'Love Jihad' ಕಾನೂನಿನ ಮೇಲೆ Stay ನೀಡಲು ನಿರಾಕರಿಸಿದ SC

 Love Jihad: ಯುಪಿ ಹಾಗೂ ಉತ್ತರಾಖಂಡ್ ರಾಜ್ಯಗಳ ಲವ್ ಜಿಹಾದ್ ಕಾನೂನುಗಳ ಕುರಿತು ದಾಖಲಾಗಿರುವ ಅರ್ಜಿಗಳನ್ನು ಬುಧವಾರ ಸುಪ್ರೀಂ ಕೋರ್ಟ್ ವಿಚಾರಣೆ ನಡೆಸಿದೆ.

Written by - Nitin Tabib | Last Updated : Jan 6, 2021, 06:02 PM IST
  • ಲವ್ ಜಿಹಾದ್ ಕಾನೂನಿನ ಮೇಲೆ ತಡೆ ನೀಡಲು ಸುಪ್ರೀಂ ಕೋರ್ಟ್ ನಿರಾಕರಣೆ.
  • ಆದರೆ, ರಾಜ್ಯ ಸರ್ಕಾರಗಳಿಗೆ ನೋಟಿಸ್ ಜಾರಿಗೊಳಿಸಿ ಉತ್ತರಿಸಲು ಸೂಚನೆ.
  • ಕಾನೂನಿನ ಸಾಂವಿಧಾನಿಕ ಮಾನ್ಯತೆ ಪ್ರಶ್ನಿಸಿ ಸಲ್ಲಿಸಲಾಗಿದ್ದ ಅರ್ಜಿಗಳು.
'Love Jihad' ಕಾನೂನಿನ ಮೇಲೆ Stay ನೀಡಲು ನಿರಾಕರಿಸಿದ SC title=
Love Jihad (SC:File Photo)

ನವದೆಹಲಿ: Love Jihad - ಯುಪಿ ಮತ್ತು ಉತ್ತರಾಖಂಡದಲ್ಲಿ 'ಲವ್ ಜಿಹಾದ್ ಕಾನೂನು' ಕುರಿತು ದಾಖಲಾದ ಪ್ರಕರಣಗಳನ್ನು  ಸುಪ್ರೀಂ ಕೋರ್ಟ್‌ನಲ್ಲಿ ಬುಧವಾರ ವಿಚಾರಣೆ ನಡೆಸಿದೆ. ಈ ವೇಳೆ  ಅರ್ಜಿಗಳನ್ನು ಅಂಗೀಕರಿಸಿರುವ ಸುಪ್ರೀಂ ಕೋರ್ಟ್, ಎರಡೂ ರಾಜ್ಯ ಸರ್ಕಾರಗಳಿಗೆ ನೋಟಿಸ್ ನೀಡಿ ಉತ್ತರಿಸುವಂತೆ ಸೂಚಿಸಿದೆ. ಯುಪಿಯಲ್ಲಿ ಇದು ಕೇವಲ ಸುಗ್ರೀವಾಜ್ಞೆಯಾಗಿದ್ದರೆ, ಉತ್ತರಾಖಂಡದಲ್ಲಿ ಇದು 2018 ರಲ್ಲಿ ಕಾನೂನಾಗಿ ಮಾರ್ಪಟ್ಟಿದೆ ಎಂಬುದು ಇಲ್ಲಿ ಉಲ್ಲೇಖನೀಯ.

ಉತ್ತರ ಪ್ರದೇಶ ಹಾಗೂ ಉತ್ತರಾಖಂಡ್ ರಾಜ್ಯಗಳಲ್ಲಿ ಯಾವುದೇ ಓರ್ವ ವ್ಯಕ್ತಿ ಆಮೀಷವೊಡ್ಡಿ, ದಾರಿತಪ್ಪಿಸಿ ಅಥವಾ ಬೆದರಿಕೆಯೊಡ್ಡಿ ಧರ್ಮ ಪರಿವರ್ತನೆಗೆ ಪ್ರಯತ್ನಿಸಿದರೆ, 'ಲವ್ ಜಿಹಾದ್' ಕಾನೂನಿನ ಅಡಿ ಐದು ವರ್ಷಗಳವರೆಗೆ ಶಿಕ್ಷೆಯಾಗಲಿದೆ. ಆದರೆ, ಕೆಲ ಸಾಮಾಜಿಕ ಸಂಘಟನೆಗಳು ಹಾಗೂ ಕಾರ್ಯಕರ್ತರು ಈ ಕಾನೂನುಗಳನ್ನು ಸುಪ್ರೀಂ ಕೋರ್ಟ್ ನಲ್ಲಿ ಪ್ರಶ್ನಿಸಿದ್ದರು.

