Chamarajanagar: ಜರ್ಮನ್ನರಿಂದ ಗುಂಡ್ಲುಪೇಟೆಯಲ್ಲಿ ಅರಿಶಿಣ ಬೆಳೆ ಬೆಳವಣಿಗೆ ಅಧ್ಯಯನ

Turmeric Crop Growth Study: ಕೃಷಿ ಕಾರ್ಮಿಕರ ಕೊರತೆ ಆಗುತ್ತಿರುವುದರಿಂದ ಅಲ್ಲದೆ ಯಂತ್ರದಲ್ಲೇ ಅರಿಶಿನವನ್ನು ಒಕ್ಕಣೆ ಮಾಡುವ ಉದ್ದೇಶವನ್ನು ಹೊಂದಲಾಗಿದೆ. ಈಗಾಗಲೇ ಸುಮಾರು ಕಡೆ ನಾಟಿ ಮಾಡಿದ್ದು, ಯಂತ್ರದಲ್ಲಿ ನಾಟಿ ಮಾಡಿದ ಜಮೀನುಗಳಲ್ಲಿ ಗಿಡಗಳು ಹೇಗೆ ಬೆಳವಣಿಗೆ ಆಗುತ್ತಿದೆ ಅನ್ನುವುದನ್ನು ಖುದ್ದಾಗಿ ಪರಿಶೀಲಿಸಲಾಯಿತು.

Written by - Zee Kannada News Desk | Last Updated : Jun 27, 2024, 04:54 PM IST
  • ಜರ್ಮನ್ನರಿಂದ ಗುಂಡ್ಲುಪೇಟೆಯಲ್ಲಿ ಅರಿಶಿಣ ಬೆಳೆ ಬೆಳವಣಿಗೆ ಅಧ್ಯಯನ
  • ಗುಂಡ್ಲುಪೇಟೆಯ ಮಾಡ್ರಹಳ್ಳಿ ಹಾಗೂ ಹೆಗ್ಗಡಹಳ್ಳಿಯ ಜಮೀನುಗಳಿಗೆ ಭೇಟಿ
  • ನಾಟಿ ಮಾಡಿದ ಜಮೀನುಗಳಲ್ಲಿ ಗಿಡಗಳ ಬೆಳವಣಿಗೆ ಬಗ್ಗೆ ಪರಿಶೀಲನೆ
Chamarajanagar: ಜರ್ಮನ್ನರಿಂದ ಗುಂಡ್ಲುಪೇಟೆಯಲ್ಲಿ ಅರಿಶಿಣ ಬೆಳೆ ಬೆಳವಣಿಗೆ ಅಧ್ಯಯನ title=
ಅರಿಶಿಣ ಬೆಳೆ ಬೆಳವಣಿಗೆ ಅಧ್ಯಯನ

Turmeric Crop Growth Study in Chamarajanagar: ಗುಂಡ್ಲುಪೇಟೆ ತಾಲೂಕಿನ ಮಾಡ್ರಹಳ್ಳಿ ಹಾಗೂ ಹೆಗ್ಗಡಹಳ್ಳಿ ಗ್ರಾಮದ ರೈತರ ಜಮೀನುಗಳಿಗೆ ಜರ್ಮನಿ ದೇಶದ ಗ್ರಿಮ್ಮೆ ಕಂಪನಿಯ ಎಂಡಿ. ಫ್ರೆಂಜ್ ಬೆರ್ನ್ಡ್ ಕೃತಪ್, ಸಿಇಓ ಅಭಿಷೇಕ್ ಸಿಂಗ್ ಹಾಗೂ ಭಾರತದ ಮುಖ್ಯಸ್ಥ ಹಿಮಾನ್ಯ ತೆರಳಿ ಅವರು ಅರಿಶಿಣ ಬೆಳೆ ಬೆಳವಣಿಗೆ ಅಧ್ಯಯನ ನಡೆಸಿದ್ದಾರೆ. ಅರಿಶಿಣವನ್ನು ಯಂತ್ರದಲ್ಲಿ ನಾಟಿ ಮಾಡಿದ ಜಮೀನುಗಳಲ್ಲಿ ಗಿಡಗಳು ಹೇಗೆ ಬೆಳವಣಿಗೆ ಆಗುತ್ತಿದೆ ಎಂಬುದರ ಬಗ್ಗೆ ಅವರು ಪರಿಶೀಲನೆ ನಡೆಸಿದರು.

