Digital Beggar: ಈತನೇ ನೋಡಿ ಹೊಸ ಜಮಾನಾ Digital ಭಿಕ್ಷುಕ, 'ಚಿಲ್ಲರೆ ಇಲ್ಲ ಮುಂದಕ್ಕೆ ಹೋಗು' ನೆಪ ಈತ ಕೇಳಲ್ವಂತೆ!

Digital Beggar - ಡಿಜಿಟಲ್ ಭಿಕ್ಷುಕನಾಗಿರುವುದರಿಂದ ಗಳಿಕೆ ಹೆಚ್ಚಿದೆ ಎನ್ನುತ್ತಾರೆ ರಾಜು.

Written by - Nitin Tabib | Last Updated : Feb 8, 2022, 06:59 AM IST
  • ಬಿಹಾರದ ಬೆಟ್ಟಿಯಾದಲ್ಲೊಬ್ಬ ಡಿಜಿಟಲ್ ಬೆಗ್ಗರ್
  • ಡಿಜಿಟಲ್ ಬೆಗ್ಗಿಂಗ್ ನಿಂದ ಅದಾಯ ಹೆಚ್ಚಿದೆ ಎನ್ನುವ ರಾಜು
  • ಚಿಲ್ಲರೆ ಸಮಸ್ಯೆಗಾಗಿ ಬ್ಯಾಂಕ್ ನಲ್ಲಿ ಖಾತೆ ತೆರೆಯಬೇಕಾಯಿತು ಎನ್ನುತ್ತಾನೆ ರಾಜು.
Digital Beggar: ಈತನೇ ನೋಡಿ ಹೊಸ ಜಮಾನಾ Digital ಭಿಕ್ಷುಕ, 'ಚಿಲ್ಲರೆ ಇಲ್ಲ ಮುಂದಕ್ಕೆ ಹೋಗು' ನೆಪ ಈತ ಕೇಳಲ್ವಂತೆ! title=
Digital Beggar

Digital Beggar - ಬಸ್ ನಿಲ್ದಾಣ ಅಥವಾ ರೈಲ್ವೆ ನಿಲ್ದಾಣದ ಮೂಲಕ ಹಾದುಹೋಗುವಾಗ, ಸಹಾಯಕ್ಕಾಗಿ ನಿಮ್ಮ ಹಿಂದೆ ಓಡುವ ಅನೇಕ ಭಿಕ್ಷುಕರನ್ನು ನೀವು ನೋಡಿರಬೇಕು. ಅವರನ್ನು ತಪ್ಪಿಸಲು, ನೀವು ಅನೇಕ ಬಾರಿ 'ಚಿಲ್ಲರೆ ಇಲ್ಲ ಮುಂದಕ್ಕೆ ಹೋಗು' ಎಂದು ಹೇಳುತ್ತೀರಿ, ಆದರೆ ನೀವು ಬಿಹಾರದ ಬೆಟ್ಟಿಯಾ ರೈಲು ನಿಲ್ದಾಣದಲ್ಲಿದ್ದರೆ, ನಿಮ್ಮ ನೆಪ ಇಲ್ಲಿ ಕೆಲಸ ಮಾಡುವುದಿಲ್ಲ. ಏಕೆಂದರೆ ಈ ನಿಲ್ದಾಣದಲ್ಲಿರುವ ಭಿಕ್ಷುಕ ಕೂಡ ಡಿಜಿಟಲ್ ಪಾವತಿಯಿಂದ ಹಣ ಪಡೆಯುತ್ತಾನೆ.

ಬಿಹಾರದ (Bihar) ಬೆಟ್ಟಿಯಾ (Bettia) ರೈಲು ನಿಲ್ದಾಣದಲ್ಲಿ ಇ-ವ್ಯಾಲೆಟ್‌ನ QR CODE ಅನ್ನು ಕುತ್ತಿಗೆಗೆ ನೇತುಹಾಕಿಕೊಂಡಿರುವ ಭಿಕ್ಷುಕನ ಹೆಸರು ರಾಜು ಪ್ರಸಾದ್ (Raju Prasad). ರಾಜು ಬಾಲ್ಯದಿಂದಲೂ ಸ್ಟೇಷನ್ ನಲ್ಲಿ ವಾಸವಾಗಿದ್ದು, ಭಿಕ್ಷೆ ಬೇಡುತ್ತಾ ಜೀವನ ಸಾಗಿಸುತ್ತಾನೆ. ಅಷ್ಟೇ ಅಲ್ಲ, ಅಲ್ಲಿನ ಜನರು ಆತನಿಗೆ ಡಿಜಿಟಲ್ ಭಿಕ್ಷುಕ ಎಂದೇ ಕರೆಯುತ್ತಾರೆ.