ಇದನ್ನು ಓದಿ- ಲವ್ ಜಿಹಾದ್ ಪ್ರಕರಣಗಳ ನಿಯಂತ್ರಣಕ್ಕಾಗಿ ಸುಗ್ರೀವಾಜ್ಞೆ ಹೊರಡಿಸಿದ ಮಧ್ಯಪ್ರದೇಶ ಸರ್ಕಾರ

ಈ ಕಾನೂನಿನ ಅಡಿ ಪೊಲೀಸರು ಹಾಗೂ ಸರ್ಕಾರ ಪ್ರೇಮ ವಿವಾಹ ಮಾಡಿಕೊಳ್ಳುವವರಿಗೆ ಹಾಗೂ ಪೋಷಕರ ಅನುಮತಿ ಇಲ್ಲದೆ ವಿವಾಹವಾಗುವವರಿಗೆ ಕಿರುಕುಳ ನೀಡುತ್ತಿದ್ದಾರೆ ಎಂದು ಅವರು ತಮ್ಮ ಅರ್ಜಿಯಲ್ಲಿ ಹೇಳಿದ್ದಾರೆ. ಅಷ್ಟೇ ಅಲ್ಲ ಈ ಕಾನೂನಿನ ಮೂಲಕ ಅಲ್ಪಸಂಖ್ಯಾತರನ್ನು ಗುರಿಯಾಗಿಸಲಾಗುತ್ತಿದೆ ಎಂದೂ ಕೂಡ ಆರೋಪಿಸಲಾಗಿದೆ.

ವಿಚಾರಣೆಯ ವೇಳೆ ಅರ್ಜಿದಾರರು ಲವ್ ಜಿಹಾದ್ (Love Jihad) ಕಾನೂನಿನ ಪ್ರಾವಧಾನಗಳ ಮೇಲೆ ತಡೆ ನೀಡಲು ಅರ್ಜಿದಾರರು ಸುಪ್ರೀಂ ಕೋರ್ಟ್ ಗೆ ಆಗ್ರಹಿಸಿದ್ದಾರೆ. ಆದರೆ, ಅವರ ಮನವಿಯನ್ನು ತಿರಸ್ಕರಿಸಿರುವ ಸುಪ್ರೀಂ ಕೋರ್ಟ್ ಸ್ಟೇ ನೀಡಲು ನಿರಾಕರಿಸಿದೆ. ಯುಪಿ ಹಾಗೂ ಉತ್ತರಾಖಂಡ್ ರಾಜ್ಯಗಳಲ್ಲಿ ಜಾರಿಗೊಳಿಸಲಾಗಿರುವ ಈ ಕಾನೂನುಗಳನ್ನು ಇಬ್ಬರು ಅರ್ಜಿದಾರರು ಪ್ರಶ್ನಿಸಿದ್ದಾರೆ. 

ಇದನ್ನು ಓದಿ-'ಲವ್ ಜಿಹಾದ್' ವಿರುದ್ಧ ಕಾನೂನು: ಬಿಜೆಪಿಗೆ 'ಬಿಗ್ ಶಾಕ್' ಕೊಟ್ಟ ಹೈಕೋರ್ಟ್!

ಈ ಅರ್ಜಿಗಳನ್ನು ವಕೀಲ ವಿಶಾಲ್ ಠಾಕ್ರೆ, ಸಿಟಿಜನ್ ಫಾರ್ ಜಸ್ಟೀಸ್ ಅಂಡ್ ಪೀಸ್ ಎಂಬ ಎನ್‌ಜಿಒ ಮತ್ತು ಇತರರು ಸಲ್ಲಿಸಿದ್ದಾರೆ. ಇವುಗಳಲ್ಲಿ ಯುಪಿ ಮತ್ತು ಉತ್ತರಾಖಂಡದ 'ಲವ್ ಜಿಹಾದ್' ಕಾನೂನಿನ ಸಾಂವಿಧಾನಿಕ ಮಾನ್ಯತೆಯನ್ನು ಪ್ರಶ್ನಿಸಲಾಗಿದೆ.

ಇದನ್ನು ಓದಿ-ದೇಶಾದ್ಯಂತ 'ಲವ್ ಜಿಹಾದ್' ಸಂಚಲನ ಮೂಡಿಸಿದ್ದ ಹಾದಿಯಾ ತಂದೆ ಬಿಜೆಪಿ ಸೇರ್ಪಡೆ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy

ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News