ಛತ್ತೀಸ್‌ಗಢದ ಬಿಜಾಪುರದಲ್ಲಿ ನಕ್ಸಲರೊಂದಿಗೆ ಎನ್‌ಕೌಂಟರ್‌: ಸಿಆರ್‌ಪಿಎಫ್ ಜವಾನ್ ಹುತಾತ್ಮ

ನಕ್ಸಲರ ಪ್ರತಿದಾಳಿಯಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಸಿಆರ್‌ಪಿಎಫ್ ಜವಾನ್ ಕಾಂತಾ ಪ್ರಸಾದ್ ಅವರನ್ನು ಆಸ್ಪತ್ರೆಗೆ ಸಾಗಿಸಲಾಯಿತು, ಚಿಕಿತ್ಸೆಯ ಸಮಯದಲ್ಲಿ ಅವರು ಹುತಾತ್ಮರಾಗಿದ್ದಾರೆ.

Last Updated : Nov 7, 2019, 11:48 AM IST
ಛತ್ತೀಸ್‌ಗಢದ ಬಿಜಾಪುರದಲ್ಲಿ ನಕ್ಸಲರೊಂದಿಗೆ ಎನ್‌ಕೌಂಟರ್‌: ಸಿಆರ್‌ಪಿಎಫ್ ಜವಾನ್ ಹುತಾತ್ಮ title=
Representational image

ಬಿಜಾಪುರ: ಛತ್ತೀಸ್‌ಗಢದ ಬಿಜಾಪುರ ಜಿಲ್ಲೆಯಲ್ಲಿ ನಕ್ಸಲರೊಂದಿಗಿನ ಎನ್‌ಕೌಂಟರ್ನಲ್ಲಿ ಕೇಂದ್ರ ರಿಸರ್ವ್ ಪೊಲೀಸ್ ಪಡೆ (ಸಿಆರ್‌ಪಿಎಫ್) ಜವಾನ್ ಹುತಾತ್ಮರಾದರು.

ತಕ್ಷಣದ ವರದಿಗಳ ಪ್ರಕಾರ, ಬಿಜಾಪುರ ಜಿಲ್ಲೆಯ ಟೋಂಗುಡಾ-ಪಮೇಡ್ ಪ್ರದೇಶದಲ್ಲಿ ಮುಂಜಾನೆ 4 ಗಂಟೆಗೆ ಈ ಎನ್ಕೌಂಟರ್ ನಡೆದಿದೆ.

ಮೃತ ಸಿಆರ್‌ಪಿಎಫ್ ಜವಾನ್ ಅವರನ್ನು ಕಾಂತಾ ಪ್ರಸಾದ್ ಎಂದು ಗುರುತಿಸಲಾಗಿದೆ. ಅವರು ಸಿಆರ್‌ಪಿಎಫ್ನ 151 ಬಟಾಲಿಯನ್ ನಲ್ಲಿ ಕೆಲಸ ನಿರ್ವಹಿಸುತ್ತಿದ್ದರು.

ಘಟನೆಯನ್ನು ದೃಡೀಕರಿಸಿದ ಎಸ್ಪಿ ಗೋವರ್ಧನ್ ಠಾಕೂರ್ ಅವರು ಬಿಜಾಪುರದ ಟೋಂಗುಡಾ-ಪಮೇಡ್ ಪ್ರದೇಶದಲ್ಲಿ ತಡರಾತ್ರಿ ಈ ಪ್ರದೇಶದಲ್ಲಿ ನಕ್ಸಲರ ವಿರುದ್ಧ ಕಾರ್ಯಾಚರಣೆ ಆರಂಭಿಸಿದ್ದ ಸಂದರ್ಭದಲ್ಲಿ ಈ ಘಟನೆ ನಡೆದಿದೆ ಎಂದು ಮಾಹತಿ ನೀಡಿದರು.

ನಕ್ಸಲರ ಪ್ರತಿದಾಳಿಯಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಸಿಆರ್‌ಪಿಎಫ್ ಜವಾನ್ ಕಾಂತಾ ಪ್ರಸಾದ್ ಅವರನ್ನು ಆಸ್ಪತ್ರೆಗೆ ಸಾಗಿಸಲಾಯಿತು, ಚಿಕಿತ್ಸೆಯ ಸಮಯದಲ್ಲಿ ಅವರು ಹುತಾತ್ಮರಾಗಿದ್ದಾರೆ ಎಂದು ಅವರು ತಿಳಿಸಿದರು.

Trending News