ಮೊದಲ ಡೋಸ್ Vaccine ಬಳಿಕ ಎರಡನೇ ಡೋಸ್ ಹಾಕುವ ಹೊತ್ತಿಗೆ ಸ್ಟಾಕ್ ಕೊನೆಗೊಂಡರೆ, ಮುಂದೆ?

ಯುಕೆ ಆರೋಗ್ಯ ಇಲಾಖೆಯ ಮಾರ್ಗಸೂಚಿಯ ಪ್ರಕಾರ ಒಬ್ಬ ವ್ಯಕ್ತಿಯು ಮೊದಲಿಗೆ ಒಂದು ಕಂಪನಿಯ ಕರೋನಾ ಲಸಿಕೆ ಡೋಸ್ ತೆಗೆದುಕೊಂಡಿದ್ದು, ಎರಡನೇ ಡೋಸ್ ತೆಗೆದುಕೊಳ್ಳುವ ಹೊತ್ತಿಗೆ ಅದೇ ಕಂಪನಿಯ ಲಸಿಕೆ ಇಲ್ಲದಿದ್ದರೆ ಅಂದರೆ ಸ್ಟಾಕ್ ಇಲ್ಲದಿದ್ದರೆ ಆ ವ್ಯಕ್ತಿಗೆ ಮತ್ತೊಂದು ಕಂಪನಿಯ ಲಸಿಕೆ ಹಾಕಬೇಕು. ಇದಕ್ಕೆ ಮಿಕ್ಸ್ ಮತ್ತು ಮ್ಯಾಚ್ ವ್ಯಾಕ್ಸಿನೇಷನ್ (Mix and Match Vaccination) ಎಂದು ಹೆಸರಿಸಲಾಗಿದೆ.

Written by - Yashaswini V | Last Updated : Jan 5, 2021, 02:59 PM IST
  • ಲಸಿಕೆ ದಾಸ್ತಾನು ಉಳಿಸಿಕೊಳ್ಳುವುದು ಈಗ ಸರ್ಕಾರದ ಮುಂದಿರುವ ದೊಡ್ಡ ಸವಾಲು
  • ಮಿಕ್ಸ್ ಅಂಡ್ ಮ್ಯಾಚ್ ವಿಧಾನವು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ ಎಂದು ಬ್ರಿಟನ್‌ನ ವಿಜ್ಞಾನಿಗಳು ಭಾವಿಸಿರಬೇಕು
  • ಮಿಕ್ಸ್ ಅಂಡ್ ಮ್ಯಾಚ್ ವ್ಯಾಕ್ಸಿನೇಷನ್ ಕ್ಲಿನಿಕಲ್ ಪ್ರಯೋಗವು ಯುಕೆಯಲ್ಲಿಯೂ ನಡೆಯುತ್ತಿದೆ
ಮೊದಲ ಡೋಸ್ Vaccine ಬಳಿಕ ಎರಡನೇ ಡೋಸ್ ಹಾಕುವ ಹೊತ್ತಿಗೆ ಸ್ಟಾಕ್ ಕೊನೆಗೊಂಡರೆ, ಮುಂದೆ? title=
'Mix and Match Vaccination

ನವದೆಹಲಿ: ಕರೋನಾ ಲಸಿಕೆಯ ತುರ್ತು ಬಳಕೆಗೆ ಅನುಮೋದನೆ ನೀಡಿದ ನಂತರ ಲಸಿಕೆ ದಾಸ್ತಾನು ಉಳಿಸಿಕೊಳ್ಳುವುದು ಈಗ ಸರ್ಕಾರದ ಮುಂದಿರುವ ದೊಡ್ಡ ಸವಾಲಾಗಿದೆ. ಇದರಿಂದ ಜನರು ಸರಿಯಾದ ಸಮಯದಲ್ಲಿ 2 ಡೋಸ್ ಲಸಿಕೆ ಪಡೆಯಬಹುದು. ಈ ಸಂಚಿಕೆಯಲ್ಲಿ ಯುಕೆ ಆರೋಗ್ಯ ಇಲಾಖೆ ಮಾರ್ಗಸೂಚಿಯನ್ನು (Britain Corona Vaccine Guidelines) ಬಿಡುಗಡೆ ಮಾಡಿದೆ, ಅದು ಈಗ ಚರ್ಚೆಯ ಕೇಂದ್ರವಾಗಿದೆ.

