Boy Kissing Girlfriend While Driving Scooty: ಇತ್ತೀಚಿನ ದಿನಗಳಲ್ಲಿ ಪ್ರೇಮಿ ಜೋಡಿಗಳು ತಮ್ಮ ಪ್ರೀತಿಯನ್ನು ವ್ಯಕ್ತಪಡಿಸಲು ತರಹೇವಾರಿ ವಿಧಾನಗಳನ್ನು ಅನುಸರಿಸುತ್ತಿದ್ದಾರೆ. ಆದರೆ, ಹಲವು ಬಾರಿ ಅವರ ಈ ಪ್ರೀತಿ ವ್ಯಕ್ತಪಡಿಸುವ ವಿಧಾನ ಅವರಿಗೆ ಕಂಬಿ ಎಣಿಸುವಂತೆ ಮಾಡುತ್ತದೆ. ಇದಕ್ಕೆ ಸ್ಪಷ್ಟ ಉದಾಹರಣೆ ಎಂದರೆ ಛತ್ತೀಸ್ಗಡದಿಂದ ಇತ್ತೀಚಿನ ದಿನಗಳಲ್ಲಿ ಭಾರಿ ವೈರಲ್ ಆಗುತ್ತಿರುವ ಈ ವಿಡಿಯೋ ಎಂದರೆ ತಪ್ಪಾಗಲಾರದು. ಈ ವಿಡಿಯೋದಲ್ಲಿ ಯುವಕನೊಬ್ಬೆ ಸ್ಕೂಟಿ ಚಲಾಯಿಸುತ್ತಿದ್ದಾನೆ ಮತ್ತು ಯುವತಿಯೊಬ್ಬಳು ಹ್ಯಾಂಡಲ್ ನತ್ತ ಬೆನ್ನು ತಿರುಗಿಸಿ, ಯುವಕನ ಮಡಿಲಲ್ಲಿ ಕುಳಿತುಕೊಂಡಿದ್ದಾಳೆ. ಹುಡುಗ ಮತ್ತು ಹುಡುಗಿ ಭಾರಿ ನಶೆಯಲ್ಲಿರುವಂತೆ ಕಂಡುಬರುತ್ತಿದೆ. ಹೀಗಿರುವಾಗ ಈ ಇಬ್ಬರ ಒಂದು ಸಣ್ಣ ತಪ್ಪು ಉಭಯರಿಗೆ ಯಮಲೋಕ ದರ್ಶನ ಮಾಡಿಸಬಹುದು. ಈ ವಿಡಿಯೋದಲ್ಲಿ ಜೋಡಿ ಸ್ಪಷ್ಟವಾಗಿ ರಸ್ತೆ ನಿಯಮಾವಳಿಗಳನ್ನು ಉಲ್ಲಂಘಿಸುತ್ತಿದೆ ಎಂಬುದನ್ನೂ ನೀವು ನೋಡಬಹುದು. ಮತ್ತಿನಲ್ಲಿರುವ ಈ ಯುವ ಜೋಡಿಗೆ ತನ್ನ ಪ್ರಾಣದ ಭಯ ಬಿಟ್ಹಾಕಿ ಇತರರ ಪ್ರಾಣದ ಚಿಂತೆಯೂ ಇಲ್ಲ.
ಇದನ್ನೂ ಓದಿ-Shocking News: ಹೃದಯಾಘಾತದಿಂದ ಸಾವು, ನಂತರ 28 ನಿಮಿಷಗಳವರೆಗೆ ವ್ಯಕ್ತಿ ನೋಡಿದ್ದು ಬೆಚ್ಚಿಬೀಳಿಸುವಂತಿದೆ!
ಪ್ರಕರಣ ಏನು?
