Congress President Election: ಚುನಾವಣಾ ಕಣಕ್ಕೆ ಖರ್ಗೆ ಪ್ರವೇಶ! ಭಾರಿ ಕುತೂಹಲ ಮೂಡಿಸಿದ ಕಾಂಗ್ರೆಸ್ ಅಧ್ಯಕ್ಷೀಯ ಚುನಾವಣೆ

Congress President Election: ಪ್ರಸ್ತುತ ಕಾಂಗ್ರೆಸ್ ಹಿರಿಯ ನಾಯಕ ದಿಗ್ವಿಜಯ್ ಸಿಂಗ್ ಅವರು ಮಲ್ಲಿಕಾರ್ಜುನ್ ಖರ್ಗೆ ಅವರನ್ನು ಭೇಟಿ ಮಾಡಿದ್ದು, ಅವರು ಚುನಾವಣೆಗೆ ನಾಮಪತ್ರ ಸಲ್ಲಿಸದೆ ಇರುವ ನಿರ್ಧಾರ ಕೈಗೊಳ್ಳುವ ಸಾಧ್ಯತೆ ಇದೆ. ಹೀಗಿರುವಾಗ ಅಧ್ಯಕ್ಷ ಸ್ಥಾನದ ಚುನಾವಣೆಯಲ್ಲಿ ಮಲ್ಲಿಕಾರ್ಜುನ್ ಖರ್ಗೆ ಹಾಗೂ ಶಶಿ ತರೂರ್ ಅವರ ಮಧ್ಯೆ ನೇರ ಹಣಾಹಣಿ ನಡೆಯುವ ಸಾಧ್ಯತೆಯನ್ನು ವರ್ತಿಸಲಾಗುತ್ತಿದೆ.  

Written by - Nitin Tabib | Last Updated : Sep 30, 2022, 01:25 PM IST
  • ಹೊಸ ಅಪ್ಡೇಟ್: ಕಾಂಗ್ರೆಸ್ ಸಂಸದ ಶಶಿ ತರೂರ್ ಕೆಲವೇ ಸಮಯದಲ್ಲಿ
  • ಅಧ್ಯಕ್ಷ ಸ್ಥಾನಕ್ಕೆ ತಮ್ಮ ನಾಮಪತ್ರ ದಾಖಲಿಸಲಿದ್ದಾರೆ.
  • ಇದಕ್ಕಾಗಿ ಅವರು ಕಾಂಗ್ರೆಸ್ ಮುಖ್ಯ ಕಛೇರಿಯನ್ನು ತಲುಪಲು ತಮ್ಮ ಮನೆಯಿಂದ ತೆರಳಿದ್ದಾರೆ ಎನ್ನಲಾಗಿದೆ.
Congress President Election: ಚುನಾವಣಾ ಕಣಕ್ಕೆ ಖರ್ಗೆ ಪ್ರವೇಶ! ಭಾರಿ ಕುತೂಹಲ ಮೂಡಿಸಿದ ಕಾಂಗ್ರೆಸ್ ಅಧ್ಯಕ್ಷೀಯ ಚುನಾವಣೆ title=
Congress President Election

Congress President Election: ಕಾಂಗ್ರೆಸ್ ಅಧ್ಯಕ್ಷೀಯ ಚುನಾವಣಾ ರಂಗ ಟಿ20 ಕ್ರಿಕೆಟ್ ಪಂದ್ಯದ ಸ್ವರೂಪ ಪಡೆದುಕೊಳ್ಳುತ್ತಿದೆ.ಪ್ರತಿ ಓವರ್‌ಗೆ ಚಿತ್ರಣವು ಬದಲಾಗುತ್ತಿದೆ. ಅಶೋಕ್ ಗೆಹ್ಲೋಟ್ ಅಧ್ಯಕ್ಷ ಸ್ಥಾನದ ರೇಸ್‌ನಿಂದ ಹೊರಗೆ ಹೋದ ಬಳಿಕ, ಪಕ್ಷದ ಮತ್ತೋರ್ವ ಹಿರಿಯ ಮುಖಂಡ ದಿಗ್ವಿಜಯ್ ಸಿಂಗ್ ಅವರ ಹೆಸರು ಕೇಳಿಬರಲಾರಂಭಿಸಿತ್ತು. ಆದರೆ ಇದೀಗ ಈ ಕಣಕ್ಕೆ ಮಲ್ಲಿಕಾರ್ಜುನ ಖರ್ಗೆ ಕೂಡ ಎಂಟ್ರಿ ಕೊಟ್ಟಿದ್ದಾರೆ. ಅಷ್ಟೇ ಅಲ್ಲ, ಈಗ ಅವರ ಹೆಸರಿಗೆ ಸರ್ವಾನುಮತದ ಒಪ್ಪಿಗೆ ಪಡೆಯುವ ಯತ್ನಗಳು ಕೂಡ ಮುಂದುವರೆದಿವೆ ಎನ್ನಲಾಗುತ್ತಿದೆ. ದಿಗ್ವಿಜಯ್ ಸಿಂಗ್ ಅವರು ಮಲ್ಲಿಕಾರ್ಜುನ ಖರ್ಗೆ ಅವರನ್ನು ಭೇಟಿ ಮಾಡಿದ್ದು, ನಾಮಪತ್ರ ಸಲ್ಲಿಸದಿರುವ ನಿರ್ಧಾರ ಕೈಗೊಳ್ಳುವ ಸಾಧ್ಯತೆ ಇದೆ. ಹೀಗಿರುವಾಗ ಅಧ್ಯಕ್ಷ ಸ್ಥಾನಕ್ಕೆ ಮಲ್ಲಿಕಾರ್ಜುನ ಖರ್ಗೆ ಮತ್ತು ಶಶಿ ತರೂರ್ ನಡುವೆ ನೇರ ಹಣಾಹಣಿ ಏರ್ಪಡಲಿದೆ.