ಈ ಕುರಿತು ಹೇಳುವ ರಾಜು, ಭಿಕ್ಷೆ ಕೇಳಿದಾಗ ಸಾಕಷ್ಟು ಜನರು 'ಚಿಲ್ಲರೆ ಇಲ್ಲ' ಎಂದು ಹೇಳುತ್ತಾರೆ. ಹೀಗಾಗಿ ನಾನು  ಬ್ಯಾಂಕ್ ನಲ್ಲಿ ಖಾತೆ ತೆರೆದಿದ್ದೇನೆ. ಅದೇನೆಂದರೆ, ಈಗ ರಾಜು ಜನರಿಂದ ಚಿಲ್ಲರೆ  ತೆಗೆದುಕೊಳ್ಳುವುದಿಲ್ಲ, ಆದರೆ ಫೋನ್-ಪೆಯಲ್ಲಿರುವ ಕ್ಯೂಆರ್ ಕೋಡ್ ಅನ್ನು ಸ್ಕ್ಯಾನ್ ಮಾಡುವ ಮೂಲಕ ಭಿಕ್ಷಾಟನೆ ಹಣವನ್ನು ಕಳುಹಿಸಲು ಕೇಳಿಕೊಳ್ಳುತ್ತಾನೆ. ಡಿಜಿಟಲ್ ಭಿಕ್ಷುಕನಾಗಿರುವುದರಿಂದ ಗಳಿಕೆ ಹೆಚ್ಚಿದೆ ಎನ್ನುತ್ತಾನೆ ರಾಜು.

ತಾವು ಪ್ರಧಾನಿ ನರೇಂದ್ರ ಮೋದಿ (PM Narendra Modi) ಹಾಗೂ ಲಾಲು ಪ್ರಸಾದ್ ಯಾದವ್ ಅವರ ಅಭಿಮಾನಿಯಾಗಿರುವುದಾಗಿ ರಾಜು ಹೇಳುತ್ತಾನೆ. ರೇಲ್ವೆ ಸ್ಟೇಷನ್ ನಲ್ಲಿ ಕೆಲಸ ಮಾಡುವ ಜನರ ಪ್ರಕಾರ, ಮಾನಸಿಕವಾಗಿ  ತಿಳುವಳಿಕೆ ಕಡಿಮೆ ಇರುವ ಕಾರಣ ರಾಜು ಬಳಿ ಕೆಲಸ ಇರಲಿಲ್ಲ, ಹೀಗಾಗಿ ಹೀಗಾಗಿ ಭಿಕ್ಷೆ ಬೇಡುವುದನ್ನೇ ಆತ ನನ್ನ ನೌಕರಿಯನಾಗಿಸಿಕೊಂಡಿದ್ದಾನೆ ಎನ್ನುತ್ತಾರೆ. 

ಇದನ್ನೂ ಓದಿ-Samantha ಗೂ ಮುನ್ನ 'O Antava Mava' ಹಾಡಿಗಾಗಿ ಯಾರ್ಯಾರನ್ನು ಸಂಪರ್ಕಿಸಲಾಗಿತ್ತು ಗೊತ್ತಾ?

ಇನ್ನೊಂದೆಡೆ QR Code ಬಳಕೆಯ ಮೂಲಕ ಭಿಕ್ಷೆ ಬೇಡುವ ಕಾರಣ ದೇಶಾದ್ಯಂತ ರಾಜು ಬಗ್ಗೆ ಭಾರಿ ಚರ್ಚೆಯೇ ನಡೆಯುತ್ತಿದೆ. 

ಇದನ್ನೂ ಓದಿ-Shocking: ಕೇವಲ 900 ರೂ.ಗಾಗಿ ತಂದೆಯನ್ನೇ ಹೊಡೆದು ಕೊಂದ ಮಗ..!

'ತಮ್ಮ ಬಳಿ ಚಿಲ್ಲರೆ ಹಣವಿಲ್ಲ ಎಂದು ಅನೇಕ ಬಾರಿ ಜನರು ಸಹಾಯವನ್ನು ನಿರಾಕರಿಸುತ್ತಾರೆ. ಫೋನ್ ಪೇ ಇತ್ಯಾದಿ ಇ-ವ್ಯಾಲೆಟ್‌ಗಳ ಯುಗದಲ್ಲಿ ಈಗ ಯಾರು ನಗದು ತೆಗೆದುಕೊಂಡು ಸಾಗುತ್ತಾರೆ ಎಂದು ಹಲವು ಯಾತ್ರಿಗಳು ಅನ್ನುವುದನ್ನು ನಾನು ಗಮನಿಸಿದೆ. ಅದಕ್ಕಾಗಿಯೇ ನಾನು ಬ್ಯಾಂಕ್ ಖಾತೆಯನ್ನು ತೆರೆದಿದ್ದೇನೆ, ಜೊತೆಗೆ ಇ-ವ್ಯಾಲೆಟ್ ಅನ್ನು ರಚಿಸಿದೆ. ಈಗ ನಾನು Google Pay ಮತ್ತು Phone Pay ಇತ್ಯಾದಿಗಳ QR ಕೋಡ್ ಮೂಲಕ ಭಿಕ್ಷೆ ಬೇಡುತ್ತೇನೆ' ಎಂದು ರಾಜು ಹೇಳುತ್ತಾನೆ.

ಇದನ್ನೂ ಓದಿ-ಈ ಉಂಗುರ ಧರಿಸುವುದರಿಂದ ಹೆಚ್ಚಾಗುತ್ತದೆ ಅದೃಷ್ಟ, ಆರೋಗ್ಯವೂ ಚೆನ್ನಾಗಿರುತ್ತದೆ!

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

Trending News