ಕರೋನಾ ಹಾವಳಿ: ಈ ರಾಜ್ಯಗಳಲ್ಲಿ ವಾರಾಂತ್ಯದಲ್ಲಿ ಲಾಕ್‌ಡೌನ್; ನಾಗ್ಪುರದಲ್ಲಿ ಜನತಾ ಕರ್ಫ್ಯೂ

ಆರ್ಥಿಕ ಚಟುವಟಿಕೆಯನ್ನು ಪುನರುಜ್ಜೀವನಗೊಳಿಸುವ ಮತ್ತು ಸೋಂಕಿನ ಪ್ರಕರಣಗಳನ್ನು ನಿಯಂತ್ರಿಸುವ ಹಿನ್ನೆಲೆಯಲ್ಲಿ ಒಂದು ಡಜನ್‌ಗೂ ಹೆಚ್ಚು ರಾಜ್ಯಗಳು ಭಾಗಶಃ ಲಾಕ್‌ಡೌನ್ ಆಯ್ಕೆ ಮಾಡಿಕೊಂಡಿವೆ.

Updated: Jul 26, 2020 , 07:34 AM IST
ಕರೋನಾ ಹಾವಳಿ: ಈ ರಾಜ್ಯಗಳಲ್ಲಿ ವಾರಾಂತ್ಯದಲ್ಲಿ ಲಾಕ್‌ಡೌನ್; ನಾಗ್ಪುರದಲ್ಲಿ ಜನತಾ ಕರ್ಫ್ಯೂ

ನವದೆಹಲಿ: ದೇಶದಲ್ಲಿ ಹೆಚ್ಚುತ್ತಿರುವ ಕೊರೊನಾವೈರಸ್ ಪ್ರಕರಣಗಳನ್ನು ನಿವಾರಿಸಲು ಅನೇಕ ರಾಜ್ಯಗಳಲ್ಲಿ ವಾರಾಂತ್ಯದಲ್ಲಿ ಲಾಕ್‌ಡೌನ್ (Lockdown) ಜಾರಿಗೊಳಿಸಲಾಗಿದೆ. ಆರ್ಥಿಕ ಚಟುವಟಿಕೆಯನ್ನು ಪುನರುಜ್ಜೀವನಗೊಳಿಸುವ ಮತ್ತು ಸೋಂಕಿನ ಪ್ರಕರಣಗಳನ್ನು ನಿಯಂತ್ರಿಸುವ ಹಿನ್ನೆಲೆಯಲ್ಲಿ ಒಂದು ಡಜನ್‌ಗೂ ಹೆಚ್ಚು ರಾಜ್ಯಗಳು ಭಾಗಶಃ ಲಾಕ್‌ಡೌನ್ ಆಯ್ಕೆ ಮಾಡಿಕೊಂಡಿವೆ.

ಆದರೆ ಬಿಹಾರದಲ್ಲಿ ಜುಲೈ 16 ರಿಂದ ಮತ್ತು ಮಣಿಪುರದಲ್ಲಿ ಜುಲೈ 23 ರಿಂದ ರಾಜ್ಯವ್ಯಾಪಿ ಲಾಕ್‌ಡೌನ್ ಜಾರಿಯಲ್ಲಿದೆ. ತ್ರಿಪುರ ಸರ್ಕಾರವು ಸೋಮವಾರದಿಂದ ರಾಜ್ಯವ್ಯಾಪಿ ಲಾಕ್‌ಡೌನ್ ಘೋಷಿಸಿವೆ.

ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್‌ಗೆ ಕರೋನಾ ಪಾಸಿಟಿವ್

ಮಧ್ಯಪ್ರದೇಶದ ರಾಜಧಾನಿ ಭೋಪಾಲ್‌ನಲ್ಲಿ ಸೋಂಕಿನ ಪ್ರಕರಣಗಳ ತೀವ್ರ ಹೆಚ್ಚಳದಿಂದಾಗಿ 10 ದಿನಗಳ ಲಾಕ್‌ಡೌನ್ ಜಾರಿಗೆ ತರಲಾಗಿದೆ. ಇದಲ್ಲದೆ ಇಡೀ ರಾಜ್ಯದಲ್ಲಿ ಪ್ರತಿ ಭಾನುವಾರ ಪೂರ್ಣ ಲಾಕ್‌ಡೌನ್ ಘೋಷಿಸಲಾಗಿದೆ. ಏತನ್ಮಧ್ಯೆ ರಾಜ್ಯ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ (Shivraj Singh Chauhan) ಅವರು ಕರೋನಾವೈರಸ್ ಸೋಂಕಿಗೆ ಒಳಗಾಗಿದ್ದು ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ತಮಿಳುನಾಡಿನ ಕೊಯಮತ್ತೂರಿನಲ್ಲಿ ಸೋಮವಾರ ಬೆಳಿಗ್ಗೆ ತನಕ ಪೂರ್ಣ ಲಾಕ್‌ಡೌನ್ ಜಾರಿಯಲ್ಲಿದೆ. ಇದಲ್ಲದೆ ಪ್ರತಿ ಶನಿವಾರ ರಾಜ್ಯದಲ್ಲಿ ಪೂರ್ಣ ಲಾಕ್‌ಡೌನ್ ಜಾರಿಗೊಳಿಸಲಾಗುತ್ತಿದೆ. ಒಂದೇ ದಿನದಲ್ಲಿ ಅತಿ ಹೆಚ್ಚು ಅಂದರೆ 6,988 ಹೊಸ  ಕರೋನಾವೈರಸ್ (Coronavirus) ಸೋಂಕಿನ ಪ್ರಕರಣಗಳನ್ನು ತಮಿಳುನಾಡು ವರದಿ ಮಾಡಿದ ನಂತರ ಒಟ್ಟು ಸೋಂಕಿತರ ಸಂಖ್ಯೆ 2,06,737 ಕ್ಕೆ ಏರಿದೆ. 