ಈ ಮಾರ್ಗಸೂಚಿಯ ಪ್ರಕಾರ ಒಬ್ಬ ವ್ಯಕ್ತಿಯು ಒಂದು ಕಂಪನಿಯಿಂದ ಮೊದಲ ಡೋಸ್  ಕರೋನಾ ಲಸಿಕೆ (Corona Vaccine) ಯನ್ನು ಪಡೆದಿದ್ದರೆ ಮತ್ತು ಆ ಕಂಪನಿಯ ಲಸಿಕೆಯ ಸಂಗ್ರಹವು ಎರಡನೇ ಡೋಸ್ ಸಮಯದಲ್ಲಿ ಖಾಲಿಯಾಗಿದ್ದರೆ, ಆ ವ್ಯಕ್ತಿಗೆ ಮತ್ತೊಂದು ಕಂಪನಿಯ ಕರೋನಾ ಲಸಿಕೆ ಹಾಕಬಹುದು. ಇದಕ್ಕೆ ತಾರ್ಕಿಕವಾಗಿ ಪ್ರತಿಕ್ರಿಯಿಸಿರುವ ಬ್ರಿಟಿಷ್ ಆಡಳಿತ ಮೊದಲನೇ ಡೋಸ್ ಹಾಕಿರುವ ಲಸಿಕೆ ಸ್ಟಾಕ್ ಖಾಲಿಯಾಗಿದ್ದಾಗ ಬೇರೆ ಏನೂ ಇಲ್ಲ ಎನ್ನುವುದಕ್ಕಿಂತ ಬೇರೆ ಲಸಿಕೆ ಹಾಕಿಸಿಕೊಳ್ಳುವುದು ಉತ್ತಮ ಎಂದು ತಿಳಿಸಿದೆ.

ಎರಡು ಲಸಿಕೆಗಳನ್ನು ಅನುಮೋದಿಸಲಾಗಿದೆ : 
ಅಲ್ಲದೆ ಅದೇ ಮಾರ್ಗಸೂಚಿಯಲ್ಲಿ ಎರಡು ಕರೋನಾ ಲಸಿಕೆಗಳಾದ ಫಿಜರ್ (Pfizer) ಮತ್ತು ಆಕ್ಸ್‌ಫರ್ಡ್-ಅಸ್ಟ್ರಾಜೆನೆಕಾಗಳ  (Oxford-AstraZeneca) ತುರ್ತು ಅನುಮೋದನೆಯನ್ನು ಬ್ರಿಟನ್ ಪಡೆದುಕೊಂಡಿದೆ.    ಲಸಿಕೆ ಪಡೆದ ವ್ಯಕ್ತಿಯು ತಾನು ಮೊದಲು ಹಾಕಿಸಿಕೊಂಡಿರುವ ಡೋಸ್ ಯಾವ ಕಂಪೆನಿಯದ್ದು ಎಂದು ಮರೆತಿದ್ದರೆ ಅನುಮೋದಿತ ಎರಡೂ ಲಸಿಕೆಗಳಲ್ಲಿ ಒಂದನ್ನು ಹಾಕಬಹುದು ಎಂದು ಸಹ ಹೇಳಲಾಗಿದೆ.

