ನವದೆಹಲಿ : ಇಡೀ ದೇಶವು ಕರೋನಾ ಸಾಂಕ್ರಾಮಿಕ (Coronavirus) ರೋಗದ ಸೋಂಕಿನಿಂದ ಬಳಲುತ್ತಿದೆ. ಆಮ್ಲಜನಕದ (Oxygen) ಕೊರತೆಯಿಂದಾಗಿ ಅದೆಷ್ಟೋ ಜನ ಪ್ರಾಣ ಕಳೆದುಕೊಂಡಿದ್ದಾರೆ. ಈ ಕಷ್ಟದ ಸಮಯದಲ್ಲಿ ಮಹೀಂದ್ರಾ ಗ್ರೂಪ್ ಅಧ್ಯಕ್ಷ ಆನಂದ್ ಮಹೀಂದ್ರಾ (Anand Mahindra) , ಆಮ್ಲಜನಕವನ್ನು ಪೂರೈಸುವ ಜವಾಬ್ದಾರಿಯನ್ನು ವಹಿಸಿಕೊಂಡಿದ್ದಾರೆ. ಆನಂದ್ ಮಹೀಂದ್ರಾ 'ಆಕ್ಸಿಜನ್ ಆನ್ ವೀಲ್ಸ್' (Oxygen On Wheel ) ಅನ್ನು ಪ್ರಾರಂಭಿಸಿದ್ದಾರೆ.
ಆನಂದ್ ಮಹೀಂದ್ರಾ ಅವರ 'ಆಕ್ಸಿಜನ್ ಆನ್ ವೀಲ್ಸ್' :
ಈ ಅಭಿಯಾನದಲ್ಲಿ ಮಹೀಂದ್ರಾ ಮತ್ತು ಮಹೀಂದ್ರಾ ತನ್ನ ಬೊಲೆರೊ ಪಿಕಪ್ ಟ್ರಕ್ ಮೂಲಕ ಮಹಾರಾಷ್ಟ್ರದಾದ್ಯಂತ (Maharastra) ಆಮ್ಲಜನಕ ಸಿಲಿಂಡರ್‌ಗಳನ್ನು ಪೂರೈಸಲಿದೆ. ಆಮ್ಲಜನಕವನ್ನು (Oxygen) ಆಸ್ಪತ್ರೆಗಳು ಮತ್ತು ಅಗತ್ಯವಿರುವವರ ಮನೆ ಬಾಗಿಲಿಗೆ ತಲುಪಿಸಲಿದೆ. ಆನಂದ್ ಮಹೀಂದ್ರಾ (Anand Mahindra) ತನ್ನ 70 ಬೊಲೆರೊ ಟ್ರಕ್‌ಗಳ ಮೂಲಕ ಆಕ್ಸಿಜನ್ ಸಿಲಿಂಡರ್‌ಗಳನ್ನು ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ತಲುಪಿಸಲಿದೆ. ಮುಂಬೈ, ಥಾಣೆ, ನಾಸಿಕ್ ಮತ್ತು ನಾಗ್ಪುರದಲ್ಲಿ ಈ ಸೌಲಭ್ಯವನ್ನು ಪ್ರಾರಂಭಿಸಲಾಗಿದೆ.
ಇದನ್ನೂ ಓದಿ : ICICI ಬ್ಯಾಂಕ್‌ಗೆ 3 ಕೋಟಿ ರೂ.ಗಳ ದಂಡ ವಿಧಿಸಿದ ಆರ್‌ಬಿಐ, ನಿಮ್ಮ ಮೇಲೆ ಯಾವ ರೀತಿ ಪರಿಣಾಮ ಬೀರಲಿದೆ?