ಸ್ಕೂಟಿ ಓಡಿಸುವಾಗ ಇಂತಹ ಪ್ರೀತಿಯ ಪ್ರದರ್ಶನ ದೊಡ್ಡ ಅಪಘಾತಕ್ಕೆ ಕಾರಣವಾಗಬಹುದು. ಸ್ಕೂಟಿ ಚಾಲಕನ ಹಿಂದೆ ಕುಳಿತುಕೊಳ್ಳುವ ಬದಲು, ಹುಡುಗಿ ಆತನ ಮುಂದೆ ಆತನ ತೊಡೆಯ ಮೇಲೆ ಕುಳಿತುಕೊಂಡು ಸ್ಕೂಟಿ ಚಾಲಕನನ್ನು ತಬ್ಬಿಕೊಂಡು ಮುತ್ತು ಕೊಡುತ್ತಿರುವುದನ್ನು ನೀವು ನೋಡಬಹುದು. ವೈರಲ್ ವೀಡಿಯೊದ ಸ್ಕೂಟಿ ಸಂಖ್ಯೆ CG 28 K 4059 ಆಗಿದೆ. ಬಿಲಾಸ್‌ಪುರದ ರಘುರಾಜ್ ಕ್ರೀಡಾಂಗಣದ ಹಿಂಭಾಗದ ಇಮ್ಲಿಪಾರ ರಸ್ತೆಯಲ್ಲಿ ಈ ಜೋಡಿ ಹಳೆ ಬಸ್ ನಿಲ್ದಾಣದ ನಂತರ ಶಿವ ಟಾಕೀಸ್ ಮುಂದೆ ಸಾಗಿ ಅಲ್ಲಿಂದ ತಿಕ್ರಪಾರ ಯಾದವ್ ಪ್ರದೇಶದಲ್ಲಿ ಸುತ್ತಾಡುತ್ತಿರುವುದು ಕಂಡುಬಂದಿದೆ. ಈ ಹಿಂದೆ ಛತ್ತೀಸ್‌ಗಢದ ದುರ್ಗ್ ನಗರದಲ್ಲಿ ಇದೇ ರೀತಿಯ ಪ್ರಕರಣ ನಡೆದಿತ್ತು ಎಂಬುದು ಇಲ್ಲಿ ಉಲ್ಲೇಖನೀಯ ದುರ್ಗ್ ಪ್ರೇಮ ಪ್ರದರ್ಶನ ಪ್ರಕರಣದಲ್ಲೂ ಪೊಲೀಸರು ಸ್ಕೂಟಿ ಚಾಲಕನ ವಿರುದ್ಧ ಕಠಿಣ ಕ್ರಮ ಕೈಗೊಂಡಿದ್ದರು.
ಇದನ್ನೂ ಓದಿ-Viral News: ಹಸ್ತಮೈಥುನ, ಬಿಕಿನಿ ಹುಡುಗಿ ಬಳಿಕ ಇದೀಗ ದೆಹಲಿ ಮೆಟ್ರೊದಲ್ಲಿ ನಡೀತು ಓರಲ್...!
ಕ್ರಮ ಜರುಗಿಸಿದ ಬಿಲಾಸ್ಪುರ್ ಟ್ರಾಫಿಕ್ ಪೊಲೀಸರು
ಈ ವಿಡಿಯೋ ವೈರಲ್ ಆದ ಅರ್ಧ ಗಂಟೆಯೊಳಗೆ ಬಿಲಾಸ್‌ಪುರ ಸಂಚಾರ ಪೊಲೀಸರು ತಕ್ಷಣ ಕ್ರಮ ಕೈಗೊಂಡಿದ್ದಾರೆ. ಪೊಲೀಸರು ಯುವಕನನ್ನು ಠಾಣೆಗೆ ಕರೆಸಿ ಸ್ಕೂಟಿಯ ಅತಿವೇಗದ ಮತ್ತು ನಿರ್ಲಕ್ಷ್ಯದ ಚಾಲನೆಯ ಆರೋಪದ ಮೇಲೆ ಚಲನ್ ಹಾಕಿದ್ದಾರೆ. ಈ ರೀತಿ ಅಜಾಗರೂಕತೆಯಿಂದ ವಾಹನ ಚಾಲನೆ ಮಾಡದಂತೆ ಪೊಲೀಸರು ಆತನಿಗೆ ಸೂಚನೆ ನೀಡಿದ್ದಾರೆ. ಘಟನೆಯ ಕುರಿತು ಹೇಳಿಕೆ ನೇಯಿದ್ರುವ ಟ್ರಾಫಿಕ್ ಡಿಎಸ್ಪಿ ಸಂಜಯ್ ಸಾಹು, ವಿಡಿಯೋ ವೈರಲ್ ಆದ ತಕ್ಷಣ ನಿರ್ಲಕ್ಷ್ಯ ತೋರಿದ ಯುವಕನನ್ನು ಅರ್ಧ ಗಂಟೆಯೊಳಗೆ ಠಾಣೆಗೆ ಕರೆಯಿಸಿ ಕ್ರಮ ಕೈಗೊಂಡು ₹ 8800 ದಂಡ ವಿಧಿಸಲಾಗಿದೆ ಎಂದು ಹೇಳಿದ್ದಾರೆ.
ಇದನ್ನೂ ನೋಡಿ-
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK
Instagram Link - https://bit.ly/3LyfY2l
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.