Death Experience: ಒಬ್ಬ ವ್ಯಕ್ತಿಗೆ ಹೃದಯಾಘಾತ ಸಂಭವಿಸಿ ಸಾವನ್ನಪ್ಪಿದ್ದಾನೆ. ತಾಂತ್ರಿಕವಾಗಿ ಆತ ಸಾವನ್ನಪ್ಪಿದ್ದಾನೆ ಎಂದು ಘೋಷಿಸಲಾಯಿತು. ಆದರೆ ಇದಾದ ಬಳಿಕ 28 ನಿಮಿಷಗಳ ಕಾಲ ಆತನಿಗೆ ಏನೆಲ್ಲಾ ಅನುಭವವಾಯಿತು ಎಂದು ತಿಳಿದು ಎಲ್ಲರೂ ದಿಗ್ಭ್ರಮೆಗೊಂಡಿದ್ದಾರೆ. ಆಸ್ಟ್ರೇಲಿಯಾದ ನಿವಾಸಿ 57 ವರ್ಷದ ಫಿಲ್ ಜಬಲ್ ಎಂಬಾತನೊಂದಿಗೆ ಈ ಘಟನೆ ನಡೆದಿದೆ.
28 ನಿಮಿಷಗಳ ಕಾಲ ಸಾವಿನ ದವಡೆಯಲ್ಲಿ ಇದ್ದು ಅಲ್ಲಿಂದ ಪವಾಡ ಸದೃಶ ರೀತಿಯಲ್ಲಿ ಆತ ಬದುಕುಳಿದಿದ್ದಾನೆ. ಬಾಸ್ಕೆಟ್ ಬಾಲ್ ಆಡುತ್ತಿದ್ದ ವೇಳೆ ಆತನಿಗೆ ಹೃದಯಾಘಾತವಾಗಿತ್ತು. ಈ ವೇಳೆ ಅವನು ತನ್ನ ದೇಹದಿಂದ ಹೊರಬಂದು ಎತ್ತರದಿಂದ ತನ್ನನ್ನು ನೋಡುತ್ತಿದ್ದಾನೆ ಎಂಬುದನ್ನೂ ಅರಿತುಕೊಂಡಿದ್ದಾನೆ. ವೃತ್ತಿಯಲ್ಲಿ ಟೇಕ್ವಾಂಡೋ ತರಬೇತುದಾರನಾಗಿರ್ವ ಫಿಲ್, ತನ್ನನ್ನು ತಾನು 'ಮಿರಾಕಲ್ ಮ್ಯಾನ್' ಎಂದು ಕರೆದುಕೊಳ್ಳುತ್ತಾನೆ ಮತ್ತು ನಾನು ಎಲ್ಲಿಗೂ ಹೋಗುವುದಿಲ್ಲ ಎನ್ನುತ್ತಾನೆ. ಈ ಘಟನೆ ನವೆಂಬರ್ನಲ್ಲಿ ನಡೆದಿದ್ದು, ಬಾಸ್ಕೆಟ್ಬಾಲ್ ಆಡುತ್ತಿದ್ದಾಗ ಹೃದಯಾಘಾತವಾಗಿ ಆತ ಇದ್ದಕ್ಕಿದ್ದಂತೆ ಕೆಳಗೆ ಬಿದ್ದಿದ್ದಾನೆ.
ಮೂರು ದಿನ ಆಸ್ಪತ್ರೆಯಲ್ಲಿ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ
ಇದಾದ ಬಳಿಕ ಆತನನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು. ಮಗ ಜೋಶುವಾ ಆಫ್ ಡ್ಯೂಟಿ ನರ್ಸ್ಗೆ ಕರೆ ಮಾಡಿ ಸಿಪಿಆರ್ ನೀಡಲು ಹೇಳಿದ್ದಾನೆ. ಮೂರು ದಿನಗಳ ಕಾಲ ಆಸ್ಪತ್ರೆಯಲ್ಲಿ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದನು. ನಂತರ ಆತನ್ನು ಶಸ್ತ್ರಚಿಕಿತ್ಸೆಗೂ ಒಳಪಡಿಸಲಾಗಿದೆ. ಪ್ರಜ್ಞೆ ಮರಳಿ ಬಂದಾಗ ಆತ ತಾಂತ್ರಿಕವಾಗಿ 28 ನಿಮಿಷಗಳ ಕಾಲ ಪ್ರಾಣ ತ್ಯಜಿಸಿದ್ದ ಎಂದು ವೈದ್ಯರು ಹೇಳಿದ್ದಾರೆ. ಫಿಲ್ಗೆ 3 ಮಕ್ಕಳಿದ್ದಾರೆ.
