ಪಾಟ್ನಾ: ಬಿಹಾರದಲ್ಲಿ ದರ್ಭಾಂಗ್ ಕ್ಷೇತ್ರದ ವಿಚಾರವಾಗಿ ಕಾಂಗ್ರೆಸ್-ಆರ್ಜೆಡಿ ಮಹಾಘಟಬಂಧನ್ ನಲ್ಲಿ ಒಡಕು ಮೂಡಿದೆ ಎಂಬ ವದಂತಿಯನ್ನು ಕಾಂಗ್ರೆಸ್ ನಾಯಕರು ತಳ್ಳಿಹಾಕಿದ್ದಾರೆ.
ಬಿಹಾರದಲ್ಲಿ ಕಾಂಗ್ರೆಸ್-RJD ನಡುವಿನ ಮಹಾಘಟಬಂಧನ್ ಮುಂದುವರಿಯುತ್ತದೆ. ಸೀಟು ಹಂಚಿಕೆ ಬಗೆಗಿನ ವಿವಾದಗಳು ಬಗೆಹರಿದಿದ್ದು, ಶೀಘ್ರದಲ್ಲೇ ಅಭ್ಯರ್ಥಿಗಳ ಹೆಸರನ್ನು ಘೋಷಿಸಲಾಗುವುದು ಎಂದು ಝೀ ನ್ಯೂಸ್ ಗೆ ಮೈತ್ರಿ ಪಕ್ಷದ ಮೂಲಗಳು ತಿಳಿಸಿವೆ.
ಬಿಹಾರ ಕಾಂಗ್ರೆಸ್ ಪ್ರಮುಖ ನಾಯಕರೊಂದಿಗೆ ಇಂದು ಸಭೆ ನಡೆಸಿದ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ, ಮಾಜಿ ಟೆಸ್ಟ್ ಕ್ರಿಕೆಟಿಗ ಕೀರ್ತಿ ಆಜಾದ್ ಪ್ರತಿನಿಧಿಸಿದ್ದ ಧರ್ಬಾಂಗ್ ಲೋಕಸಭಾ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಮೈತ್ರಿ ಪಕ್ಷದ ನಡುವೆ ಮೂಡಿದ್ದ ಭಿನ್ನಮತ ಶಮನ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.