ರಾಜ್ಯ ಅರಿಶಿಣ ಬೆಳೆಗಾರರ ಒಕ್ಕೂಟ ಮತ್ತು ಶ್ರಮ ಸಂಜಾತ ರೈತ ಉತ್ಪಾದಕರ ಕಂಪನಿ ಅರಿಶಿಣ ಕೃಷಿಯನ್ನು ಯಾಂತ್ರೀಕರಣಗೊಳಿಸುವ ನಿಟ್ಟಿನಲ್ಲಿ ಜರ್ಮನಿ ದೇಶದ ಗ್ರಿಮ್ಮೆ ಕಂಪನಿಯ ಜೊತೆಗೆ ಕೆಲಸ ನಿರ್ವಹಿಸುತ್ತಿದೆ. ಇದನ್ನು ಕಾರ್ಯುರೂಪಕ್ಕೆ ತರಲು ಗುಂಡ್ಲುಪೇಟೆ ತಾಲೂಕಿನಲ್ಲಿ ಈ ಸಾಲಿನಿಂದ ಅರಿಶಿಣವನ್ನು ಯಂತ್ರದಲ್ಲಿ ನಾಟಿ ಮಾಡಲಾಗುತ್ತಿದೆ.

ಇದನ್ನೂ ಓದಿ: ಬೆಂಗಳೂರು ವಿಶ್ವವಿಖ್ಯಾತವಾಗಲು ಕೆಂಪೇಗೌಡರು ಕಾರಣ:ಸಿಎಂ ಸಿದ್ದರಾಮಯ್ಯ

ಕೃಷಿ ಕಾರ್ಮಿಕರ ಕೊರತೆ ಆಗುತ್ತಿರುವುದರಿಂದ ಅಲ್ಲದೆ ಯಂತ್ರದಲ್ಲೇ ಅರಿಶಿನವನ್ನು ಒಕ್ಕಣೆ ಮಾಡುವ ಉದ್ದೇಶವನ್ನು ಹೊಂದಲಾಗಿದೆ. ಈಗಾಗಲೇ ಸುಮಾರು ಕಡೆ ನಾಟಿ ಮಾಡಿದ್ದು, ಯಂತ್ರದಲ್ಲಿ ನಾಟಿ ಮಾಡಿದ ಜಮೀನುಗಳಲ್ಲಿ ಗಿಡಗಳು ಹೇಗೆ ಬೆಳವಣಿಗೆ ಆಗುತ್ತಿದೆ ಅನ್ನುವುದನ್ನು ಖುದ್ದಾಗಿ ಪರಿಶೀಲಿಸಲಾಯಿತು.

ಗ್ರಿಮ್ಮೆ ಕಂಪನಿಯವರು ರೈತರ ಜಮೀನುಗಳಿಗೆ ತೆರಳಿ ವೀಕ್ಷಣೆ ಮಾಡುವ ಜೊತೆಗೆ ಇಲ್ಲಿನ ಬೆಳೆಗಾರರೊಂದಿಗೆ ಸಮಾಲೋಚನೆ ನಡೆಸಿದರು. ಈ ಸಂದರ್ಭದಲ್ಲಿ ಅರಿಶಿಣ ಬೆಳೆಗಾರರ ಒಕ್ಕೂಟದ 100ಕ್ಕೂ ಹೆಚ್ಚು ರೈತರು ಉಪಸ್ಥಿತರಿದ್ದರು.

ಇದನ್ನೂ ಓದಿ: ಮಾಧ್ಯಮಗಳ ಮುಂದೆ ಮಾತನಾಡುವವರು, ಹೈಕಮಾಂಡ್ ಬಳಿ ಹೋಗಿ ಮಾತನಾಡಲಿ: ಡಿಸಿಎಂ ಡಿಕೆ ಶಿವಕುಮಾರ್

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News