ಈಗ ಭಾರತ ಮತ್ತು ಚೀನಾ ನಡುವೆ 'ಜಲಯುದ್ಧ'!

ಟಿಬೆಟ್‌ನ ಬ್ರಹ್ಮಪುತ್ರ ನದಿಯ ಭಾಗದಲ್ಲಿ ಚೀನಾ ಪ್ರಮುಖ ಜಲವಿದ್ಯುತ್ ಯೋಜನೆಯನ್ನು ನಿರ್ಮಿಸಲು ಯೋಜಿಸುತ್ತಿದೆ.

Last Updated : Dec 2, 2020, 07:35 AM IST
  • ಟಿಬೆಟ್‌ನ ಬ್ರಹ್ಮಪುತ್ರ ನದಿಯ ಭಾಗದಲ್ಲಿ ಚೀನಾ ಪ್ರಮುಖ ಜಲವಿದ್ಯುತ್ ಯೋಜನೆಯನ್ನು ನಿರ್ಮಿಸಲು ಯೋಜಿಸುತ್ತಿದೆ.
  • ದೇಶದ 14 ನೇ ಪಂಚವಾರ್ಷಿಕ ಯೋಜನೆಯ ಪ್ರಸ್ತಾವನೆಯ ಭಾಗವಾಗಿ ಚೀನಾ ಅಣೆಕಟ್ಟು ನಿರ್ಮಿಸಲು ಯೋಜಿಸುತ್ತಿದೆ.
  • ಈ ಅಣೆಕಟ್ಟು ನಿರ್ಮಾಣಕ್ಕೆ ಚೀನಾ ಸರ್ಕಾರ ಈಗಾಗಲೇ ಕಂಪನಿಯನ್ನು ಅಂತಿಮಗೊಳಿಸಿದೆ.
ಈಗ ಭಾರತ ಮತ್ತು ಚೀನಾ ನಡುವೆ 'ಜಲಯುದ್ಧ'! title=

ನವದೆಹಲಿ: ನೆರೆಯ ಚೀನಾ ದೇಶವು ಗಡಿಯಲ್ಲಿ ಸೈನಿಕರ ಮೂಲಕ‌ ಮಾತ್ರ ಕಿರಿಕಿರಿ ಮಾಡುತ್ತಿಲ್ಲ.‌ ಇನ್ನೊಂದೆಡೆ ಟಿಬೆಟಿನ ಬ್ರಹ್ಮಪುತ್ರ ನದಿಗೆ ಬೃಹತ್ ಜಲವಿದ್ಯುತ್ ಯೋಜನೆಯನ್ನು ನಿರ್ಮಿಸಲು ಮುಂದಾಗಿದೆ. ಚೀನಾ ಗಡಿಯಲ್ಲಿ ಜಲವಿದ್ಯುತ್ ಯೋಜನೆ ಹಮ್ಮಿಕೊಳ್ಳುತ್ತಿರುವುದಕ್ಕೆ ಪ್ರತಿಯಾಗಿ ಭಾರತವು ಅರುಣಾಚಲ ಪ್ರದೇಶ (Arunachal Pradesh)ದಲ್ಲಿ ವಿವಿಧೋದ್ದೇಶ ಜಲಾಶಯ ನಿರ್ಮಾಣದ ಬಗ್ಗೆ ಚಿಂತನೆ ನಡೆಸಿದೆ.

ಕೇಂದ್ರ ಜಲಶಕ್ತಿ ಇಲಾಖೆ ಮೂಲಗಳು ಈ ಮಾಹಿತಿಯನ್ನು ಖಚಿತಪಡಿಸಿದ್ದು ಭಾರತ ನಿರ್ಮಿಸಲು ಮುಂದಾಗಿರುವ ವಿವಿಧೋದ್ದೇಶ ಜಲಾಶಯದಿಂದ 10,000 ಮೆಗಾವ್ಯಾಟ್ ಜಲವಿದ್ಯುತ್ ಯೋಜನೆಯನ್ನೂ ಪರಿಗಣಿಸಲಾಗಿದೆ ಎಂದು ಜಲಶಕ್ತಿ ಸಚಿವಾಲಯದ ಆಯುಕ್ತ (ಬ್ರಹ್ಮಪುತ್ರ ಮತ್ತು ಬರಾಕ್) ಟಿ.ಎಸ್. ಮೆಹ್ರಾ ಹೇಳಿದ್ದಾರೆ.

