Coronavirus : ದೆಹಲಿ ಬಳಿಕ ಸಂಪೂರ್ಣ ಲಾಕ್ ಡೌನ್ ನತ್ತ ಮಹಾರಾಷ್ಟ್ರ.!

ಮಂಗಳವಾರ ಮುಖ್ಯಮಂತ್ರಿ ಉದ್ದವ್ ಠಾಕ್ರೆಯನ್ನು  ಭೇಟಿಯಾದ ಆರೋಗ್ಯ ಸಚಿವ ರಾಜೇಶ್ ಟೋಪೆ, ರಾಜ್ಯಾದ್ಯಂತ ಬುಧವಾರ ರಾತ್ರಿ 8 ಗಂಟೆಯಿಂದ ಸಂಪೂರ್ಣ ಲಾಕ್ ಡೌನ್ ಜಾರಿಗೊಳಿಸುವಂತೆ ಮನವಿ ಮಾಡಿದ್ದಾರೆ. 

Written by - Ranjitha R K | Last Updated : Apr 21, 2021, 10:46 AM IST
  • ಕರೋನಾ ದಾಳಿಗೆ ತತ್ತರಿಸಿಹೋಗಿರುವ ಮಹಾರಾಷ್ಟ್ರ
  • ಕಟ್ಟುನಿಟ್ಟಿನ ನಿಷೇಧವನ್ನು ಉಲ್ಲಂಘಿಸುತ್ತಿರುವ ಜನತೆ
  • ಬುಧವಾರ ರಾತ್ರಿಯಿಂದ ಸಂಪೂರ್ಣ ಲಾಕ್ ಡೌನ್ ಸಾಧ್ಯತೆ
Coronavirus : ದೆಹಲಿ ಬಳಿಕ ಸಂಪೂರ್ಣ ಲಾಕ್ ಡೌನ್ ನತ್ತ ಮಹಾರಾಷ್ಟ್ರ.!  title=
ಕರೋನಾ ದಾಳಿಗೆ ತತ್ತರಿಸಿಹೋಗಿರುವ ಮಹಾರಾಷ್ಟ್ರ (file photo)

ನವದೆಹಲಿ: ದೇಶದಲ್ಲಿ ಕರೋನಾ (Coronavirus) ಅಬ್ಬರಿಸುತ್ತಿದೆ. ದಿನಕ್ಕೆ 2.5 ಲಕ್ಷಕ್ಕೂ ಅಧಿಕ ಜನರಿಗೆ ಸೋಂಕು ಅಂಟುತ್ತಿದೆ. ಅಂದರೆ, ದೇಶದಲ್ಲಿ ಪ್ರತಿ ಗಂಟೆಗೆ ಹತ್ತುಸಾವಿರಕ್ಕೂ ಅಧಿಕ ಜನರ ಮೇಲೆ ಕರೋನಾ (COVID_19) ಮಹಾಮಾರಿ ದಾಳಿ ಇಡುತ್ತಿದೆ. ಮಹಾರಾಷ್ಟ್ರದಲ್ಲಿ ಕರೋನಾ ಆರ್ಭಟ ಅಧಿಕವಾಗಿದೆ. ದೆಹಲಿಯು ನಂತರದ ಸ್ಥಾನದಲ್ಲಿದೆ. ಕರ್ನಾಟಕದಲ್ಲೂ ಕರೋನಾ ಗಾಬರಿ ಹುಟ್ಟಿಸುವ ವೇಗದಲ್ಲಿ ಹರಡುತ್ತಿದೆ.   

