ನವದೆಹಲಿ: ದೇಶದ ನಂಬರ್ ಒನ್ ಶ್ರೀಮಂತ ವ್ಯಕ್ತಿ ಮುಕೇಶ್ ಅಂಬಾನಿ ಅವರ ಸಂಪತ್ತು ಕಳೆದ ಒಂದು ವರ್ಷದಲ್ಲಿ 300 ಕೋಟಿ ರೂಪಾಯಿ ಹೆಚ್ಚಾಗಿದೆ. ಇದನ್ನು ಬಾರ್ಕ್ಲೇಸ್ ಹ್ಯುರುನ್ ಇಂಡಿಯಾ ರಿಚ್ ಲಿಸ್ಟ್ 2018 ರಲ್ಲಿ ಬಹಿರಂಗಪಡಿಸಲಾಗಿದೆ. ರಿಲಯನ್ಸ್ ಇಂಡಸ್ಟ್ರೀಸ್ನ ಅಧ್ಯಕ್ಷ ಮುಕೇಶ್ ಅಂಬಾನಿ ಸತತ 7 ನೇ ಬಾರಿಗೆ ಭಾರತದ ಅತ್ಯಂತ ಶ್ರೀಮಂತರಾಗಿ ಅಗ್ರ ಸ್ಥಾನ ಪಡೆದಿದ್ದಾರೆ. 3 ಲಕ್ಷ, 71 ಸಾವಿರ ಕೋಟಿಗಳ ಆಸ್ತಿಯೊಂದಿಗೆ ಮುಕೇಶ್ ಅಂಬಾನಿ ಕುಟುಂಬವು ಮೊದಲ ಸ್ಥಾನದಲ್ಲಿದೆ. ಅವರ ಕಂಪನಿಯ ಷೇರು ಬೆಲೆ ಒಂದು ವರ್ಷದಲ್ಲಿ 45% ಹೆಚ್ಚಾಗಿದೆ. ಇದು ಮುಕೇಶ್ ಅಂಬಾನಿ ಅವರ ಸಂಪಾದನೆಯ ವಿಷಯವಾಯಿತು. ಆದರೆ, ಅವರ ಮನೆ ಕೆಲಸದವರ ಜೀವನ ಶೈಲಿ ಹೇಗಿದೆ ಗೊತ್ತೇ? ಅವರು ಎಷ್ಟು ಹಣ ಸಂಪಾದಿಸುತ್ತಾರೆ ಅಂತಾ ಗೊತ್ತಾ? ನೀವು ಅವರ ಮನೆಯಲ್ಲಿ ಕೆಲಸ ಮಾಡುವವರ ಬಗ್ಗೆ ಎಂದಾದರೂ ಕೇಳಿದ್ದೀರಾ?
ನಗದು ಅಥವಾ ಕ್ರೆಡಿಟ್ ಕಾರ್ಡ್ ಇಟ್ಟುಕೊಳ್ಳುವುದಿಲ್ಲ ಮುಕೇಶ್ ಅಂಬಾನಿ:
ತಾವು ಕ್ಯಾಶ್ ಆಗಲಿ ಅಥವಾ ಕ್ರೆಡಿಟ್ ಕಾರ್ಡ್ ಆಗಲಿ ಇಟ್ಟುಕೊಂಡು ಎಲ್ಲಿಯೂ ಹೋಗುವುದಿಲ್ಲ ಎಂದು ಕೈಗಾರಿಕೋದ್ಯಮಿ ಮುಕೇಶ್ ಅಂಬಾನಿ ಕಾರ್ಯಕ್ರಮವೊಂದರಲ್ಲಿ ಹೇಳಿದ್ದಾರೆ. ಅಲ್ಲದೆ ಅವರಿಗೆ ಏನೇ ಬೇಕಾದರೂ ಅದನ್ನು ಬೇರೆಯವರೇ ವ್ಯವಸ್ಥೆಗೊಳಿಸುತ್ತಾರೆ ಎಂದು ಅವರು ತಿಳಿಸಿದ್ದಾರೆ. ಮುಖೇಶ್ ಅಂಬಾನಿ ಅವರ ಮನೆ 'ಆಂಟಿಲಿಯಾ' ಪ್ರಪಂಚದ ಅತ್ಯಂತ ಐಷಾರಾಮಿ ಮತ್ತು ದುಬಾರಿ ಮನೆಗಳಲ್ಲಿ ಒಂದಾಗಿದೆ.
500 ಕ್ಕಿಂತ ಹೆಚ್ಚು ಐಷಾರಾಮಿ ವಾಹನಗಳು:
ಮುಕೇಶ್ ಅಂಬಾನಿ ಖಾಸಗಿ ಜೆಟ್ ಸೇರಿದಂತೆ 500 ಕ್ಕಿಂತ ಹೆಚ್ಚು ಐಷಾರಾಮಿ ವಾಹನಗಳನ್ನು ಹೊಂದಿದ್ದಾರೆ. ಆದರೆ, ಅವರ ಚಾಲಕರೂ ಸಹ ಲಕ್ಷಾಧಿಪತಿಗಳಂತೆ... ಕೆಲವು ಸಮಯದ ಹಿಂದೆ ಸಾಮಾಜಿಕ ಮಾಧ್ಯಮದಲ್ಲಿ ವೀಡಿಯೊ ವೈರಲ್ ಆಗಿತ್ತು. ಈ ವೀಡಿಯೊ ಅವರ ಚಾಲಕ ಸಂಬಳ ಎಷ್ಟು ಎಂಬುದನ್ನು ವಿವರಿಸುತ್ತದೆ. ಅಲ್ಲದೆ, ಮುಕೇಶ್ ಅಂಬಾನಿ ತಮ್ಮ ಚಾಲಕರನ್ನು ಹೇಗೆ ಆರಿಸುತ್ತಾರೆಂದು ಅದರಲ್ಲಿ ಹೇಳಲಾಗುತ್ತದೆ.