ಚೀನಾದ (China) ಜಲವಿದ್ಯುತ್ ಯೋಜನೆಗೆ ಪ್ರತಿಯಾಗಿ ವಿವಿಧೋದ್ದೇಶ ಜಲಾಶಯ ನಿರ್ಮಾಣ ಮಾಡಲಾಗುತ್ತಿದೆ.‌ ಇದು ಗಡಿಯಲ್ಲಿ ಎರಡೂ ದೇಶಗಳ ಜಲವಿದ್ಯುತ್ ಉತ್ಪಾದನಾ ಸಾಮರ್ಥ್ಯ ಸಮತೋಲನಗೊಳಿಸಲು ಸಹಾಯ ಮಾಡುತ್ತದೆ ಎಂದು ಮೆಹ್ರಾ ಅವರು ಹೇಳಿದ್ದಾರೆ.

ಭಾರತದ ಹೊಡೆತಕ್ಕೆ ಸಾವಿರಾರು ಕೋಟಿ ನಷ್ಟ ಅನುಭವಿಸಿದ ಚೀನಾ

ಅರುಣಾಚಲ ಪ್ರದೇಶದ ಸಿಯಾಂಗ್ ನದಿಯಲ್ಲಿ ಪ್ರಸ್ತಾವಿತ 9.2 ಬಿಸಿಎಂ ಅಪ್ಪರ್ ಸಿಯಾಂಗ್ ಯೋಜನೆ ಕೈಗೆತ್ತಿಕೊಳ್ಳಲಾಗುತ್ತಿದೆ. ಈ ಯೋಜನೆಹೆ ಹೆಚ್ಚುವರಿ ನೀರಿನ ಹರಿವನ್ನು ಬಳಸಲಾಗುತ್ತದೆ ಅಲ್ಲದೆ ನೀರನ್ನು ಸಂಗ್ರಹಿಸಿಟ್ಟುಕೊಂಡು ಅಭಾವ ಸೃಷ್ಟಿಯಾದಾಗ ಬಳಸಬಹುದಾಗಿದೆ. ಈಶಾನ್ಯ ಪ್ರದೇಶದಲ್ಲಿ ಬೀಳುವ ಉತ್ತಮ ಮಳೆಯಿಂದಾಗಿ ಬ್ರಹ್ಮಪುತ್ರ ತುಂಬಿ‌‌ ಹರಿಯುತ್ತದೆ. ಈ ಪೈಕಿ ಬ್ರಹ್ಮಪುತ್ರ ನದಿಗೆ (Brahmaputra River) ಶೇಕಡಾ 90ರಷ್ಟು ನೀರು ತನ್ನ ಉಪನದಿಗಳ ಮೂಲಕೇ ಬರುತ್ತದೆ. ಆ ನೀರನ್ನು ಸದುಪಯೋಗ ಮಾಡಿಕೊಳ್ಳಲು ವಿವಿಧೋದ್ದೇಶ ಜಲಾಶಯ ನಿರ್ಮಾಣ ಯೋಜನೆ ಕೈಗೆತ್ತಿಕೊಳ್ಳಲಾಗುತ್ತಿದೆ ಎಂದು ಮೆಹ್ರಾ ವಿವರಿಸಿದ್ದಾರೆ

