ಉಪವಾಸ ಮಾಡುವುದಾಗಿ ಹೇಳಿ ಅಪಹಾಸ್ಯಕ್ಕೊಳಗಾದ ಕಾಂಗ್ರೆಸ್ ನಾಯಕರು!

ಧರಣಿ ಉಪವಾಸ ಮಾಡುವುದಾಗಿ ಹೇಳಿ ಹೊಟ್ಟೆ ತುಂಬಾ ಪೂರಿ ತಿಂದು ಬಂದಿದ್ದು ಇದೀಗ ಬಹಿರಂಗವಾಗಿದ್ದು, ಈ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿದೆ. 

Last Updated : Apr 9, 2018, 06:40 PM IST
ಉಪವಾಸ ಮಾಡುವುದಾಗಿ ಹೇಳಿ ಅಪಹಾಸ್ಯಕ್ಕೊಳಗಾದ ಕಾಂಗ್ರೆಸ್ ನಾಯಕರು! title=

ನವದೆಹಲಿ: ಭಾರತೀಯ ಜನತಾ ಪಕ್ಷದ ನೀತಿಗಳನ್ನು ವಿರೋಧಿಸಿ ಕಾಂಗ್ರೆಸ್ ನಡೆಸುತ್ತಿರುವ ಉಪವಾಸ ಸತ್ಯಾಗ್ರಹ ಇದೀಗ ಅಪಹಾಸ್ಯಕ್ಕೀಡಾಗಿದೆ. ಧರಣಿ ಉಪವಾಸ ಮಾಡುವುದಾಗಿ ಹೇಳಿ ಹೊಟ್ಟೆ ತುಂಬಾ ಪೂರಿ ತಿಂದು ಬಂದಿದ್ದು ಇದೀಗ ಬಹಿರಂಗವಾಗಿದ್ದು, ಈ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿದೆ. 

ಇತ್ತೀಚಿಗೆ ಪೂರ್ಣಗೊಂಡ ಸಂಸತ್ ಬಜೆಟ್ ಅಧಿವೇಶನದಲ್ಲಿ ಯಾವುದೇ ಚರ್ಚೆ ಆಗಲಿಲ್ಲ, ಸಂಸತ್ತಿನ ಸಮಯ ವ್ಯರ್ಥವಾಗುತ್ತಿದೆ, ಎಸ್​ಸಿ-ಎಸ್​ಟಿ ಕಾಯ್ದೆ ತಿದ್ದುಪಡಿ, ಭಾರತ್ ಬಂದ್ ಸಂದರ್ಭದ ಹಿಂಸಾಚಾರ, ಸಿಬಿಎಸ್ಇ ಪ್ರಶ್ನೆ ಪತ್ರಿಕೆ ಸೋರಿಕೆ, ಪಂಜಾಬ್ ನ್ಯಾಷನಲ್ ಬ್ಯಾಂಕ್ ಹಗರಣ ಮೊದಲಾದ ವಿಷಯಗಳನ್ನು ಮುಂದಿಟ್ಟುಕೊಂಡು ಕೇಂದ್ರ ಸರ್ಕಾರದ ಆಡಳಿತವನ್ನು ವಿರೋಧಿಸಿ ಇಂದು ರಾಹುಲ್ ಗಾಂಧಿ ನೇತೃತ್ವದಲ್ಲಿ ಮಲ್ಲಿಕಾರ್ಜುನ ಖರ್ಗೆ ಸೇರಿದಂತೆ ಹಲವು ಕಾಂಗ್ರೆಸ್ ನಾಯಕರು ರಾಜಘಾಟ್'ನಲ್ಲಿ ಧರಣಿ ಉಪವಾಸ ನಡೆಸುತ್ತಿದ್ದಾರೆ. ಆದರೆ, ಇದಕ್ಕೂ ಮುನ್ನ ಕೆಲ ಕಾಂಗ್ರೆಸ್ ನಾಯಕರು ಹೋಟೆಲೊಂದರಲ್ಲಿ ಹೊಟ್ಟೆ ತುಂಬಾ ಪೂರಿ ತಿಂದಿದ್ದು, ಕಾಂಗ್ರೆಸ್ ಪಕ್ಷವನ್ನು ನಗೆಪಾಟಲಿಗೀಡುಮಾಡಿದೆ.

ಅಜಯ್ ಮಕೇನ್, ಹರೂನ್ ಯೂಸುಫ್ ಮತ್ತು ಅರವಿಂದ್ ಸಿಂಗ್ ಲವ್ಲಿ ಸೇರಿದಂತೆ ವಿವಿಧ ಕಾಂಗ್ರೆಸ್ ನಾಯಕರು ರೆಸ್ಟೋರೆಂಟ್ ವೊಂದರಲ್ಲಿ ಊಟ ಮಾಡುತ್ತಿರುವ ಫೋಟೋವನ್ನು ದೆಹಲಿ ಮಾಜಿ ಮುಖ್ಯಮಂತ್ರಿ ಮದನ್ ಲಾಲ್ ಖುರಾನ ಅವರ ಪುತ್ರ ಹಾಗೂ ಬಿಜೆಪಿ ನಾಯಕ ಹರೀಶ್ ಖುರಾನಾ ಅವರು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೆ ಮಾಡಿದ್ದು, ಹೊಟ್ಟೆ ತುಂಬಾ ಪುರಿ ತಿಂದು ಉಪವಾಸ ಮಾಡಿದರು ಎಂದು ಈ ಬಗ್ಗೆ ವ್ಯಂಗ್ಯವಾಡಿದ್ದಾರೆ. 

ಬಿಜೆಪಿಯ ಈ ಆರೋಪಕ್ಕೆ ಕಾಂಗ್ರೆಸ್ ನಾಯಕ ಅರವಿಂದ ಸಿಂಗ್ ಲವ್ಲಿ ಪತ್ರಿಕ್ರಿಯಿಸಿದ್ದು, ಈ ಫೋಟೋವನ್ನು ಬೆಳಿಗ್ಗೆ 8 ಗಂಟೆಗೆ ತೆಗೆಯಲಾಗಿದೆ. ಅಲ್ಲದೆ, ಕಾಂಗ್ರೆಸ್ ಬೆಳಿಗ್ಗೆ 10.30 ರಿಂದ ಸಂಜೆ 4.30ರವರೆಗೆ ಮಾತ್ರ ಧರಣಿ ಉಪವಾಸ ಹಮ್ಮಿಕೊಂಡಿದ್ದು, ಇದು ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ ಅಲ್ಲ ಎಂದು ಸಮರ್ಥಿಸಿಕೊಂಡಿದ್ದಾರೆ.

Trending News