ದೇಶದಲ್ಲಿ ಏರುತ್ತಿದೆ ಕೊರೊನಾ: ಕಳೆದ 24ಗಂಟೆಯಲ್ಲಿ ಏರಿಕೆಯಾಯ್ತು ಮಹಾಮಾರಿ ಪ್ರಕರಣ!

ಕೊರೊನಾ ವೈರಸ್‌ ಹರಡುವಿಕೆಯ ವೇಗವು ಹೆಚ್ಚಾಗುತ್ತಿದೆ. ಆದರೆ ಕಳೆದ 3 ದಿನಗಳಿಗೆ ಹೋಲಿಸಿದರೆ ಕೊಂಚ ಕಡಿಮೆ ಎಂದು ಹೇಳಬಹುದು. ಸದ್ಯ ದೇಶದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 4,32,36,695ಕ್ಕೆ ಏರಿಕೆಯಾಗಿದೆ. ಇನ್ನು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವವರ ಸಂಖ್ಯೆ 50,548ಕ್ಕೆ ಏರಿದೆ.    

Written by - Bhavishya Shetty | Last Updated : Jun 14, 2022, 12:01 PM IST
  • ಕೊರೊನಾ ವೈರಸ್‌ ಹರಡುವಿಕೆಯ ವೇಗವು ಹೆಚ್ಚಾಗುತ್ತಿದೆ
  • ಗುಣಮುಖರಾಗುತ್ತಿರುವ ಜನರ ಪ್ರಮಾಣವು 98.67 ಪ್ರತಿಶತದಷ್ಟಿದೆ
  • ಸಾವಿನ ಪ್ರಮಾಣ 1.21 ಪ್ರತಿಶತದಷ್ಟಿದೆ.
ದೇಶದಲ್ಲಿ ಏರುತ್ತಿದೆ ಕೊರೊನಾ: ಕಳೆದ 24ಗಂಟೆಯಲ್ಲಿ ಏರಿಕೆಯಾಯ್ತು ಮಹಾಮಾರಿ ಪ್ರಕರಣ!  title=
Corona New Case

ದೇಶದಲ್ಲಿ ಮತ್ತೊಮ್ಮೆ ಕೊರೊನಾ ಸೋಂಕಿನ ಪ್ರಕರಣಗಳು ಹೆಚ್ಚಾಗುತ್ತಿವೆ. ಆದರೆ ಕಳೆದ 3 ದಿನಗಳಿಗೆ ಹೋಲಿಸಿದರೆ ಇಂದು ಕೊಂಚ ರಿಲೀಫ್ ಸಿಕ್ಕಿದೆ. ಕಳೆದ 24 ಗಂಟೆಗಳಲ್ಲಿ ಭಾರತದಲ್ಲಿ 6,594 ಹೊಸ ಕೋವಿಡ್-19 ಪ್ರಕರಣಗಳು ದಾಖಲಾಗಿವೆ.

ಇದನ್ನು ಓದಿ: Jack Manju: ನಿರ್ಮಾಪಕ ಜಾಕ್‌ ಮಂಜು ಆಸ್ಪತ್ರೆಗೆ ದಾಖಲು

ಕೊರೊನಾ ವೈರಸ್‌ ಹರಡುವಿಕೆಯ ವೇಗವು ಹೆಚ್ಚಾಗುತ್ತಿದೆ. ಆದರೆ ಕಳೆದ 3 ದಿನಗಳಿಗೆ ಹೋಲಿಸಿದರೆ ಕೊಂಚ ಕಡಿಮೆ ಎಂದು ಹೇಳಬಹುದು. ಸದ್ಯ ದೇಶದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 4,32,36,695ಕ್ಕೆ ಏರಿಕೆಯಾಗಿದೆ. ಇನ್ನು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವವರ ಸಂಖ್ಯೆ 50,548ಕ್ಕೆ ಏರಿದೆ.  

ಕೇಂದ್ರ ಆರೋಗ್ಯ ಸಚಿವಾಲಯದ ಅಂಕಿಅಂಶಗಳ ಪ್ರಕಾರ, ಚಿಕಿತ್ಸೆಯ ಪಡೆಯುತ್ತಿರುವ ರೋಗಿಗಳ ಸಂಖ್ಯೆ ಒಟ್ಟು ಸೋಂಕಿನ ಪ್ರಕರಣಗಳಲ್ಲಿ 0.12 ಪ್ರತಿಶತದಷ್ಟಿದೆ.  ಇನ್ನು ಕೋವಿಡ್ -19 ನಿಂದ ಗುಣಮುಖರಾಗುತ್ತಿರುವ ಜನರ ಪ್ರಮಾಣವು 98.67 ಪ್ರತಿಶತದಷ್ಟಿದೆ. ಕಳೆದ 24 ಗಂಟೆಗಳಲ್ಲಿ, ಕೋವಿಡ್ -19 ಗೆ ಚಿಕಿತ್ಸೆ ಪಡೆಯುತ್ತಿರುವ ರೋಗಿಗಳ ಸಂಖ್ಯೆಯಲ್ಲಿ 2,553 ಪ್ರಕರಣಗಳು ಏರಿಕೆಯಾಗಿದೆ.

ಇದನ್ನು ಓದಿ: Morning Astro Tips: ಬ್ರಹ್ಮ ಮುಹೂರ್ತದಲ್ಲಿ ಮಾಡೋ ಈ ತಪ್ಪುಗಳು ನಿಮ್ಮ ದಿನವನ್ನು ಹಾಳುಮಾಡಬಹುದು!

ಮಾಹಿತಿಗಳ ಪ್ರಕಾರ, ಸೋಂಕಿನ ದೈನಂದಿನ ದರವು 2.05 ಪ್ರತಿಶತದಷ್ಟು ಹೆಚ್ಚಾಗುತ್ತಿದೆ. ಇಲ್ಲಿವರೆಗೆ  4,26,61,370 ಮಂದಿ ಕೊರೊನಾದಿಂದ ಗುಣಮುಖರಾಗಿದ್ದಾರೆ. ಆದರೆ ಸಾವಿನ ಪ್ರಮಾಣ 1.21 ಪ್ರತಿಶತದಷ್ಟಿದೆ. ರಾಷ್ಟ್ರವ್ಯಾಪಿ ಕೋವಿಡ್-19 ಲಸಿಕೆ ಅಭಿಯಾನದಡಿ ಇದುವರೆಗೆ 195.35 ಕೋಟಿ ಡೋಸ್‌ಗಳನ್ನು ನೀಡಲಾಗಿದೆ.

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.
  

 

Trending News