ಚಾಲಕರಿಗೆ ಸಿಗುತ್ತೆ ಫ್ಯಾಟ್ ಪ್ಯಾಕೇಜ್:
ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದ ವೀಡಿಯೊದಲ್ಲಿ ಅಂಬಾನಿ ತನನ ಚಾಲಕರಿಗೆ ಪ್ರತಿ ತಿಂಗಳು ನ್ಯಾಯೋಜಿತ ಸಂಬಳವನ್ನು ನೀಡುತ್ತಾರೆಂದು ತಿಳಿಸಲಾಗಿದೆ. ಒಬ್ಬ ಚಾಲಕನ ಮಾಸಿಕ ಸಂಬಳ ರೂ. 2 ಕ್ಕಿಂತ ಹೆಚ್ಚಿರುತ್ತದೆ. ಸಾಮಾನ್ಯವಾಗಿ, ಖಾಸಗಿ ಚಾಲಕನ ವೇತನವು ತಿಂಗಳಿಗೆ 20,000 ರೂ. ಆದಾಗ್ಯೂ, ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದ ಈ ಮಾಹಿತಿಯು ಸಂಪೂರ್ಣ ನಿಜ ಎಂದು ಝೀ ನ್ಯೂಸ್ ದೃಢಪಡಿಸುವುದಿಲ್ಲ.
ಚಾಲಕನ ಆಯ್ಕೆ ಮಾಡುತ್ತೆ ಖಾಸಗಿ ಕಂಪನಿ:
ಮುಕೇಶ್ ಅಂಬಾನಿ ಚಾಲಕನಾಗಲು ಬಯಸುವವರು ಕೂಡಾ ಅನೇಕ ಪರೀಕ್ಷೆಗಳಿಗೆ ಒಳಗಾಗಬೇಕಾಗುತ್ತದೆ. ಮುಕೇಶ್ ಅಂಬಾನಿ ಅವರ ಚಾಲಕನನ್ನು ಆಯ್ಕೆ ಮಾಡಲು ಖಾಸಗಿ ಕಂಪನಿಗಳಿಗೆ ಜವಾಬ್ದಾರಿಯನ್ನು ನೀಡಲಾಗುತ್ತದೆ. ದೀರ್ಘಕಾಲದ ಪ್ರಕ್ರಿಯೆಯ ನಂತರ ಈ ಕಂಪನಿಗಳು ಚಾಲಕವನ್ನು ಆಯ್ಕೆಮಾಡುತ್ತವೆ. ಗುಣಮಟ್ಟವನ್ನು ಆಧರಿಸಿ, ಅಂತಿಮವಾಗಿ ಚಾಲಕನನ್ನು ಆಯ್ಕೆ ಮಾಡಿ ಕಂಪನಿಯ ಪರವಾಗಿ ತರಬೇತಿ ನೀಡಲಾಗುತ್ತದೆ. ಆನಂತರವಷ್ಟೇ ಮುಕೇಶ್ ಅಂಬಾನಿ ಅಥವಾ ಅವರ ಕುಟುಂಬದ ಸದಸ್ಯರ ಕಾರನ್ನು ಓಡಿಸಲು ಆ ಚಾಲಕನನ್ನು ಕಳುಹಿಸಲಾಗುತ್ತದೆ.
ಮುಕೇಶ್ ಅಂಬಾನಿ ಮನೆಯಲ್ಲಿ ಕೆಲಸ ಸಿಗುವುದು ಸುಲಭವಲ್ಲ:
ಚಾಲಕನ ಆಯ್ಕೆಯಲ್ಲಿ, ಚಾಲಕನು ಎದುರಾಗುವ ಯಾವುದೇ ರೀತಿಯ ತೊಂದರೆಯನ್ನು ಹೇಗೆ ತಪ್ಪಿಸುತ್ತಾನೆಂಬುದನ್ನು ಸಹ ನೋಡಲಾಗುತ್ತದೆ. ಮುಕೇಶ್ ಅಂಬಾನಿ ಅವರ ಮನೆಯಲ್ಲಿ ಕೆಲಸ ಸಿಗುವುದೂ ಕೂಡ ಸುಲಭವಲ್ಲ ಎಂದು ವೈರಲ್ ವೀಡಿಯೊದಲ್ಲಿ ಎಂದು ವರದಿಯಾಗಿದೆ. ತಮ್ಮ ಮನೆಯ ಆಂಟಿಲಿಯಾದಲ್ಲಿನ ಯಾವುದೇ ರೀತಿಯ ಕೆಲಸಕ್ಕೆ ಕೆಲಸಗಾರರನ್ನು ವಿಶೇಷ ಪ್ರಕ್ರಿಯೆ ಮೂಲಕ ಆಯ್ಕೆ ಮಾಡಲಾಗುತ್ತದೆ.