ಶಶಿ ತರೂರ್ ಅವರನ್ನು ಬಂಡಾಯ ಜಿ-23 ನಾಯಕ ಎಂದು ಪರಿಗಣಿಸಲಾಗುತ್ತದೆ, ಮಲ್ಲಿಕಾರ್ಜುನ ಖರ್ಗೆ ಗಾಂಧಿ ಕುಟುಂಬಕ್ಕೆ ನಿಷ್ಠರಾಗಿದ್ದಾರೆ ಎಂಬುದು ಸ್ಪಷ್ಟವಾಗಿದೆ. ಅಶೋಕ್ ಗೆಹ್ಲೋಟ್ ಅವರ ಬಂಡಾಯದ ವರ್ತನೆಯ ನಂತರ, ಇದೀಗ ಅವರು ಗಾಂಧಿ ಕುಟುಂಬ ಮತ್ತು ಪಕ್ಷದ ಆಯ್ಕೆಯಾಗಿ ಹೊರಹೊಮ್ಮುವ ಸಾಧ್ಯತೆ ಇದೆ. ಇನ್ನೊಂದೆಡೆ ದಕ್ಷಿಣ ಭಾರತ ಪ್ರಬಲ ಕಾಂಗ್ರೆಸ್ ನಾಯಕರು ಅವರಾಗಿದ್ದಾರೆ, ಅಲ್ಲಿ ಪಕ್ಷವು ಬಲವಾದ ನೆಲೆಯನ್ನು ಸ್ಥಾಪಿಸಲು ಪ್ರಯತ್ನಿಸುತ್ತಿದೆ. ಇದಲ್ಲದೆ, ಅವರು ವಿವಾದಗಳನ್ನು ಮೀರಿ ನಿಂತಿದ್ದಾರೆ, ಆದರೆ ದಿಗ್ವಿಜಯ್ ಸಿಂಗ್ ತಮ್ಮ ಹೇಳಿಕೆಗಳಿಂದ ಸುದ್ದಿಯಲ್ಲಿದ್ದಾರೆ. ಅಧ್ಯಕ್ಷ ಸ್ಥಾನದ ರೇಸ್‌ನಲ್ಲಿ ಮಲ್ಲಿಕಾರ್ಜುನ ಖರ್ಗೆ ಅವರ ಹೆಸರು ಏಕಾಏಕಿ ಕೇಳಿ ಬಂದಿದ್ದು, ಅವರೇ ಗೆಲ್ಲಬಹುದು ಎಂಬುದು ಕಾಂಗ್ರೆಸ್‌ನಲ್ಲಿ ನಡೆಯುತ್ತಿರುವ ಬೆಳವಣಿಗೆಗಳಿಂದ ನಿಚ್ಚಳವಾಗುತ್ತಿದೆ.

ಇದನ್ನೂ ಓದಿ-Rajasthan Political Crisis: ಕೆಲವೇ ಸಮಯದಲ್ಲಿ ಸೋನಿಯಾ ಜೊತೆಗೆ ಸಚಿನ್ ಪೈಲಟ್ ಭೇಟಿ, ಹೊರಬೀಳುತ್ತಾ ಮಹತ್ವದ ನಿರ್ಧಾರ?

ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ ಕೂಡ ಶುಕ್ರವಾರ ಸಂಜೆಯೊಳಗೆ ಅಧ್ಯಕ್ಷ ಸ್ಥಾನದ ಬಗ್ಗೆ ನಿರ್ಧಾರ ಕೈಗೊಳ್ಳುವುದಾಗಿ ಗುರುವಾರ ಹೇಳಿದ್ದರು. ಕೊನೆಯ ಸುತ್ತಿನವರೆಗೂ ಏನು ಬೇಕಾದರೂ ನಡೆಯಬಹುದು ಎಂಬುದು ಅವರ ಹೇಳಿಕೆಯಿಂದ ಸ್ಪಷ್ಟವಾಗಿತ್ತು. ದಿಗ್ವಿಜಯ್ ಸಿಂಗ್ ಅವರೇ ಖುದ್ದು ನಾಮಪತ್ರ ಸ್ವೀಕರಿಸಿ, ನಾಳೆಯೊಳಗೆ ನನ್ನ ನಾಮಪತ್ರ ಸಲ್ಲಿಕೆಯಾಗುತ್ತದೋ ಇಲ್ಲವೋ ಎಂಬುದನ್ನು ನಿರ್ಧರಿಸಲಾಗುವುದು ಎಂದಿದ್ದರು. ಇದೀಗ ಮಲ್ಲಿಕಾರ್ಜುನ ಖರ್ಗೆ ಅವರನ್ನು ದಿಗ್ವಿಜಯ್ ಸಿಂಗ್ ಭೇಟಿಯಾಗಿ ಕಣದಿಂದ ಹಿಂದೆ ಸರಿಯಬಹುದು ಎಂಬ ಸಂಕೇತಗಳನ್ನು ನೀಡಿದ್ದಾರೆ. ಏತನ್ಮಧ್ಯೆ, ರಾಜಸ್ಥಾನದಲ್ಲೂ ದೊಡ್ಡ ಬದಲಾವಣೆಗಳನ್ನು ನಿರೀಕ್ಷಿಸಲಾಗಗುತ್ತಿದೆ. ಸ್ಪೀಕರ್ ಹುದ್ದೆಯ ನಂತರ ಯಾವಾಗ ಬೇಕಾದರೂ ಶಾಸಕಾಂಗ ಪಕ್ಷದ ಸಭೆ ನಡೆಸಿ ನೂತನ ಸಿಎಂ ಕುರಿತು ನಿರ್ಣಯ ಅಂಗೀಕರಿಸುವ ಸಾಧ್ಯತೆ ಇದೆ.

ಇದನ್ನೂ ಓದಿ-October 1, 2023 ರಿಂದ ಪ್ರಯಾಣಿಕ ಕಾರುಗಳಲ್ಲಿ 6 ಏರ್ ಏರ್‌ಬ್ಯಾಗ್‌ಗಳ ನಿಯಮ ಕಡ್ಡಾಯ: ನಿತೀನ್ ಗಡ್ಕರಿ

ಹೊಸ ಅಪ್ಡೇಟ್: ಕಾಂಗ್ರೆಸ್ ಸಂಸದ ಶಶಿ ತರೂರ್ ಕಾಂಗ್ರೆಸ್ ಮುಖ್ಯ ಕಚೇರಿಗೆ ತಲುಪಿ ಅಧ್ಯಕ್ಷ ಸ್ಥಾನಕ್ಕೆ ತಮ್ಮ ನಾಮಪತ್ರ ದಾಖಲಿಸಿದ್ದಾರೆ.  ಇನ್ನೊಂದೆಡೆ ರಾಜಸ್ಥಾನದ ಮುಖ್ಯಮಂತ್ರಿಯಾಗಿರುವ ಅಶೋಕ್ ಗೆಹಲೋಟ್ ಕೂಡ ಅಧ್ಯಕ್ಷ ಸ್ಥಾನದ ಅಭ್ಯರ್ಥಿಯಾಗಲು ಹೊರಟಿರುವ ಮಲ್ಲಿಕಾರ್ಜುನ್ ಖರ್ಗೆ ಅವರನ್ನು ಭೇಟಿ ಮಾಡಿದ್ದಾರೆ. ಈ ಕುರಿತು ಮಾತನಾಡಿರುವ ಅವರು, ಖರ್ಗೆ ಓರ್ವ ಅನುಭವಿ ನಾಯಕರಾಗಿದ್ದಾರೆ ಮತ್ತು ತಾವು ಅವರನ್ನು ಭೇಟಿಯಾಗಿರುವುದಾಗಿ ಹೇಳಿದ್ದಾರೆ. ಇನ್ನೊಂದೆಡೆ ಖರ್ಗೆ ನಾಮಪತ್ರ ಸಲ್ಲಿಕೆಯ ಕುರಿತು ಮಾತನಾಡಿರುವ ಪ್ರಮೋದ್ ತಿವಾರಿ, ಒಂದು ವೇಳೆ ಮಲ್ಲಿಕಾರ್ಜುನ್ ಖರ್ಗೆ ನಾಮಪತ್ರ ದಾಖಲಿಸಿದರೆ, ನಾನು ಅವರ ಪ್ರಸ್ತಾಪಕನಾಗಲು ಸಿದ್ಧ ಎಂದಿದ್ದಾರೆ. ಪಿ.ಎಲ್ ಪುನಿಯಾ ಹಾಗೂ ಅಖಿಲೇಶ್ ಸಿಂಗ್ ಕೂಡ ಮಲ್ಲಿಕಾರ್ಜುನ್ ಖರ್ಗೆ ಅವರ ಪ್ರಸ್ತಾಪಕರಾಗಲಿದ್ದಾರೆ.

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News