Coronavirus 3rd Wave ತಡೆಯುವುದು ಹೇಗೆ? ಪ್ರಧಾನಿಗಳ ಪ್ರಮುಖ ವೈಜ್ಞಾನಿಕ ಸಲಹೆಗಾರರ ಸಲಹೆ ಇದು

Coronavirus 3rd Wave: ಒಂದು ವೇಳೆ ನಾವು ಕಠಿಣ ನಿಮಯಗಳನ್ನು ಅನುಸರಿಸಿದರೆ ಭಾರತದಲ್ಲಿ ಕೊರೊನಾ ಮೂರನೆಯ ಅಲೆ ಬರುವುದು ಸಾಧ್ಯತೆ ಇಲ್ಲ ಎಂದು ವಿಜಯ್ ರಾಘವನ್ ಹೇಳಿದ್ದಾರೆ.

Written by - Nitin Tabib | Last Updated : May 7, 2021, 08:49 PM IST
  • ಕಠಿಣ ನಿಯಮಗಳನ್ನು ಅನುಸರಿಸುವ ಮೂಲಕ ಮೂರನೇ ಅಲೆ ತಡೆ ಸಾಧ್ಯ
  • ಸರ್ಕಾರದ ಪ್ರಮುಖ ವೈಜ್ಞಾನಿಕ ಸಲಹೆಗಾರ ಪ್ರೊ. ವಿಜಯ್ ರಾಘವನ್
  • ಮೂರನೇ ಅಲೆಯ ಪೂರ್ವಾನುಮಾನ ಅಂದಾಜು ಹಚ್ಚುವುದು ಕಷ್ಟ ಸಾಧ್ಯ.
Coronavirus 3rd Wave ತಡೆಯುವುದು ಹೇಗೆ? ಪ್ರಧಾನಿಗಳ ಪ್ರಮುಖ ವೈಜ್ಞಾನಿಕ ಸಲಹೆಗಾರರ ಸಲಹೆ ಇದು title=
Prof. K. Vijay Raghavan (File Photo)

ನವದೆಹಲಿ: Coronavirus 3rd Wave - ಒಂದು ವೇಳೆ ನಾವು ಕಠಿಣ ನಿಯಮಗಳನ್ನು ಅನುಸರಿಸಿದರೆ ಭಾರತದಲ್ಲಿ ಕೊರೊನಾ ಮೂರನೇ ಅಲೆ ಬರುವುದು ಸಾಧ್ಯವಿಲ್ಲ ಎಂದು ಭಾರತ ಸರ್ಕಾರದ ಪ್ರಮುಖ ವೈಜ್ಞಾನಿಕ ಸಲಹೆಗಾರ (Chief Scientific Advisor) ಪ್ರೋಫೆಸರ್ ವಿಜಯ್ ರಾಘವನ್ (Prof.Vijay Raghavan)  ಹೇಳಿದ್ದಾರೆ. ಒಂದು ವೇಳೆ ಅಗತ್ಯ ಕ್ರಮಗಳನ್ನು ಕೈಗೊಂಡರೆ ಇದರಿಂದ ನಾವು ಪಾರಾಗಬಹುದು. ಒಂದು ವೇಳೆ ಸರ್ಕಾರ ಹೊರಡಿಸಿರುವ ಮಾರ್ಗಸೂಚಿಗಳನ್ನು ಚಾಚುತಪ್ಪದೆ ಅನುಸರಿಸಿದರೆ, ದೇಶದ ಕೆಲವೇ ಭಾಗಗಳಿಗೆ ನಾವು ಈ ಅಲೆಯನ್ನು ಸೀಮಿತಗೊಳಿಸಬಹುದು ಎಂದು ರಾಘವನ್ ಹೇಳಿದ್ದಾರೆ. ಎರಡು ದಿನಗಳ ಹಿಂದೆಯಷ್ಟೇ ಮೂರನೆಯ ಅಲೆಯ ಕುರಿತು ಹೇಳಿಕೆ ನೀಡಿದ್ದ ವಿಜಯ ರಾಘವನ್, ಭಾರತದಲ್ಲಿ ಮೂರನೇ ಅಲೆ ಬರುವುದನ್ನು ತಡೆಯಲು ಸಾಧ್ಯವಿಲ್ಲ ಎಂದು ಹೇಳಿದ್ದರು.

