ಒಂದೂವರೆ ಲಕ್ಷದ ಗಡಿ ದಾಟಿದ ದೇಶದ COVID 19 ವೈರಸ್ ಪೀಡಿತರ ಸಂಖ್ಯೆ

ಕಳೆದ ವಾರಾಂತ್ಯದಲ್ಲೇ ದಿನವೊಂದರಲ್ಲಿ 6 ಸಾವಿರಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗುವ ಟ್ರೆಂಡ್ ಶುರುವಾಗಿತ್ತು. ಇದು ಹಾಗೆ ಮುಂದುವರೆದಿದ್ದು ಭಾರತದಲ್ಲಿ ನಿನ್ನೆ ಒಂದೇ ದಿನ 6,387 ಜನರಿಗೆ COVID 19 ಸೋಂಕು ಇರುವುದು ದೃಢಪಟ್ಟಿದೆ. 

Last Updated : May 27, 2020, 12:57 PM IST
ಒಂದೂವರೆ ಲಕ್ಷದ ಗಡಿ ದಾಟಿದ ದೇಶದ COVID 19 ವೈರಸ್ ಪೀಡಿತರ ಸಂಖ್ಯೆ title=

ನವದೆಹಲಿ: ಲಾಕ್‌ಡೌನ್ ಜಾರಿಗೊಳಿಸಿದ್ದು ನಿರರ್ಥಕವಾಗಿದೆ. ಅಥವಾ ಸೂಕ್ತ ಸಂದರ್ಭದಲ್ಲಿ ಸೂಕ್ತ ರೀತಿಯಲ್ಲಿ ಮಾಡಿಲ್ಲವೆನಿಸುತ್ತಿದೆ. ಏಕೆಂದರೆ ದೇಶಕ್ಕೆ ದೇಶವನ್ನೇ ದಿಗ್ಬಂಧನಗೊಳಿಸಿದರೂ ಕೋವಿಡ್ -19 (Covid-19) ಎಂಬ ಕಂಡುಕೇಳರಿಯದ ಸೋಂಕು ಹರಡುವಿಕೆ ಕಮ್ಮಿ ಆಗಿಲ್ಲ. ಇದರ ಪರಿಣಾಮವಾಗಿ ಪ್ರಪಂಚದಲ್ಲೇ ಅತಿಹೆಚ್ಚು ಕೊರೋನಾ ವೈರಸ್ ಪೀಡಿತರರಿರುವ ಮೊದಲ ಹತ್ತು ದೇಶಗಳ ಪೈಕಿ ಭಾರತ 10ನೇ ಸ್ಥಾನಕ್ಕೆ ಏರಿದೆ. ಅದೂ ಅಲ್ಲದೆ ಭಾರತದ‌ COVID 19 ವೈರಸ್ ಪೀಡಿತರ ಸಂಖ್ಯೆ ಒಂದೂವರೆ ಲಕ್ಷದ ಗಡಿಯನ್ನೂ  ದಾಟಿದೆ.

ಕಳೆದ ವಾರಾಂತ್ಯದಲ್ಲೇ ದಿನವೊಂದರಲ್ಲಿ 6 ಸಾವಿರಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗುವ ಟ್ರೆಂಡ್ ಶುರುವಾಗಿತ್ತು. ಇದು ಹಾಗೆ ಮುಂದುವರೆದಿದ್ದು ಭಾರತದಲ್ಲಿ ನಿನ್ನೆ ಒಂದೇ ದಿನ 6,387 ಜನರಿಗೆ ಕರೋನವೈರಸ್ (Coronavirus) COVID 19 ಸೋಂಕು ಇರುವುದು ದೃಢಪಟ್ಟಿದೆ. ಇದರಿಂದ ಭಾರತದ COVID 19 ಸೋಂಕು ಪೀಡಿತರ ಸಂಖ್ಯೆ 1,51,767ಕ್ಕೆ ಏರಿಕೆಯಾಗಿದೆ. ಈ ಮುಖಾಂತರ ದೇಶದ COVID 19 ವೈರಸ್ ಪೀಡಿತರ ಸಂಖ್ಯೆ ಒಂದೂವರೆ ಲಕ್ಷದ ಗಡಿಯನ್ನೂ ಮೀರಿ ಮುಂದೆ ಸಾಗಿದೆ.

ಕೆಲವರು COVID 19 ವಿಷಯ ನಿಭಾಯಿಸಿರುವುದರಲ್ಲಿ ಭಾರತ ಬೇರೆ ದೇಶಗಳಿಗೆ ಹೋಲಿಸಿಕೊಂಡರೆ ಪರವಾಗಿಲ್ಲ ಎಂದು ಬೀಗುತ್ತಿದ್ದಾರೆ. ಆದರೆ ದೇಶದ ಪರಿಸ್ಥಿತಿ ಆಗಿಲ್ಲ ಎಂಬುದನ್ನು ಅಂಕಿಅಂಶಗಳು ಸಾರಿ ಸಾರಿ ಹೇಳುತ್ತವೆ. 

