ಚೀನಾ ಗಡಿಯಲ್ಲಿ ಇಂಡೋ-ಚೀನಾ ಪಡೆಗಳ ನಡುವೆ ಕಮಾಂಡರ್ ಮಟ್ಟದ ಸಭೆ

ಈ ಚರ್ಚೆಯಲ್ಲಿ ಭಾರತದ ವತಿಯಿಂದ ಸುಮಾರು 10 ಜನರು ಭಾಗವಹಿಸಲಿದ್ದಾರೆ. ಈ ಸಭೆ ಚೀನಾದ ಗಡಿಯಲ್ಲಿರುವ ಮೊಲ್ಡೊದಲ್ಲಿ ನಡೆಯಲಿದೆ.  

Last Updated : Jun 5, 2020, 01:44 PM IST
ಚೀನಾ ಗಡಿಯಲ್ಲಿ ಇಂಡೋ-ಚೀನಾ ಪಡೆಗಳ ನಡುವೆ ಕಮಾಂಡರ್ ಮಟ್ಟದ ಸಭೆ  title=

ನವದೆಹಲಿ: ಭಾರತ ಮತ್ತು ಚೀನಾ ಗಡಿಯಲ್ಲಿ ದಿನೇ ದಿನೇ ಉದ್ವಿಗ್ನತೆ ಹೆಚ್ಚಾಗುತ್ತಿದೆ. ಈ ಹಿನ್ನೆಲೆಯಲ್ಲಿ ನಾಳೆ ಜೂನ್ 6 ರಂದು ಬೆಳಿಗ್ಗೆ 8 ಗಂಟೆಗೆ ಭಾರತ ಮತ್ತು ಚೀನಾದ ಸೈನಿಕರ ನಡುವೆ ಕಮಾಂಡರ್ ಮಟ್ಟದ ಚರ್ಚೆ ನಡೆಯಲಿದೆ. ಆದಾಗ್ಯೂ ಇದು ಹವಾಮಾನದ ಮೇಲೆ ಅವಲಂಬಿತವಾಗಿರುತ್ತದೆ. ಹವಾಮಾನ ಉತ್ತಮವಾಗಿದ್ದರೆ ಮಾತ್ರ ಈ ಸಭೆ ನಡೆಯುತ್ತದೆ. ಈ ಚರ್ಚೆಯಲ್ಲಿ ಭಾರತದ ಸುಮಾರು 10 ಜನರು ಭಾಗವಹಿಸಲಿದ್ದಾರೆ. ಈ ಸಭೆ ಚೀನಾದ ಗಡಿಯಲ್ಲಿರುವ ಮೊಲ್ಡೊದಲ್ಲಿ ನಡೆಯಲಿದೆ.

ಜಮ್ಮು-ಕಾಶ್ಮೀರದಲ್ಲಿ ಭಯೋತ್ಪಾದನೆ ಚಟುವಟಿಕೆ ಹೆಚ್ಚಿಸಲು ಪಾಕಿಸ್ತಾನದ ಐಎಸ್‌ಐ ಸಂಚು

ನಾಳೆ ಜೂನ್ 6 ರಂದು ಭಾರತ ಮತ್ತು ಚೀನಾ (China) ಕಾರ್ಪ್ಸ್ ಕಮಾಂಡರ್ ಮಟ್ಟದಲ್ಲಿ ಚರ್ಚೆ ನಡೆಸಲಿವೆ. ಲೇಹ್‌ನಲ್ಲಿರುವ 14ನೇ ದಳದ ಕಮಾಂಡರ್ ಸಮಾನ ಸ್ಥಾನಮಾನದ ಚೀನಾದ ಅಧಿಕಾರಿಯೊಂದಿಗೆ ಚರ್ಚಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ. ಇದಕ್ಕೂ ಮೊದಲು ಭಾರತ ಮತ್ತು ಚೀನಾ ಸೇನೆ ನಡುವಿನ ಬ್ರಿಗೇಡಿಯರ್ ಮಟ್ಟದ ಮಾತುಕತೆಯಲ್ಲಿ ಯಾವುದೇ ಪರಿಹಾರ ಕಂಡುಬಂದಿಲ್ಲ. ಕಳೆದ ಒಂದು ತಿಂಗಳಿನಿಂದ ಎರಡೂ ದೇಶಗಳ ಸೈನ್ಯಗಳು ಲಡಾಖ್‌ನ ಪಂಗಂಗ್ ಸರೋವರದ ತೀರದಲ್ಲಿ ಮತ್ತು ಗಾಲ್ವಾನ್ ಕಣಿವೆಯಲ್ಲಿ ಮುಖಾಮುಖಿಯಾಗಿವೆ. 2017ರಲ್ಲಿ ಡೋಕ್ಲಾಮ್‌ನಲ್ಲಿ ಉಭಯ ದೇಶಗಳ ನಡುವೆ 73 ದಿನಗಳ ಉದ್ವಿಗ್ನತೆಯ ನಂತರ ಮೊದಲ ಬಾರಿಗೆ ವಾಸ್ತವಿಕ ನಿಯಂತ್ರಣ ರೇಖೆಯಲ್ಲಿ (LAC) ಬಳಿ ಇಷ್ಟು ದಿನ ಮಿಲಿಟರಿ ನಿಲುವು ಕಾಣಲಾಗುತ್ತಿದೆ.