ಕೊರೊನಾ (Coronavirus) ರೋಗದಿಂದ ಚೇತರಿಸಿಕೊಂಡ ರೋಗಿಗಳಲ್ಲಿ ಪ್ರಾಣಾಂತಕ ಫಂಗಲ್ ಇನ್ಫೆಕ್ಷನ್ ಮ್ಯೂಕೊರ್ಮೈಸಿಸ್ (Mucormycisis) ಕಂಡುಬಂದಿರುವ ಪ್ರಕರಣಗಳ ಕುರಿತು ಹೇಳಿಕೆ ನೀಡಿರುವ ಸರ್ಕಾರದ ಪ್ರಮುಖ ವೈಜ್ಞಾನಿಕ ಸಲಹೆಗಾರ ವಿಜಯ್ ರಾಘವನ್, ಈ ರೋಗಿಗಳ ಮೇಲೆ ತೀವ್ರ ನಿಗಾವಹಿಸಲಾಗಿದೆ ಎಂದು ಹೇಳಿದ್ದಾರೆ. 'ಒಂದು ವೇಳೆ ನಾವು ಕಠಿಣ ಉಪಾಯಗಳನ್ನು ರಚಿಸಿದರೆ, ಕೊರೊನಾ (Covid-19) ಮೂರನೆ ಅಲೆಯನ್ನು ದೇಶದ ಕೆಲವೇ ಕೆಲವು ಭಾಗಗಳಿಗೆ ಸೀಮಿತಗೊಳಿಸಬಹುದು ಎಂದಿದ್ದಾರೆ. ಆದರೆ, 'ಸ್ಥಳೀಯ ಮಟ್ಟದಲ್ಲಿ, ರಾಜ್ಯಗಳಲ್ಲಿ ,ಜಿಲ್ಲೆಗಳಲ್ಲಿ ಹಾಗೂ ನಗರ ಪ್ರದೇಶಗಳಲ್ಲಿ ಪ್ರತಿಯೊಂದು ಪ್ರದೇಶಗಳಲ್ಲಿ ಮಾರ್ಗಸೂಚಿಗಳು ಎಷ್ಟೊಂದು ಪರಿಣಾಮಕಾರಿಯಾಗಿ ಜಾರಿಗೊಳಿಸಲಾಗಿದೆಯೋ ಎಂಬುದರ ಮೇಲೆ ಇದು ಅವಲಂಭಿಸಿದೆ ' ಎಂದೂ ಕೊಡ ಅವರು ಸ್ಪಷ್ಟಪಡಿಸಿದ್ದಾರೆ.

ಇದಕ್ಕೂ ಮೊದಲು ಬುಧವಾರ ಈ ಕುರಿತು ಹೇಳಿಕೆ ನೀಡಿದ್ದ ಕೇಂದ್ರ ಸರ್ಕಾರ, ಕೊರೊನಾ (Covid-19) ವೈರಸ್ ನ ಮೂರನೇ ಅಲೆ 'ಅನಿವಾರ್ಯ'ವಾಗಿದೆ ಎಂದು ಹೇಳಿತ್ತು. ಆದರೆ, ಈ ಅಲೆ ಯಾವಾಗ ಬರಲಿದೆ ಎಂಬುದು ಮೊದಲೇ ಅಂದಾಜಿಸಲು ಸಾಧ್ಯವಿಲ್ಲ ಎಂದೂ ಕೂಡ ಹೇಳಿತ್ತು. ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ್ದ ಕೇಂದ್ರ ಆರೋಗ್ಯ ಸಚಿವಾಲಯದ ಅಧಿಕಾರಿಗಳು, ದೇಶ ಪ್ರಸ್ತುತ ಯಾವ ತೀವ್ರತೆಯಿಂದ ಈ ಅಲೆಯನ್ನು ಎದುರಿಸುತ್ತಿದೆಯೋ ಅದರ ಪೂರ್ವಾನುಮಾನ ಕೂಡ ವ್ಯಕ್ತಪಡಿಸಲಾಗಿರಲಿಲ್ಲ ಎಂದಿದ್ದರು.

