ದೆಹಲಿ ಹಿಂಸಾಚಾರ: ಆಮ್ ಆದ್ಮಿ ಪಕ್ಷದ ಮುಖಂಡನ ಮೇಲೆ ಕೊಲೆ ಪ್ರಕರಣ ದಾಖಲು

ಇಂದು ಸಂಜೆ ಎಎಪಿ ನಾಯಕ ತಾಹಿರ್ ಹುಸೇನ್ ಮತ್ತು ಇತರ ಅಪರಿಚಿತ ಜನರ ವಿರುದ್ಧ ಕೊಲೆ ಆರೋಪಗಳನ್ನು ದಾಖಲಿಸಲಾಗಿದೆ, ಗುಪ್ತಚರ ಬ್ಯೂರೋ (ಐಬಿ) ಉದ್ಯೋಗಿ ಅಂಕಿತ್ ಶರ್ಮಾ ಅವರ ಸಾವಿನಲ್ಲಿ ಅವರು ಭಾಗಿಯಾಗಿದ್ದಾರೆ ಎಂಬ ಆಧಾರದ ಮೇಲೆ ಪ್ರಕರಣ ದಾಖಲಿಸಲಾಗಿದೆ.

Last Updated : Feb 27, 2020, 09:23 PM IST
ದೆಹಲಿ ಹಿಂಸಾಚಾರ: ಆಮ್ ಆದ್ಮಿ ಪಕ್ಷದ ಮುಖಂಡನ ಮೇಲೆ ಕೊಲೆ ಪ್ರಕರಣ ದಾಖಲು  title=
file photo

ನವದೆಹಲಿ: ಇಂದು ಸಂಜೆ ಎಎಪಿ ನಾಯಕ ತಾಹಿರ್ ಹುಸೇನ್ ಮತ್ತು ಇತರ ಅಪರಿಚಿತ ಜನರ ವಿರುದ್ಧ ಕೊಲೆ ಆರೋಪಗಳನ್ನು ದಾಖಲಿಸಲಾಗಿದೆ, ಗುಪ್ತಚರ ಬ್ಯೂರೋ (ಐಬಿ) ಉದ್ಯೋಗಿ ಅಂಕಿತ್ ಶರ್ಮಾ ಅವರ ಸಾವಿನಲ್ಲಿ ಅವರು ಭಾಗಿಯಾಗಿದ್ದಾರೆ ಎಂಬ ಆಧಾರದ ಮೇಲೆ ಪ್ರಕರಣ ದಾಖಲಿಸಲಾಗಿದೆ.

ಈಶಾನ್ಯ ದೆಹಲಿ ಪೌರತ್ವ ಕಾನೂನು ಪ್ರತಿಭಟನೆಯ ಮೇಲಿನ ಹಿಂಸಾಚಾರದಿಂದ ಹಿಂಸಾಚಾರದಿಂದಾಗಿ 30ಕ್ಕೂ ಅಧಿಕ ಜನರು ಸಾವನ್ನಪ್ಪಿದ್ದಲ್ಲೆದೆ 150ಕ್ಕೂ ಹೆಚ್ಚು ಜನರು ಗಲಭೆಯಲ್ಲಿ ಗಾಯಗೊಂಡಿದ್ದರು.ಜಾಫ್ರಾಬಾದ್‌ನ ಚರಂಡಿಯಲ್ಲಿ ಅಂಕಿತ್ ಶರ್ಮಾ ಮೃತ ದೇಹವು ಪತ್ತೆಯಾಗಿತ್ತು, ಉದ್ರಿಕ್ತ ಗುಂಪೊಂದು ಮಂಗಳವಾರ ಮನೆಗೆ ತೆರಳುತ್ತಿದ್ದಾಗ ಜನಸಮೂಹವೊಂದರ ಮೇಲೆ ಹಲ್ಲೆ ನಡೆಸಿ ಇರಿದಿದೆ. ಇಂದು ಬಿಡುಗಡೆಯಾದ ಮರಣೋತ್ತರ ವರದಿಯು ಅವರ ದೇಹದಾದ್ಯಂತ ಅನೇಕ ಇರಿತದ ಗಾಯಗಳನ್ನು ಸೂಚಿಸುತ್ತದೆ.

ಬುಧವಾರ ಶವ ಪತ್ತೆಯಾದ ನಂತರ, ಐಬಿ ಉದ್ಯೋಗಿಯೂ ಆಗಿರುವ ಅವರ ತಂದೆ ರವೀಂದರ್ ಶರ್ಮಾ, ಹುಸೇನ್ ಅವರ ಬೆಂಬಲಿಗರು ತಮ್ಮ ಮಗನನ್ನು ಕೊಂದಿದ್ದಾರೆ ಎಂದು ಆರೋಪಿಸಿದ್ದಾರೆ. ತನ್ನ ಮಗನನ್ನು ಹೊಡೆದ ನಂತರ ಗುಂಡು ಹಾರಿಸಲಾಗಿದೆ ಎಂದು ಅವರು ಆರೋಪಿಸಿದ್ದಾರೆ.ಅಂಕಿತ್ ಶರ್ಮಾ ಅವರ ಸಾವಿನಲ್ಲಿ ಹುಸೇನ್ ಭಾಗಿಯಾಗಿದ್ದಾರೆ ಎನ್ನುವ ಆರೋಪವನ್ನು  ಬಿಜೆಪಿ ನಾಯಕ ಕಪಿಲ್ ಶರ್ಮಾ ಮಾಡಿದ್ದಾರೆ.

'ಕೊಲೆಗಾರ ಹುಸೇನ್. ವೀಡಿಯೊದಲ್ಲಿ, ಕೋಲುಗಳು, ಕಲ್ಲುಗಳು, ಗುಂಡುಗಳು ಮತ್ತು ಪೆಟ್ರೋಲ್ ಬಾಂಬುಗಳನ್ನು ಹೊತ್ತ ಮುಖವಾಡದ ಹುಡುಗರೊಂದಿಗೆ ಅವನನ್ನು ಕಾಣಬಹುದು. ಅವರು ಕೇಜ್ರಿವಾಲ್ ಮತ್ತು ಎಎಪಿ ಮುಖಂಡರೊಂದಿಗೆ ನಿರಂತರವಾಗಿ ಮಾತನಾಡುತ್ತಿದ್ದರು" ಎಂದು  ಕಪಿಲ್ ಮಿಶ್ರಾ ಸುದ್ದಿ ಸಂಸ್ಥೆ ಎಎನ್‌ಐ ಗೆ ತಿಳಿಸಿದ್ದಾರೆ

Trending News