ಮಹಾರಾಷ್ಟ್ರದ ನಂತರ ಇತರ ರಾಜ್ಯಗಳಿಗೂ ನೆರವು :
ಸಾವಿನ ಪ್ರಮಾಣವನ್ನು ಕಡಿಮೆ ಮಾಡಲು ಇಂದು ಆಮ್ಲಜನಕ ಮುಖ್ಯವಾಗಿದೆ ಎಂದು ಆನಂದ್ ಮಹೀಂದ್ರಾ ತಮ್ಮ ಟ್ವೀಟ್ ನಲ್ಲಿ (Tweet) ತಿಳಿಸಿದ್ದಾರೆ. ಸಮಸ್ಯೆ ಆಮ್ಲಜನಕದ ಉತ್ಪಾದನೆಯಲ್ಲ, ಆದರೆ ಉತ್ಪಾದನಾ ಘಟಕಗಳಿಂದ ಆಸ್ಪತ್ರೆಗಳು (Hospital) ಮತ್ತು ಮನೆಗಳಿಗೆ ಸಾಗಿಸುವುದು. ಮಹೀಂದ್ರಾ ಲಾಜಿಸ್ಟಿಕ್ಸ್ ಮೂಲಕ ಜಾರಿಗೆ ತಂದ ಆಕ್ಸಿಜನ್ ಆನ್ ವೀಲ್ಸ್ ಯೋಜನೆಯೊಂದಿಗೆ ಆಕ್ಸಿಜನ್ ತಲುಪಿಸುವ ಕಾರ್ಯ ನಡೆಯಲಿದೆ. ಸದ್ಯಕ್ಕೆ ಈ ಸೇವೆ ಮಹಾರಾಷ್ಟ್ರದಲ್ಲಿ ಆರಮಭಿಸಲಾಗಿದೆ. ಶೀಘ್ರದಲ್ಲೇ ದೇಶದ ಇತರ ರಾಜ್ಯಗಳಿಗೂ ಈ ಸೇವೆಯನ್ನು ವಿಸ್ತರಿಸಲಾಗುವುದು .
Today, Oxygen is the key to reducing mortality. The problem is not of oxygen production but its transportation from producing plants to hospitals & homes. We’re attempting to bridge this gap with “Oxygen on Wheels” a project implemented via Mahindra Logistics (1/5) pic.twitter.com/Cj0CkrfYRo
— anand mahindra (@anandmahindra) May 1, 2021
ಇದನ್ನೂ ಓದಿ : ಎಣ್ಣೆ ಪ್ರಿಯರಿಗೆ ಶಾಕಿಂಗ್ ನ್ಯೂಸ್ -10ರಿಂದ 40 ರೂ ಹೆಚ್ಚಾಗಲಿದೆ ಬೆಲೆ
ಭಾವನಾತ್ಮಕ ವಿಡಿಯೋ ಹಂಚಿಕೊಂಡಿರುವ ಆನಂದ್ ಮಹೀಂದ್ರಾ :
ಈ ಮಧ್ಯೆ, ತಂಪು ಪಾನೀಯ ಕಂಪನಿ ಕೋಕಾ-ಕೋಲಾದ (Coca cola) ಜಾಹೀರಾತು ಹೆಚ್ಚು ವೈರಲ್ ಆಗುತ್ತಿದೆ. ಈ ಜಾಹೀರಾತು, ಜನರಲ್ಲಿ ಭರವಸೆ ಮೂಡಿಸಲು ಯತ್ನಿಸುತ್ತಿದೆ. ಈ ವೀಡಿಯೊದಲ್ಲಿ, ನ್ಯೂ ನಾರ್ಮಲ್ (New normal) ಅಂದರೆ ಏನು ಎನ್ನುವುದನ್ನು ತೋರಿಸಲಾಗಿದೆ. ಅಲ್ಲದೆ ಜನ ಹೇಗೆ ಪರಸ್ಪರ ಸಹಾಯ ಮಾಡುತ್ತಾರೆ ಎಂದು ತೋರಿಸಲಾಗಿದೆ. ಈ ಜಾಹೀರಾತಿನ ಪ್ರದರ್ಶನಕ್ಕೆ ಆನಂದ್ ಮಹೀಂದ್ರಾ ಕೋಕಾ-ಕೋಲಾ ಕಂಪನಿಗೆ ಧನ್ಯವಾದ ಹೇಳಿದ್ದಾರೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.