ಹರ್ಯಾಣ ದಲಿತರ ಹತ್ಯೆ ಪ್ರಕರಣ: 20 ಜನರನ್ನು ತಪ್ಪಿಸ್ಥರೆಂದ ದೆಹಲಿ ಹೈಕೋರ್ಟ್

  

Updated: Aug 24, 2018 , 06:47 PM IST
ಹರ್ಯಾಣ ದಲಿತರ ಹತ್ಯೆ ಪ್ರಕರಣ: 20 ಜನರನ್ನು ತಪ್ಪಿಸ್ಥರೆಂದ ದೆಹಲಿ ಹೈಕೋರ್ಟ್

ನವದೆಹಲಿ: ದೆಹಲಿ ಹೈಕೋರ್ಟ್ ಶುಕ್ರವಾರದಂದು ಹರ್ಯಾಣದ ಮಿರ್ಚಪುರ್ ದಲಿತರ  ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ 20 ಜನರನ್ನು ತಪ್ಪಿತಸ್ಥರೆಂದು ಘೋಷಿಸಿದೆ. 

ಈ ಹಿಂದೆ 2010 ರಲ್ಲಿ ನಡೆದ ಮಿರ್ಚಪುರನಲ್ಲಿ 70 ವರ್ಷದ ದಲಿತ ವ್ಯಕ್ತಿ ಮತ್ತು 17 ವರ್ಷದ ಅವನ ಮಗಳನ್ನು 2010 ಜೀವಂತವಾಗಿ ಸುಡಲಾಗಿತ್ತು.ಈ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಒಟ್ಟು 20 ಜನರು ಆರೋಪಿಗಳ ಮೇಲಿರುವ ಕೇಸ್ ನ್ನು ಸ್ಥಳೀಯ ನ್ಯಾಯಾಲಯ ವಜಾಗೊಳಿಸಿತ್ತು.ಅದರಲ್ಲಿ 97 ಜನರಲ್ಲಿ ಒಟ್ಟು 82 ಜನರ ಮೇಲಿನ ಕೇಸನ್ನು ಸ್ಥಳೀಯ ನ್ಯಾಯಾಲಯ ವಜಾಗೊಳಿಸಿತ್ತು, ಆದರೆ ಉಳಿದ 15 ಜನರನ್ನು ಅದು ಆರೋಪಿಗಳೆಂದು ಹೇಳಿರಲಿಲ್ಲ.

ಆದರೆ ಈಗ ಈ ಪ್ರಕರಣ ದೆಹಲಿ ಹೈಕೋರ್ಟ್ ಮೆಟ್ಟಿನಲ್ಲಿ ಬಂದಾಗ ಅದು ಸಾರಾಸಗಟಾಗಿ ಸ್ಥಳೀಯ ನ್ಯಾಯಾಲಯದ ತೀರ್ಪನ್ನು ತಿರಸ್ಕರಿಸಿದೆ. ಅಲ್ಲದೆ 20 ಜನರನ್ನು ಅಪರಾಧಿಗಳು ಎಂದು ಘೋಷಿಸಿದೆ. ತನ್ನ ತೀರ್ಪಿನಲ್ಲಿ ಜಾಟ್ ಸಮುದಾಯವು ಉದ್ದೇಶಪೂರ್ವಕವಾಗಿ ವಾಲ್ಮೀಕಿ ಸಮುದಾಯದ ಮೇಲೆ ಹಲ್ಲೆ ಮಾಡಿದೆ ಎಂದು ಕೋರ್ಟ್ ತಿಳಿಸಿದೆ.