ಚಳಿಗಾಲದಲ್ಲಿ ಸಿಯಾಂಗ್ ನದಿಯ ಶೇಕಡಾ 80ರಷ್ಟು ನೀರು ಮೇಲಿನ ಹೊಳೆಯಿಂದ ಬರುತ್ತದೆ ಮತ್ತು ಹಿಮನದಿಗಳು ಅದರ ಮುಖ್ಯ ಮೂಲವಾಗುತ್ತವೆ.‌ ಈ‌ ಹಿನ್ನೆಲೆಯಲ್ಲಿ 80ರ ದಶಕದಿಂದಲೇ ಈ ಯೋಜನೆಯ ಬಗ್ಗೆ ಚರ್ಚೆ ನಡೆಯುತ್ತಿದೆ ಎಂದು ಜಲಶಕ್ತಿ ಸಚಿವಾಲಯದ ಮತ್ತೊಬ್ಬ ಅಧಿಕಾರಿ ತಿಳಿಸಿದ್ದಾರೆ.

ಎಲ್‌ಎಸಿಯಲ್ಲಿ T-90 ಟ್ಯಾಂಕ್‌ಗಳು ಮತ್ತು ಶಸ್ತ್ರಸಜ್ಜಿತ ವಾಹನಗಳನ್ನು ನಿಯೋಜಿಸಿದ ಭಾರತ

ಹೀಗೆ 1980ರಿಂದಲೇ ಚರ್ಚೆಯಲ್ಲಿದ್ದ ಯೋಜನೆಯನ್ನು ಈಗ ಕೈಗೆತ್ತಿಕೊಳ್ಳಲು ಪ್ರಮುಖ ಕಾರಣವೆಂದರೆ ಚೀನಾ. ಕಳೆದ ವಾರ ಚೀನಾದ ವಿದ್ಯುತ್ ನಿರ್ಮಾಣ ನಿಗಮದ ಅಧ್ಯಕ್ಷ ಯಾನ್ ಅವರು ಬೀಜಿಂಗ್ 'ಯಾರ್ಲುಂಗ್ ಜಾಂಗ್ಬೊ (ಬ್ರಹ್ಮಪುತ್ರ ನದಿಯ ಟಿಬೆಟಿಯನ್ ಹೆಸರು) ಕೆಳಭಾಗದಲ್ಲಿ ಜಲವಿದ್ಯುತ್ ಯೋಜನೆಯನ್ನು ಪ್ರಾರಂಭಿಸಲಿದೆ ಮತ್ತು ಈ ಯೋಜನೆಯು ನೀರಿನ ಸಂಪನ್ಮೂಲ ಮತ್ತು ಆಂತರಿಕ ಭದ್ರತೆಯನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ ಎಂದು ಹೇಳಿದ್ದಾರೆ.

LAC ಮೇಲಿನ ಉದ್ವೇಗವನ್ನು ಕಡಿಮೆ ಮಾಡಲು ಭಾರತ ನೀಡಿದೆ ಈ ಹೊಸ ಸೂತ್ರ

ಇದಕ್ಕೆ ಟ್ವೀಟ್ ಮೂಲಕ‌ ಪ್ರತಿಕ್ರಿಯಿಸಿದ ಕಾರ್ಯತಂತ್ರದ ವ್ಯವಹಾರಗಳ ತಜ್ಞ ಬ್ರಹ್ಮ್ ಚೆಲ್ಲಾನಿ "ಭಾರತವು ಮೂರು ರಂಗಗಳಲ್ಲಿ ಚೀನಾದ ಆಕ್ರಮಣವನ್ನು ಎದುರಿಸುತ್ತಿದೆ. ವಿಶ್ವದ ಅತಿದೊಡ್ಡ ನದಿಗಳಲ್ಲಿ ಒಂದಾದ ಬ್ರಹ್ಮಪುತ್ರವು ಚೀನಾ, ಭಾರತ ಮತ್ತು ಬಾಂಗ್ಲಾದೇಶದ ಮೂಲಕ ಹಾದುಹೋಗುತ್ತದೆ ಮತ್ತು ಹಲವಾರು ಉಪನದಿಗಳು ಮತ್ತು ಉಪನದಿಗಳನ್ನು ಹೊಂದಿದೆ" ಎಂದಿದ್ದಾರೆ.

Trending News