ದೆಹಲಿಯ ಗಾಂಧಿ ನಗರದಲ್ಲಿ ಅಗ್ನಿ ಅವಘಡ, ಸ್ಥಳಕ್ಕೆ ತಲುಪಿದ 21 ಅಗ್ನಿಶಾಮಕ ದಳದ ವಾಹನಗಳು

ಈ ಅಗ್ನಿ ಅವಘಡ ಗಾಂಧಿ ನಗರದ ರಸ್ತೆ ಸಂಖ್ಯೆ 3 ರಲ್ಲಿ ಸಂಭವಿಸಿದೆ. ಪ್ರಾಥಮಿಕ ಮಾಹಿತಿಯ ಪ್ರಕಾರ, ಮಾರುಕಟ್ಟೆಯ 3 ಅಂಗಡಿಗಳು ಬೆಂಕಿಗೆ ಆಹುತಿಯಾಗಿವೆ.  

Updated: Aug 13, 2019 , 11:10 AM IST
ದೆಹಲಿಯ ಗಾಂಧಿ ನಗರದಲ್ಲಿ ಅಗ್ನಿ ಅವಘಡ, ಸ್ಥಳಕ್ಕೆ ತಲುಪಿದ 21 ಅಗ್ನಿಶಾಮಕ ದಳದ ವಾಹನಗಳು
Photo Courtesy: ANI

ನವದೆಹಲಿ: ಪೂರ್ವ ದೆಹಲಿಯ ಗಾಂಧಿ ನಗರ ಪ್ರದೇಶದಲ್ಲಿ ಭಾರಿ ಬೆಂಕಿ ಕಾಣಿಸಿಕೊಂಡಿದೆ. ಅಗ್ನಿಶಾಮಕ ದಳದ ತಂಡವು ಬೆಂಕಿಯನ್ನು ನಂದಿಸುವಲ್ಲಿ ನಿರತವಾಗಿದೆ. 

ಈ ಅಗ್ನಿ ಅವಘಡ ಗಾಂಧಿ ನಗರದ ರಸ್ತೆ ಸಂಖ್ಯೆ 3 ರಲ್ಲಿ ಸಂಭವಿಸಿದೆ. ಪ್ರಾಥಮಿಕ ಮಾಹಿತಿಯ ಪ್ರಕಾರ, ಮಾರುಕಟ್ಟೆಯ 3 ಅಂಗಡಿಗಳು ಬೆಂಕಿಗೆ ಆಹುತಿಯಾಗಿವೆ.

ಸುದ್ದಿ ಸಂಸ್ಥೆ ಎಎನ್‌ಐ ಪ್ರಕಾರ, 21 ಅಗ್ನಿಶಾಮಕ ದಳದ ವಾಹನಗಳು ಬೆಂಕಿಯನ್ನು ನಂದಿಸುವಲ್ಲಿ ತೊಡಗಿವೆ. ಆದರೆ ಕಿರಿದಾದ ಬೀದಿಗಳು ಮತ್ತು ಕಿಕ್ಕಿರಿದ ಪ್ರದೇಶದಲ್ಲಿ ಹಬ್ಬಿರುವ ಭಾರೀ ಬೆಂಕಿಯನ್ನು ನಂದಿಸಲು ಹರಸಾಹಸ ಪಡಲಾಗುತ್ತಿದೆ.

ಈವರೆಗೂ ಈ ಅಗ್ನಿ ಅನಾಹುತದಲ್ಲಿ ಯಾವುದೇ ಸಾವುನೋವುಗಳ ಬಗ್ಗೆ ವರದಿಯಾಗಿಲ್ಲ. 

ದೆಹಲಿಯ ಗಾಂಧಿ ನಗರ ಮಾರುಕಟ್ಟೆ ರೆಡಿಮೇಡ್ ಉಡುಪುಗಳ ತಯಾರಿಕೆಯಿಂದ ಹಿಡಿದು, ಚಿಲ್ಲರೆ ವ್ಯಾಪಾರದವರೆಗಿನ ದೊಡ್ಡ ಮಾರುಕಟ್ಟೆಯಾಗಿದೆ.

ಈ ಪ್ರದೇಶದಿಂದಲೇ ದೇಶದ ಅನೇಕ ದೊಡ್ಡ ಮಾರುಕಟ್ಟೆಗಳಿಗೆ ಸರಕುಗಳನ್ನು ಸರಬರಾಜು ಮಾಡಲಾಗುತ್ತದೆ. ಆದ್ದರಿಂದ, ಇಲ್ಲಿ ನಿರಂತರ ಜನಸಂದಣಿ ಇರುತ್ತದೆ.