ತಮ್ಮ ಜೀವ ಮರಳಿದ್ದಕ್ಕೆ ಆತ ಅಭಿಮಾನಿಗಳು ಮತ್ತು ಬ್ಯಾಸ್ಕೆಟ್ಬಾಲ್ಗೆ ಕೃತಜ್ಞತೆ ಸಲಿಸುತ್ತಾರೆ. ಅವನ ಸುತ್ತಲಿನ ಅನೇಕ ಜನರು ಅವರಿಗೆ ಸಹಾಯ ಮಾಡಿದ್ದಾರೆ ಎಂದು ಆತ ಹೇಳುತ್ತಾನೆ. ಘಟನೆ ನಡೆದ ಒಂದು ವಾರದ ನಂತರ ಆತನನ್ನು ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದೆ.
ಎಫ್ಬಿ ಪೋಸ್ಟ್ನಲ್ಲಿ ಅನುಭವ ಹಂಚಿಕೊಳ್ಳಲಾಗಿದೆ
ತಮ್ಮ ಅನುಭವವನ್ನು ಫೇಸ್ ಬುಕ್ ಪೋಸ್ಟ್ ನಲ್ಲಿ ಬರೆದುಕೊಂಡಿದ್ದಾರೆ. ಇದು ಎಲ್ಲಾ ಮನಸ್ಥಿತಿಯನ್ನು ಅವಲಂಬಿಸಿರುತ್ತದೆ ಎಂದು ಅವರು ಆತ ನೆಳಿದ್ದಾನೆ. ಇದರೊಂದಿಗೆ ನೀವು ಒಂದು ಹೆಜ್ಜೆ ಮುಂದಿಡುತ್ತೀರಿ. ನನ್ನ ಪುಸ್ತಕಗಳಲ್ಲಿ ಮುಖ್ಯವಾದ ವಿಷಯವೆಂದರೆ ಕಟ್ಟುನಿಟ್ಟಾದ ದೈಹಿಕ ತರಬೇತಿ. ಆದರೆ ಅದು ಒಬ್ಬರಿಗೆ ಮಾತ್ರ ಎಂದು ಬರೆದಿದ್ದಾನೆ.
ಇದನ್ನೂ ಓದಿ-OMG ! ಕಾರ್ ಇಂಜಿನ್ ನಲ್ಲಿ 48 ಕಿ.ಮೀಗಳವರೆಗೆ ಸಿಲುಕಿಕೊಂಡ ಪುಟ್ಟ ಪ್ರಾಣ, ನಂತರ ನಡೆದಿದ್ದು ಮಾತ್ರ ಆ ದೇವರ ಇಚ್ಚೆ
ಸಾವಿನ ಬಾಯಿಂದ ಮರಳಿ ಬಂದ ನಂತರ ಅವರ ಬದುಕಿನ ದೃಷ್ಟಿಕೋನದಲ್ಲಿ ಬದಲಾವಣೆಯಾಗಿದೆ ಎಂದೂ ಅವರು ಬರೆದುಕೊಂಡಿದ್ದಾರೆ. ಆಟದಿಂದ ನಿವೃತ್ತಿಯ ನಿರ್ಧಾರ ಮತ್ತು ತನ್ನ ನಿರ್ಧಾರವನ್ನು ಪರಾಮರ್ಶಿಸಲು ಒತ್ತಾಯಿಸಲ್ಪಟ್ಟಿರುವುದಾಗಿ ಹೇಳುತ್ತಾರೆ.
ಇದನ್ನೂ ಓದಿ-Most Precious Lizard: ಈ ಹಲ್ಲಿಯ ಬೆಲೆ ಒಂದು ಬಿಎಂಡಬ್ಲ್ಯೂಗೆ ಸಮಾನ ಎಂದ್ರೆ ನೀವು ನಂಬ್ತೀರಾ? 100% ನಿಜ!
'ನಾವು ಚಿಂತಿಸುವ ಸಣ್ಣ ಪುಟ್ಟ ವಿಷಯಗಳು ವಾಸ್ತವದಲ್ಲಿ ಚಿಂತಿಸುವಷ್ಟು ಮೂಉಲ್ಯವನ್ನು ಹೊಂದಿರುವುದಿಲ್ಲ. ನೀನು ಈ ಕೆಲಸ ಮಾಡಲಾರೆ, ಇದನ್ನು ಹೇಳಲು ಯಾರಿಗೂ ಅವಕಾಶ ಕೊಡಬೇಡಿ. ನನ್ನ ಕಥೆ ಇತರ ಜನರಿಗೆ ಸ್ಪೂರ್ತಿಯಾಗಬಹುದು. ಸಿಪಿಆರ್ ನೀಡುವುದನ್ನು ಜನರು ಕಲಿಯಬೇಕು ಇದರಿಂದ ಓರ್ವ ವ್ಯಕ್ತಿಯ ಜೀವ ಉಳಿಸಬಹುದು ಎಂದು ಹೇಳಿದ್ದಾರೆ.
ಇದನ್ನೂ ನೋಡಿ-
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಆಧ್ಯಾತ್ಮ, ಜೀವನಶೈಲಿ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.