ಇದನ್ನೂ ಓದಿ : Corona Vaccine ಅಡ್ಡಪರಿಣಾಮಗಳು ಕಂಡುಬಂದರೆ ಸಿಗಲಿದೆ ಪರಿಹಾರ: AIIMS ನಿರ್ದೇಶಕ

ಮಿಕ್ಸ್ ಅಂಡ್ ಮ್ಯಾಚ್ ವ್ಯಾಕ್ಸಿನೇಷನ್ (Mix and Match Vaccination) : 
ಬ್ರಿಟನ್‌ನ ಆರೋಗ್ಯ ಇಲಾಖೆ ಇದಕ್ಕೆ ಮಿಕ್ಸ್ ಅಂಡ್ ಮ್ಯಾಚ್ ವ್ಯಾಕ್ಸಿನೇಷನ್ ಎಂದು ಹೆಸರಿಸಿದೆ. ಬ್ರಿಟನ್‌ನ ಈ ತರ್ಕವು ವಿಶ್ವದಾದ್ಯಂತ ವಿಜ್ಞಾನಿಗಳಲ್ಲಿ ಪ್ರತ್ಯೇಕ ಚರ್ಚೆಯನ್ನು ಸೃಷ್ಟಿಸಿದೆ. ಈ ಇಡೀ ವಿಷಯದ ಬಗ್ಗೆ ಸಿಎಸ್ಐಆರ್ ನಿರ್ದೇಶಕ ಶೇಖರ್ ಮಾಂಡೆ ಹೇಳುವಂತೆ ಇದು ಆಶ್ಚರ್ಯಕರ ಸಂಗತಿಯಾಗಿದೆ. ಏಕೆಂದರೆ ವಿಜ್ಞಾನ ಜಗತ್ತಿನಲ್ಲಿ ಇದು ಎಂದಿಗೂ ಸಂಭವಿಸಿಲ್ಲ. ಮಿಕ್ಸ್ ಅಂಡ್ ಮ್ಯಾಚ್ ವಿಧಾನವು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ ಎಂದು ಬ್ರಿಟನ್‌ನ ವಿಜ್ಞಾನಿಗಳು ಭಾವಿಸಿರಬೇಕು, ಅದಕ್ಕಾಗಿಯೇ ಅವರು ಈ ನಿರ್ಧಾರ ಕೈಗೊಂಡಿರಬಹುದು ಎಂದು ಅವರು ತಿಳಿಸಿದ್ದಾರೆ.

ಫಾರ್ಮುಲಾ ಕ್ಲಿನಿಕಲ್ ಪ್ರಯೋಗದಲ್ಲಿದೆ :
ನಾವು ಈಗ ಪೂರ್ವಾಗ್ರಹ ಪೀಡಿತರಾಗಬಾರದು ಎಂದು ಡಾ. ಶೇಖರ್ ಮಾಂಡೆ ಹೇಳಿದ್ದಾರೆ. ಏಕೆಂದರೆ ಮಿಕ್ಸ್ ಅಂಡ್ ಮ್ಯಾಚ್ ವ್ಯಾಕ್ಸಿನೇಷನ್ ಕ್ಲಿನಿಕಲ್ ಪ್ರಯೋಗವು ಯುಕೆಯಲ್ಲಿಯೂ ನಡೆಯುತ್ತಿದೆ. ಇದರಲ್ಲಿ ಜನರಿಗೆ ಎರಡು ಡೋಸ್ ಒಂದು ಡೋಸ್ ಸ್ಪುಟ್ನಿಕ್ (Sputnik) ಮತ್ತು ಇನ್ನೊಂದು ಡೋಸ್ ಆಕ್ಸ್‌ಫರ್ಡ್-ಅಸ್ಟ್ರಾಜೆನೆಕಾ ಲಸಿಕೆಯನ್ನು ನೀಡಲಾಗುತ್ತಿದೆ. ಆದರೆ ಅದರ ಕ್ಲಿನಿಕಲ್ ಪ್ರಯೋಗ ಇನ್ನೂ ನಡೆಯುತ್ತಿದೆ ಎಂದವರು ತಿಳಿಸಿದ್ದಾರೆ.

ಇದನ್ನೂ ಓದಿ : ಶೀಘ್ರವೇ World's Biggest Vaccination Programme ಆರಂಭ: ಪ್ರಧಾನಿ ಮೋದಿ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News