Unlock 3ನೇ ಹಂತದಲ್ಲಿ ಹೀಗೆ ಇರುವ ಸಾಧ್ಯತೆ ಹೆಚ್ಚು....!

ಅನ್ಲಾಕ್ 2 ಜುಲೈ 31 ರಂದು ಅಂತ್ಯಗೊಳ್ಳುತ್ತಿದ್ದಂತೆ, ಗೃಹ ಸಚಿವಾಲಯವು ಅನ್ಲಾಕ್ 3ನೇ ಹಂತಕ್ಕೆ ಮಾರ್ಗಸೂಚಿಗಳನ್ನು ಸಿದ್ಧಪಡಿಸುತ್ತಿದೆ;. ಆಗಸ್ಟ್ 1 ರ ಮೊದಲು ಗೃಹ ಸಚಿವಾಲಯವು ಇತ್ತೀಚಿನ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡುತ್ತದೆ ಎಂದು ನಿರೀಕ್ಷಿಸಲಾಗಿದೆ.

Last Updated : Jul 26, 2020, 11:37 PM IST
Unlock 3ನೇ ಹಂತದಲ್ಲಿ ಹೀಗೆ ಇರುವ ಸಾಧ್ಯತೆ ಹೆಚ್ಚು....! title=
ಸಾಂದರ್ಭಿಕ ಚಿತ್ರ

ನವದೆಹಲಿ: ಅನ್ಲಾಕ್ 2 ಜುಲೈ 31 ರಂದು ಅಂತ್ಯಗೊಳ್ಳುತ್ತಿದ್ದಂತೆ, ಗೃಹ ಸಚಿವಾಲಯವು ಅನ್ಲಾಕ್ 3ನೇ ಹಂತಕ್ಕೆ ಮಾರ್ಗಸೂಚಿಗಳನ್ನು ಸಿದ್ಧಪಡಿಸುತ್ತಿದೆ;. ಆಗಸ್ಟ್ 1 ರ ಮೊದಲು ಗೃಹ ಸಚಿವಾಲಯವು ಇತ್ತೀಚಿನ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡುತ್ತದೆ ಎಂದು ನಿರೀಕ್ಷಿಸಲಾಗಿದೆ.

ಮುಂದಿನ ಹಂತದ ಅನ್ಲಾಕ್ನಲ್ಲಿ ಶಾಲೆಗಳು ಮತ್ತು ಕಾಲೇಜುಗಳು ಮುಚ್ಚಲ್ಪಡುತ್ತವೆ ಎಂದು ನಿರೀಕ್ಷಿಸಲಾಗಿದೆ. ದೇಶದಲ್ಲಿ ಮೆಟ್ರೋ ಸೇವೆಗಳು ಮತ್ತೆ ತೆರೆಯಲು ಸಾಧ್ಯತೆ  ಕಡಿಮೆ ಇದೆ.  ಅದೇ ರೀತಿಯಾಗಿ ಸಿನೆಮಾ ಹಾಲ್‌ಗಳು, ಚಿತ್ರಮಂದಿರಗಳು ಮತ್ತು ಜಿಮ್‌ಗಳು ಕಟ್ಟುನಿಟ್ಟಾದ ಸಾಮಾಜಿಕ ದೂರ ಪ್ರೋಟೋಕಾಲ್‌ನೊಂದಿಗೆ ಮತ್ತೆ ತೆರೆಯುವ ಸಾಧ್ಯತೆಯಿದೆ.ಎಲ್ಲಾ ರಾಜ್ಯ ಮತ್ತು ಕೇಂದ್ರ ಮಂಡಳಿಗಳು 10 ಮತ್ತು 12 ನೇ ತರಗತಿಯ ಫಲಿತಾಂಶಗಳನ್ನು ಬಿಡುಗಡೆ ಮಾಡುತ್ತಿದ್ದರೂ ಶಾಲೆಗಳು, ಕಾಲೇಜುಗಳು ಮತ್ತು ವಿಶ್ವವಿದ್ಯಾಲಯಗಳು ಪುನಃ ತೆರೆಯುವ ಸಾಧ್ಯತೆಗಳು ಬಹಳ ಕಡಿಮೆ ಎನ್ನಲಾಗುತ್ತಿದೆ.