ಎಂ.ಎಸ್. ರಾಮಯ್ಯ ಆಸ್ಪತ್ರೆಯಲ್ಲಿ ಕೋವಿಡ್ ಸೋಂಕಿತರಿಗೆ 500 ಬೆಡ್ ಮೀಸಲು

ಉತ್ತರ ಪ್ರದೇಶದಲ್ಲಿ ವಾರಾಂತ್ಯದಲ್ಲಿ ಮತ್ತೊಮ್ಮೆ ಲಾಕ್‌ಡೌನ್ ಜಾರಿಗೆ ತರಲಾಯಿತು. ಈ ತಿಂಗಳು ಎರಡನೇ ಬಾರಿಗೆ ಉತ್ತರಾಖಂಡ, ಡೆಹ್ರಾಡೂನ್, ಹರಿದ್ವಾರ, ನೈನಿತಾಲ್ ಮತ್ತು ಉಧಮ್ಸಿಂಗ್ ನಗರ ನಾಲ್ಕು ಜಿಲ್ಲೆಗಳಲ್ಲಿ ಇದೇ ರೀತಿಯ ನಿರ್ಬಂಧಗಳನ್ನು ಜಾರಿಗೆ ತರಲಾಯಿತು. ಜುಲೈ 18 ರಿಂದ ಈ ಜಿಲ್ಲೆಗಳಲ್ಲಿ 1348 ಸೋಂಕು ಪ್ರಕರಣಗಳು ವರದಿಯಾಗಿವೆ.

ಪಶ್ಚಿಮ ಬಂಗಾಳದಲ್ಲಿ ವಾರಕ್ಕೆ ಎರಡು ಬಾರಿ ಎಲ್ಲಾ ಅಂಗಡಿಗಳು ಮತ್ತು ಸಾರಿಗೆಯನ್ನು ಲಾಕ್‌ಡೌನ್ ಅಡಿಯಲ್ಲಿ ಮುಚ್ಚಲಾಗಿದೆ. ಜಮ್ಮುವಿನಲ್ಲಿ ಶುಕ್ರವಾರ ಸಂಜೆ 6 ಗಂಟೆಯಿಂದ 60 ಗಂಟೆಗಳ ಲಾಕ್‌ಡೌನ್ ಜಾರಿಯಲ್ಲಿದೆ. ಅದೇ ಸಮಯದಲ್ಲಿ ಕಾಶ್ಮೀರದ ಬಂಡೀಪುರವನ್ನು ಹೊರತುಪಡಿಸಿ ಗುರುವಾರದಿಂದ ಆರು ದಿನಗಳ ಪೂರ್ಣ ಲಾಕ್‌ಡೌನ್ ಜಾರಿಯಾಗಲಿದೆ.

ಕೇಂದ್ರ ಆರೋಗ್ಯ ಸಚಿವಾಲಯದ ಇತ್ತೀಚಿನ ಅಂಕಿಅಂಶಗಳ ಪ್ರಕಾರ ದೇಶದಲ್ಲಿ ಒಟ್ಟು ಕರೋನಾವೈರಸ್ ಕೋವಿಡ್ -19 (Covid-19) ಸೋಂಕಿನ ಪ್ರಕರಣಗಳು 13,36,861 ಆಗಿದ್ದು, ಸಾವಿನ ಸಂಖ್ಯೆ 31,358 ಕ್ಕೆ ಏರಿದೆ. ಲಾಕ್‌ಡೌನ್ ಸಡಿಲಗೊಂಡ ನಂತರವೇ ಜೂನ್-ಜುಲೈನಲ್ಲಿ ಸುಮಾರು 11.4 ಲಕ್ಷ ಪ್ರಕರಣಗಳು ವರದಿಯಾಗಿವೆ.