ಇದನ್ನೂ ಓದಿ- Corona Vaccine ಹಾಕಿಸುವ ಮುನ್ನ ಹಾಗೂ ನಂತರ ಏನು ಮಾಡ್ಬೇಕು ಮತ್ತು ಏನ್ಮಾಡಬಾರದು? ಇಲ್ಲಿವೆ ಸರ್ಕಾರದ New Guidelines

ಸರ್ಕಾರ ಹೇಳಿದ್ದೇನು?
ಮಹಾರಾಷ್ಟ್ರ, ಕೇರಳ, ಕರ್ನಾಟಕ ಹಾಗೂ ಉತ್ತರ ಪ್ರದೇಶ ಸೇರಿದಂತೆ 12 ರಾಜ್ಯಗಳಲ್ಲಿ ಒಂದು ಲಕ್ಷಕ್ಕೂ ಅಧಿಕ ರೋಗಿಗಳ ಮೇಲೆ ಚಿಕಿತ್ಸೆ ನಡೆಯುತ್ತಿದೆ. ಕರ್ನಾಟಕ, ಕೇರಳ, ತಮಿಳುನಾಡು, ಪಶ್ಚಿಮ ಬಂಗಾಳ, ರಾಜಸ್ಥಾನ ಹಾಗೂ ಬಿಹಾರ ರಾಜ್ಯಗಳಲ್ಲಿ ದೈನಂದಿನ ಹೊಸ ಪ್ರಕರಣಗಳು ಸಂಖ್ಯೆ ಏರಿಕೆಯಾಗುತ್ತಲೇ ಇವೆ ಎಂದು ಹೇಳಿದೆ.

ಇದನ್ನೂ ಓದಿ- ದೆಹಲಿ AIIMS ನಲ್ಲಿ ಕೊರೊನಾ ಚಿಕಿತ್ಸೆ ಪಡೆದ Underworld Don Rajan, ಸಾವಿನ ಸುದ್ದಿ ವದಂತಿ

ಕಳೆದ 24 ಗಂಟೆಗಳಲ್ಲಿ 24 ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಲ್ಲಿ ಕೊವಿಡ್ ಸೋಂಕಿನ ದರ ಶೇ.15ಕ್ಕಿಂತ ಹೆಚ್ಚಾಗಿದೆ. ಇನ್ನೊಂದೆಡೆ ಈ ಕುರಿತು ಹೇಳಿಕೆ ನೀಡಿರುವ ಕೇಂದ್ರದ ಪ್ರಮುಖ ವೈಜ್ಞಾನಿಕ ಸಲಹೆಗಾರ ವಿಜಯ್ ರಾಘವನ್, "ವೈರಸ್ ನ ಉನ್ನತ ಮಟ್ಟದ ಪ್ರಸಾರವನ್ನು ಗಮನಿಸಿದರೆ ದೇಶದಲ್ಲಿ ಮೂರನೇ ಅಲೆ ಬಂದೆ ಬರಲಿದೆ. ಆದರೆ, ಇದು ಯಾವಾಗ ಮತ್ತು ಎಲ್ಲಿಂದ ಬರಲಿದೆ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಹೀಗಾಗಿ ನಾವು ಹೊಸ ಅಲೆಗಳಿಗೆ ಈಗಿನಿಂದಲೇ ಸನ್ನದ್ಧವಾಗಬೇಕಿದೆ:" ಎಂದಿದ್ದರು.

ಇದನ್ನೂ ಓದಿ-Immunity ಹೆಚ್ಚಿಸಲು ಕೇಂದ್ರ ಸರ್ಕಾರ ಜಾರಿಗೊಳಿಸಿದೆ ಈ ಲಿಸ್ಟ್, ಏನೇನು ಶಾಮೀಲಾಗಿವೆ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News