'Your Honour' ಬಳಕೆಗೆ ಆಕ್ಷೇಪ ವ್ಯಕ್ತಪಡಿಸಿದ ಸರ್ವೊಚ್ಛ ನ್ಯಾಯಾಲಯ

ನ್ಯಾಯಾಧೀಶರನ್ನು 'Your Honour' ಎಂದು ಸಂಬೋಧಿಸಿದ ಕಾನೂನು ವಿದ್ಯಾರ್ಥಿಯೊಬ್ಬನ ವಾದಕ್ಕೆ ಸುಪ್ರೀಂ ಕೋರ್ಟ್ (Supreme Corut) ಸೋಮವಾರ ಆಕ್ಷೇಪ ವ್ಯಕ್ತಪಡಿಸಿದೆ.

Written by - Nitin Tabib | Last Updated : Feb 23, 2021, 09:42 PM IST
  • 'Your Honour' ಎಂದು ನ್ಯಾಯಮೂರ್ತಿಗಳನ್ನು ಸಂಬೋಧಿಸಿದ ಕಾನೂನು ವಿದ್ಯಾರ್ಥಿ.
  • ವಿದ್ಯಾರ್ಥಿಯ ಸಂಬೋಧನೆಗೆ ಆಕ್ಷೇಪ ಎತ್ತಿದ CJI SA ಬೋಬ್ದೆ.
  • ಬಳಿಕ ಕ್ಷಮೆಯಾಚಿಸಿ 'My Lord' ಎಂದು ಸಂಬೋಧಿಸಿದ ವಿದ್ಯಾರ್ಥಿ.
'Your Honour' ಬಳಕೆಗೆ ಆಕ್ಷೇಪ ವ್ಯಕ್ತಪಡಿಸಿದ ಸರ್ವೊಚ್ಛ ನ್ಯಾಯಾಲಯ  title=
Supreme Court (File Photo)

ನವದೆಹಲಿ: ನ್ಯಾಯಾಧೀಶರನ್ನು 'Your Honour' ಎಂದು ಸಂಬೋಧಿಸಿದ ಕಾನೂನು ವಿದ್ಯಾರ್ಥಿಯೊಬ್ಬನ ವಾದಕ್ಕೆ ಸುಪ್ರೀಂ ಕೋರ್ಟ್ (Supreme Corut) ಸೋಮವಾರ ಆಕ್ಷೇಪ ವ್ಯಕ್ತಪಡಿಸಿದೆ. ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ (Chief Justice Of India) ಎಸ್‌ಎ ಬೊಬ್ಡೆ (S.A. Bobde)  ಅವರು ಅರ್ಜಿದಾರರಿಗೆ ನೀವು ನಮಗೆ 'Your Honour' ಎಂದು ಸಂಬೋಧಿಸಿದಾಗ ನೀವು ಯುನೈಟೆಡ್ ಸ್ಟೇಟ್ಸ್‌ನ ಸುಪ್ರೀಂ ಕೋರ್ಟ್ ಅಥವಾ ಮ್ಯಾಜಿಸ್ಟ್ರೇಟ್ ಅನ್ನು ನಿಮ್ಮ ಮನಸ್ಸಿನಲ್ಲಿಟ್ಟುಕೊಂಡಿರುತ್ತಿರಿ, ಆದರೆ ನಾವು ಅವರೆರಡು ಇಲ್ಲ.

ಇದನ್ನೂ ಓದಿ- Facebook-WhatsAppಗೆ ಸುಪ್ರೀಂ ತಪರಾಕಿ, ಜನರ Privacy ಬೆಲೆ 3 ಟ್ರಿಲಿಯನ್ ಗೂ ಅಧಿಕ

ಸುಪ್ರೀಂ ಕೋರ್ಟ್‌ನ (Supreme Corut) ಆಕ್ಷೇಪಣೆಯ ನಂತರ, ಅರ್ಜಿದಾರರು ತಕ್ಷಣ ಕ್ಷಮೆಯಾಚಿಸಿದ್ದಾರೆ ಮತ್ತು ಅವರು 'My Lord' ಪದವನ್ನು ಬಳಸುವುದಾಗಿ ಹೇಳಿದ್ದಾರೆ. ಆ ನಂತರ ಸಿಜೆಐ ಅರ್ಜಿದಾರರಿಗೆ ನೀವು ನಮ್ಮನ್ನು ಏನೆಂದು ಸಂಬೋಧಿಸುತ್ತೀರಿ ಇದು ನಮ್ಮ ವಿಷಯವಾಗಿಲ್ಲ . ಆದರೆ, ತಪ್ಪಾದ ಶಬ್ದಗಳ ಬಳಕೆ ಮಾಡಬೇಡಿ ಎಂದಿದ್ದಾರೆ. ಕೆಲ ನ್ಯಾಯಾಲಯದಲ್ಲಿ ಖಾಲಿ ಇರುವ ಜಾಗಗಳನ್ನು ಭರ್ತಿ ಮಾಡುವುದರ ಸಂಬಂಧ ನ್ಯಾಯಾಲಯದಲ್ಲಿ ಅರ್ಜಿ ದಾಖಲಿಸಿದ್ದರು.

ಇದನ್ನೂ ಓದಿ-WhatsApp ಹೊಸ ನೀತಿಯ ವಿರುದ್ಧ ಸಲ್ಲಿಸಲಾಗಿರುವ ಅರ್ಜಿ ಆಲಿಸಲು ಸುಪ್ರೀಂ ನಕಾರ

ಈ ಕುರಿತು ಕಾನೂನು ವಿದ್ಯಾರ್ಥಿಗೆ ಸಮಜಾಯಿಸಿ ನೀಡಿರುವ ನ್ಯಾಯಮೂರ್ತಿ ವಿ ರಾಮಸುಬ್ರಮಣ್ಯಂ, ನಿಮ್ಮ ವಾದದಲ್ಲಿ ಏನಾದರೂ ಪ್ರಮುಖ ಅಂಶ ಕಾಣೆಯಾಗಿದೆ ಮತ್ತು ಈ ಪ್ರಕರಣದಲ್ಲಿ ನೀವು ಸಾಕಷ್ಟು ಹೋಮ್ ವರ್ಕ್ ಮಾಡದೆ ವಾದ ಮಂಡಿಸಲು ಬಂದಿರುವಿರಿ ಎಂದು ಕಾನೂನು ವಿದ್ಯಾರ್ಥಿಗೆ ವಿವರಿಸಿದ್ದಾರೆ. ಕಾನೂನು ವಿದ್ಯಾರ್ಥಿ ಮಲಿಕ್ ಮಜಾರ್ ಸುಲ್ತಾನ್ ಅವರು ಪ್ರಕರಣದ ಸೂಚನೆಗಳನ್ನು ಮರೆತಿದ್ದಾರೆ ಮತ್ತು ಅಧೀನ ನ್ಯಾಯಾಂಗಕ್ಕೆ ನೇಮಕಾತಿಗಳನ್ನು ನಿಗದಿಪಡಿಸಲಾಗಿರುವ ಸಮಯದ ಮಿತಿಯಲ್ಲೇ ಮಾಡಲಾಗುತ್ತದೆ ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ-'ಬಟ್ಟೆ ಬಿಚ್ಚದೆ ಎದೆಗೆ ಕೈಹಾಕುವುದು ಲೈಂಗಿಕ ಕಿರುಕುಳ ಅಲ್ಲ' , HC ತೀರ್ಪಿಗೆ ಸುಪ್ರೀಂ ತಡೆ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News