆ ನಡೆಸಲು ಎಸ್‌ಐಟಿಗೆ ನಿರ್ದೇಶನ ನೀಡಲಾಗಿದೆ ಎಂದು ಹೇಳಿದ್ದಾರೆ.

ರಾಜಕಾರಣಿ, ಹಿಂದೂ ಮಹಾಸಭಾದ ಅಧ್ಯಕ್ಷರಾಗಿದ್ದ ಕಮಲೇಶ್ ತಿವಾರಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಪೊಲೀಸರು ಐವರು ಆರೋಪಿಗಳನ್ನು ಬಂಧಿಸಿದ್ದಾರೆ. 

ಉತ್ತರ ಪ್ರದೇಶದ ಬಿಜ್ನೋರ್ ಜಿಲ್ಲೆಯ ಮೌಲಾನಾ ಅನ್ವರ್ಲ್ ಹಕ್, ಮುಫ್ತಿ ನಯೀಮ್ ಖಾಜ್ಮಿ, ಗುಜರಾತ್ ಮೂಲದ ಮೌಲಾನಾ ಮೊಹ್ಸಿನ್ ಶೇಖ್(24), ರಶೀದ್ ಅಹ್ಮದ್ ಪಠಾಣ್(23) ಮತ್ತು ಫೈಜಾನ್(21) ಎಂಬುವರನ್ನು ಉತ್ತರ ಪ್ರದೇಶ ಹಾಗೂ ಗುಜರಾತ್ ಪೊಲೀಸರ ಜಂಟಿ ಕಾರ್ಯಾಚರಣೆ ಮೂಲಕ 24 ಗಂಟೆಯೊಳಗೆ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.