ದಿನದಿಂದ ದಿನಕ್ಕೆ COVID 19 ವೈರಾಣು ಪೀಡಿತರ ಸಂಖ್ಯೆ ದುಪ್ಪಟ್ಟಾಗುತ್ತಿದೆ. ಇತ್ತೀಚೆಗೆ 12ನೇ ಸ್ಥಾನದಲ್ಲಿದ್ದ ಚೀನಾವನ್ನು ಹಿಂದಿಕ್ಕಿ 11ನೇ ಸ್ಥಾನಕ್ಕೆ ಬಂದಿತ್ತು.‌ ಮೊನ್ನೆಯಷ್ಟೇ ಭಾರತದ ‌ಕೊರೋನಾ ಸೋಂಕು ಪೀಡಿತರ ಸಂಖ್ಯೆ ಒಂದೂಕಾಲು ಲಕ್ಷ ದಾಟಿತ್ತು. ಅಂತಾರಾಷ್ಟ್ರೀಯ ಮಟ್ಟದಲ್ಲಿ ಟಾಪ್ ಟೆನ್ ಒಳಗೆ ಬಂದಿತ್ತು. ಮತ್ತೀಗ ಒಂದೂವರೆ ಲಕ್ಷದ ಗಡಿಯನ್ನೂ  ದಾಟಿದೆ.

ಇದಕ್ಕೂ ಮೊದಲು ಮೇ 6ರಿಂದ 3 ಸಾವಿರಕ್ಕೂ ಹೆಚ್ಚು ಪ್ರಕರಣಗಳು ಕಾಣಿಸಿಕೊಂಡಿದ್ದವು. ಮೇ 10ರಿಂದ 4 ಸಾವಿರಕ್ಕೂ ಹೆಚ್ಚು ಪ್ರಕರಣಗಳು ವರದಿಯಾಗಿದ್ದವು. ಮೇ17ರಿಂದ 5 ಸಾವಿರಕ್ಕೂ ಹೆಚ್ಚು ಪ್ರಕರಣಗಳು ಪತ್ತೆಯಾದವು. ಈಗ ಮೇ 21ರಿಂದ 6 ಸಾವಿರಕ್ಕೂ ಹೆಚ್ಚು ಪ್ರಕರಣಗಳು ಗೋಚರಿಸಿದ್ದವು. ಪ್ರತಿದಿನ ಭಾರತದ ಕೇಂದ್ರ ಆರೋಗ್ಯ ಇಲಾಖೆ ಪ್ರಕಟಿಸುವ ಮಾಹಿತಿಗಳ ಪ್ರಕಾರ ಮೇ 6ರಿಂದ ಈವರೆಗಿನ ಚಿತ್ರಣ ಹೀಗಿದೆ...

ಮೇ 6ರಂದು 3,561,
ಮೇ 7ರಂದು 3,390,
ಮೇ 8ರಂದು 3,320,
ಮೇ 9ರಂದು 3,277,
ಮೇ 10ರಂದು 4,213,
ಮೇ 11ರಂದು 3,064,
ಮೇ 12ರಂದು 3,525,
ಮೇ 13ರಂದು 3,722,
ಮೇ 14ರಂದು 3,967,
ಮೇ 15ರಂದು 3,970,
ಮೇ 16ರಂದು 4,987,
ಮೇ 17ರಂದು 5,242,
ಮೇ 18ರಂದು 4,970,
ಮೇ 19ರಂದು 5,611,
ಮೇ 20ರಂದು 5,609,
ಮೇ 21ರಂದು 6,088,
ಮೇ 22ರಂದು 6,654,
ಮೇ 23ರಂದು 6,767,
ಮೇ 24ರಂದು 6,977,
ಮೇ‌ 25ರಂದು 6,535,
ಮೇ 26ರಂದು 6,387.

ಅಲ್ಲದೆ ನಿನ್ನೆ ಒಂದೇ ದಿನ ದೇಶದಲ್ಲಿ 170 ಜನ ಕೊರೋನಾದಿಂದ ಸಾವನ್ನಪ್ಪಿದ್ದಾರೆ. ಇದರಿಂದ ದೇಶದಲ್ಲಿ ಕೊರೋನಾದಿಂದ ಸತ್ತವರ ಸಂಖ್ಯೆ 4,337ಕ್ಕೆ ಏರಿಕೆಯಾಗಿದೆ. ಕೊರೋನಾದಿಂದ ಈವರೆಗೆ ಗುಣಮುಖರಾದವರು  64,425 ಜನ ಮಾತ್ರ ಎಂದು ಕೇಂದ್ರ ಆರೋಗ್ಯ ಇಲಾಖೆ ತಿಳಿಸಿದೆ.

Trending News