ಈ ನಿಟ್ಟಿನಲ್ಲಿ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯ ಎಲ್ಲಾ ರಾಜ್ಯಗಳೊಂದಿಗೆ ಸಮಾಲೋಚನೆ ಆರಂಭಿಸಿದೆ. ಈ ಬಗ್ಗೆ ಎಚ್‌ಆರ್‌ಡಿ ಸಚಿವಾಲಯವು ಪೋಷಕರಿಂದ ಪ್ರತಿಕ್ರಿಯೆ ಪಡೆಯುತ್ತಿದೆ ಎಂದು ಹೇಳಿದೆ. ಇತ್ತೀಚಿನ ವರದಿಗಳ ಪ್ರಕಾರ, ಪೋಷಕರು ಈ ಸಮಯದಲ್ಲಿ ಶಾಲೆಗಳನ್ನು ಪುನಃ ತೆರೆಯುವ ಬಗ್ಗೆ ಬೆಂಬಲ ವ್ಯಕ್ತಪಡಿಸಿಲ್ಲ ಎನ್ನಲಾಗಿದೆ.ಆದರೆ ಈಗ ಜಿಮ್ ತೆರೆಯುವ ಬಗ್ಗೆ ಸಾಕಷ್ಟು ಒತ್ತಡವಿರುವುದರಿಂದ ಮೂರನೇ ಹಂತದ ಅನ್ಲಾಕ್ನಲ್ಲಿ ಗೃಹ ಸಚಿವಾಲಯವು ಅವುಗಳನ್ನು ಮತ್ತೆ ತೆರೆಯಲು ಅನುಮತಿಸಬಹುದು.

ಮಾಹಿತಿ ಮತ್ತು ಪ್ರಸಾರ ಸಚಿವಾಲಯದ ಪ್ರಕಾರ, ದೇಶಾದ್ಯಂತ ಸಿನೆಮಾ ಹಾಲ್‌ಗಳನ್ನು ಪುನಃ ತೆರೆಯುವಂತೆ ಶಿಫಾರಸು ಮಾಡುವಂತೆ ಗೃಹ ಸಚಿವಾಲಯಕ್ಕೆ ಪ್ರಸ್ತಾವನೆ ಕಳುಹಿಸಿದೆ. 50 ರಷ್ಟು ಆಸನ ಸಾಮರ್ಥ್ಯ ಹೊಂದಿರುವ ಸಿನೆಮಾ ಹಾಲ್‌ಗಳನ್ನು ಮತ್ತೆ ತೆರೆಯಲು ರಂಗಮಂದಿರ ಮಾಲೀಕರಿಂದ ನಿರಂತರ ಬೇಡಿಕೆ ಇದೆ.ಕರೋನವೈರಸ್ ರೋಗಕಾರಕದ ಹರಡುವಿಕೆಯನ್ನು ತಡೆಗಟ್ಟುವ ಪ್ರಯತ್ನದಲ್ಲಿ ಕೇಂದ್ರ ಸರ್ಕಾರವು ರಾಷ್ಟ್ರವ್ಯಾಪಿ ಲಾಕ್‌ಡೌನ್ ವಿಧಿಸಿದ ನಂತರ ಮಾರ್ಚ್ 24 ರಿಂದ ದೇಶಾದ್ಯಂತ ಎಲ್ಲಾ ಸಿನೆಮಾ ಹಾಲ್‌ಗಳನ್ನು ಮುಚ್ಚಲಾಗಿದೆ.

ಆಗಸ್ಟ್ 1 ರ ಮೊದಲು ಗೃಹ ಸಚಿವಾಲಯವು ಮಾರ್ಗಸೂಚಿಗಳನ್ನು ನೀಡಿದ ನಂತರ, ಎಲ್ಲಾ ರಾಜ್ಯ ಸರ್ಕಾರಗಳು ಯಾವುದನ್ನು ತೆರೆಯಬೇಕು ಮತ್ತು ಯಾವುದನ್ನು ತೆರೆಯಬಾರದು ಎಂಬುದರ ಕುರಿತು ಆಯಾ ಮಾರ್ಗಸೂಚಿಗಳೊಂದಿಗೆ ಮುಂದೆ ಬರುತ್ತವೆ. ಮುಂದಿನ ಆದೇಶದವರೆಗೆ ಗೃಹ ಸಚಿವಾಲಯವು ದೇಶಾದ್ಯಂತ ಕೆಲವು ಸೇವೆಗಳಿಗೆ ನಿರ್ಬಂಧ ಹೇರುವ ಸಾಧ್ಯತೆಯಿದೆ.

ಏತನ್ಮಧ್ಯೆ, ಭಾರತವು ಭಾನುವಾರ ಒಟ್ಟು 13 ಲಕ್ಷ 85 ಸಾವಿರ 522 ಪ್ರಕರಣಗಳನ್ನು ದಾಖಲಿಸಿದೆ.

Trending News