ಪಾಕಿಸ್ತಾನದಲ್ಲಿ ಕೊರೊನಾವೈರಸ್‌ನಂತೆಯೇ ಹೆಚ್ಚುತ್ತಿವೆಯಂತೆ ಈ ಪ್ರಕರಣಗಳು

ಎರಡು ವಿಷಯಗಳ ಬಗ್ಗೆ ಭಾರತದ ನಿಲುವು ಸ್ಪಷ್ಟವಾಗಿದೆ ಮತ್ತು ಅದನ್ನು ಯಾವುದೇ ರೀತಿಯಲ್ಲಿ ರಾಜಿ ಮಾಡಿಕೊಳ್ಳಲು ಸಾಧ್ಯವಿಲ್ಲ ಎಂದು ಮೂಲಗಳು ತಿಳಿಸಿವೆ. ಮೊದಲನೆಯದಾಗಿ ಎಲ್‌ಎಸಿಯ ಮೂಲಸೌಕರ್ಯ ಕಾರ್ಯಗಳನ್ನು ನಿಲ್ಲಿಸಲಾಗುವುದಿಲ್ಲ ಅಥವಾ ನಿಧಾನಗೊಳಿಸಲಾಗುವುದಿಲ್ಲ ಮತ್ತು ಎರಡನೆಯದಾಗಿ ಗಾಲ್ವಾನ್ ಕಣಿವೆಯು ಪೂರ್ವ ಲಡಾಖ್‌ನ (Ladakh) ಅಕ್ಸಾಯ್ ಚಿನ್‌ನ ಹೊರವಲಯದಲ್ಲಿ ಚೀನಾವನ್ನು ಇನ್ನು ಮುಂದೆ ಯಾವುದೇ ವೆಚ್ಚದಲ್ಲಿ ಮುಂದುವರಿಸಲು ಅನುಮತಿಸುವುದಿಲ್ಲ. 

ಗಾಲ್ವಾನ್ ನದಿ ಕರಕೋರಂನ ಪೂರ್ವ ಭಾಗದಿಂದ ಹುಟ್ಟಿಕೊಂಡು ಅಕ್ಸಾಯ್ ಚಿನ್ ಬಯಲು ಪ್ರದೇಶಕ್ಕೆ ಹರಿಯುತ್ತದೆ ಮತ್ತು ನಂತರ ಶ್ಯೋಕ್‌ನನ್ನು ಸಂಧಿಸುತ್ತದೆ. ಕಳೆದ ವರ್ಷ ಲಡಾಖ್‌ನ ದೂರದ ಪ್ರದೇಶವಾದ ದೌಲತ್ ಬೇಗ್ ಓಲ್ಡಿ ಪ್ರದೇಶವನ್ನು ತಲುಪುವ ಡರ್ಬುಕ್-ಶ್ಯೋಕ್-ದೌಲತ್ ಬೇಗ್ ಓಲ್ಡಿ ಅಥವಾ ಡಿಎಸ್-ಡಿಬಿಒ ರಸ್ತೆಯನ್ನು ಭಾರತ ತೆರೆದಿದೆ. ಇದರಿಂದಾಗಿ ದೌಲತ್ ಬೇಗ್ ಓಲ್ಡಿಗೆ ಸೈನ್ಯ ಮತ್ತು ಉಪಕರಣಗಳನ್ನು ಕಳುಹಿಸುವುದು ತುಂಬಾ ಸುಲಭವಾಗಿದೆ.

ಚೀನಾದೊಂದಿಗೆ ಕೈ ಜೋಡಿಸಿ ಭಾರತದ ವಿರುದ್ಧ ಪಾಕಿಸ್ತಾನದ ಷಡ್ಯಂತ್ರ

ಗಾಲ್ವಾನ್ ಕಣಿವೆಯಲ್ಲಿ ಚೀನಾ ಮುಂದೆ ಬಂದರೆ ಈ ರಸ್ತೆ ಅಪಾಯದಲ್ಲಿದೆ ಮತ್ತು ದೌಲತ್ ಬೇಗ್ ಓಲ್ಡಿಯನ್ನು ಕತ್ತರಿಸುವುದು ಚೀನಾಕ್ಕೆ ಸುಲಭವಾಗುತ್ತದೆ. ಚೀನಾದೊಂದಿಗಿನ ಗಡಿ ವಿವಾದವನ್ನು ಬಗೆಹರಿಸಲು ಸಿದ್ಧರಿರುವುದಾಗಿ ಭಾರತ ಸ್ಪಷ್ಟಪಡಿಸಿದೆ. ಇದಕ್ಕಾಗಿ ಹಲವಾರು ಹಂತಗಳಲ್ಲಿ ಮಾತುಕತೆ ನಡೆಯುತ್ತಿದೆ, ಆದರೆ ಚೀನಾ ತನ್ನ ವಿಸ್ತರಣಾ ನೀತಿಯನ್ನು ಇನ್ನೂ ಬಿಟ್ಟುಕೊಡಲು ಸಿದ್ಧವಾಗಿಲ್ಲ. ಸೈನ್ಯವನ್ನು ಹೊರತುಪಡಿಸಿ ರಾಜತಾಂತ್ರಿಕ ಮಟ್ಟದಲ್ಲಿ ಚರ್ಚೆಗಳು ನಡೆಯುತ್ತಿವೆ, ಆದರೆ ಇಲ್ಲಿಯವರೆಗೆ ಯಾವುದೇ ಪರಿಹಾರ ಕಂಡುಬಂದಿಲ್ಲ.

Trending News