ಮಹಾರಾಷ್ಟ್ರ  ಆರೋಗ್ಯ ಸಚಿವರು ಹೇಳಿದ್ದೇನು..?
ಮಂಗಳವಾರ ಮುಖ್ಯಮಂತ್ರಿ ಉದ್ದವ್ ಠಾಕ್ರೆಯನ್ನು (Uddhav Thackeray) ಭೇಟಿಯಾದ ಆರೋಗ್ಯ ಸಚಿವ ರಾಜೇಶ್ ಟೋಪೆ, ರಾಜ್ಯಾದ್ಯಂತ ಬುಧವಾರ ರಾತ್ರಿ 8 ಗಂಟೆಯಿಂದ ಸಂಪೂರ್ಣ ಲಾಕ್ ಡೌನ್ (Lockdown)ಜಾರಿಗೊಳಿಸುವಂತೆ ಮನವಿ ಮಾಡಿದ್ದಾರೆ.  ಬುಧವಾರ ರಾತ್ರಿ 8 ಗಂಟೆಯಿಂದ ಸಂಪೂರ್ಣ ಲಾಕ್ ಡೌನ್ ಜಾರಿಗೊಳಿಸುವಂತೆ ಮನವಿ ಮಾಡಿದ್ದೇನೆ. ಮುಂದಿನ ನಿರ್ಧಾರ ಮುಖ್ಯಮಂತ್ರಿಗೆ ಬಿಟ್ಟಿದ್ದು ಎಂದು ರಾಜೇಶ್ ಟೋಪೆ ಹೇಳಿದ್ದಾರೆ. 

ಇದನ್ನೂ ಓದಿ : Lockdown: ಕಾರ್ಮಿಕರಿಗೆ 5 ಸಾವಿರ ಆರ್ಥಿಕ ನೆರವು ನೀಡಲಿದೆ ಈ ಸರ್ಕಾರ

ಯಾವುದೇ ಕ್ಷಣದಲ್ಲಿ ಘೋಷಣೆ ಸಾಧ್ಯತೆ.!
ಮಹಾರಾಷ್ಟ್ರದಲ್ಲಿ  (Maharastra) ಸಂಪೂರ್ಣ ಲಾಕ್ ಡೌನ್ ಕುರಿತಂತೆ ಯಾವುದೇ ಕ್ಷಣದಲ್ಲಿ ಘೋಷಣೆ ಜಾರಿಯಾಗುವ ಸಾಧ್ಯತೆ ಇದೆ. ಉದ್ದವ್ ಠಾಕ್ರೆ ಬುಧವಾರವೇ ಈ ಸಂಬಂಧ ಘೋಷಣೆ ಮಾಡಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಕರೋನಾ ದಾಳಿಗೆ ಮಹಾರಾಷ್ಟ್ರ ತತ್ತರ :
ಕರೋನಾ (Coronavirus) ದಾಳಿಗೆ ಸಂಪೂರ್ಣ ತತ್ತರಿಸಿ ಹೋಗಿರುವ ಮಹಾರಾಷ್ಟ್ರ,ಅದರಿಂದ ಹೊರಬರಲು ಒದ್ದಾಡುತ್ತಿದೆ. ರಾಜ್ಯದಲ್ಲಿ 6.83 ಲಕ್ಷ ಕರೋನಾ ರೋಗಿಗಳಿದ್ದಾರೆ. ಆಮ್ಲಜನಕದ ಕೊರತೆ ಮುಗಿಲುಮುಟ್ಟಿದೆ. ರೆಮಿಡಿಸಿವರ್ ಔಷಧಿಯ ಕೊರತೆಯೂ ಕಾಡುತ್ತಿದೆ. ಕಟ್ಟು ನಿಟ್ಟಿನ ನಿಷೇಧ ಜಾರಿಗೊಳಿಸಲಾಗಿದೆಯಾದರೂ, ಜನರು ಅದನ್ನು ಖುಲ್ಲಂಖುಲ್ಲಾ ಉಲ್ಲಂಘಿಸುತ್ತಿದ್ದಾರೆ.

ಇದನ್ನೂ ಓದಿ : Coronavirus: ಈವರೆಗಿನ ಎಲ್ಲಾ ದಾಖಲೆ ಮುರಿದ ಕರೋನಾ ಸುನಾಮಿ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News