ಗಣೇಶ ಚತುರ್ಥಿಯಂದು ಚಂದ್ರನನ್ನು ಯಾಕೆ ನೋಡಬಾರದು ಗೊತ್ತೇ?

ಪ್ರತಿವರ್ಷ ಗಣೇಶ ಚತುರ್ಥಿ ದಿನದಂದು ಚಂದ್ರನನ್ನು ನೋಡಬಾರದು ಎನ್ನುವ ಮಾತಿದೆ, ಒಂದು ವೇಳೆ ಅಪ್ಪಿತಪ್ಪಿ ನೋಡಿದರೂ ಕೂಡ ಅದರ ದೋಷವನ್ನು ನಿವಾರಿಸಿಕೊಳ್ಳಬೇಕು.

Written by - Zee Kannada News Desk | Last Updated : Aug 31, 2022, 08:54 PM IST
  • ಗಣೇಶ ಚತುರ್ಥಿಯಂದು (Ganesh Chaturthi) ಚಂದ್ರನನ್ನು ಏಕೆ ನೋಡಬಾರದು ಎಂಬುದರ ಬಗ್ಗೆ ಪುರಾಣಗಳಲ್ಲಿ ಹಲವು ಕಥೆಗಳಿವೆ.
ಗಣೇಶ ಚತುರ್ಥಿಯಂದು ಚಂದ್ರನನ್ನು ಯಾಕೆ ನೋಡಬಾರದು ಗೊತ್ತೇ? title=

ನವದೆಹಲಿ: ಪ್ರತಿವರ್ಷ ಗಣೇಶ ಚತುರ್ಥಿ ದಿನದಂದು ಚಂದ್ರನನ್ನು ನೋಡಬಾರದು ಎನ್ನುವ ಮಾತಿದೆ, ಒಂದು ವೇಳೆ ಅಪ್ಪಿತಪ್ಪಿ ನೋಡಿದರೂ ಕೂಡ ಅದರ ದೋಷವನ್ನು ನಿವಾರಿಸಿಕೊಳ್ಳಬೇಕು.

ಗಣೇಶ ಚತುರ್ಥಿಯಂದು ಏಕೆ ಚಂದ್ರನನ್ನು ನೋಡಬಾರದು ಗೊತ್ತೇ?

ಗಣೇಶ ಚತುರ್ಥಿಯಂದು (Ganesh Chaturthi) ಚಂದ್ರನನ್ನು ಏಕೆ ನೋಡಬಾರದು ಎಂಬುದರ ಬಗ್ಗೆ ಪುರಾಣಗಳಲ್ಲಿ ಹಲವು ಕಥೆಗಳಿವೆ. ಅದರಲ್ಲಿ ಒಂದು ಕಥೆಯ ಪ್ರಕಾರ, ಮಹಾದೇವನ ಕೋಪಕ್ಕೆ ತುತ್ತಾದ ಗಣಪತಿಯ ತಲೆಯನ್ನು ಕತ್ತರಿಸಲಾಯಿತು. ನಂತರ ಚತುರ್ಥಿಯ ದಿನದಂದು ಗಣೇಶನಿಗೆ (Lord Ganesha) ಆನೆಯ ತಲೆಯನ್ನು ಇರಿಸಲಾಯಿತು ಮತ್ತು ಅದರ ನಂತರ ಭೂಮಿಯನ್ನು ಸುತ್ತಿದ ಬಳಿಕ ವಿಘ್ನ ವಿನಾಶಕ ಗಣಪತಿಗೆ ಮೊದಲ ಪೂಜೆ ಮಾಡುವಂತೆ ನಿಶ್ಚಯಿಸಲಾಯಿತು. ಇದಕ್ಕೆ ಅನುಗುಣವಾಗಿ ಎಲ್ಲಾ ದೇವತೆಗಳು ಕೂಡ ಗಣೇಶನನ್ನು ಪೂಜಿಸಿದರು ಆದರೆ ಚಂದ್ರನು ಪೂಜಿಸಲು ಹೋಗಲಿಲ್ಲ.ಇದೆ ವೇಳೆ ಚಂದ್ರನು ತನ್ನ ನೋಟದ (Chandra Darshan) ಬಗ್ಗೆ ಹೆಮ್ಮೆಪಟ್ಟನು. ಮಾತ್ರವಲ್ಲ ಗಜ ಮುಖನನ್ನು ಕಂಡು ಕೇಕೆ ಹಾಕಿ ನಕ್ಕನು. ಇದರಿಂದ ಕೋಪಗೊಂಡ ಗಣಪತಿ ಇಂದಿನಿಂದ ಚಂದ್ರನನ್ನು ಯಾರೂ ನೋಡದಂತಾಗಲಿ ಎಂದು ಶಪಿಸಿದನು. ಇದರಿಂದ ಹೆದರಿದ ಚಂದ್ರನು ಗಣೇಶನನ್ನು ಕ್ಷಮೆ ಕೋರಿದನು. ಬಳಿಕ ಗಣೇಶನು ಚಂದ್ರನ ಮೇಲೆ ಕರುಣೆ ತೋರಿದನು. ಆದರೆ, ತನ್ನ ಶಾಪವನ್ನು ಪೂರ್ತಿಯಾಗಿ ಹಿಂಪಡೆಯಲು ಸಾಧ್ಯವಿಲ್ಲ ಎಂದು ತಿಳಿಸಿದ ಗಣೇಶ, ಗಣೇಶ ಚತುರ್ಥಿಯ ದಿನ ಚಂದ್ರ ದರ್ಶನವನ್ನು (Chandra Darshan On Ganesha Chaturthi) ಯಾರೂ ಮಾಡಬಾರದು. ಒಂದೊಮ್ಮೆ ಗಣೇಶ ಚತುರ್ಥಿಯ ದಿನದಂದು ಚಂದ್ರನನ್ನು ನೋಡಿದರೆ ಜೀವನದಲ್ಲಿ ಪಶ್ಚಾತಾಪ ಪಡಬೇಕಾಗುತ್ತದೆ.ಭವಿಷ್ಯದಲ್ಲಿ ಅವನ ಮೇಲೆ ದೊಡ್ಡ ಆರೋಪ ಬರಲಿದೆ ಎಂದು ಶಾಪವನ್ನು ಹಾಕಿದನು.

ಗಣೇಶ ಚತುರ್ಥಿಯಂದು ಚಂದ್ರನ ದರ್ಶನ ಮಾಡಿದರೆ ದೋಷವನ್ನು ಈ ರೀತಿ ನಿವಾರಿಸಿ:

ಆದಾಗ್ಯೂ, ನೀವು ಆಕಸ್ಮಿಕವಾಗಿ ಗಣೇಶ ಚತುರ್ಥಿಯಂದು ಚಂದ್ರನನ್ನು ನೋಡಿದರೆ, ಅದರ ದೋಷವನ್ನು ನಿವಾರಿಸಲು, ಪೂರ್ಣ ಭಕ್ತಿಯಿಂದ 'ಸಿಂಹಃ ಪ್ರಸೇನ  ಮಮ ಧೇ: ಸಿಂಹೋ ಜಾಂಬವತಾ ಹತಃ'. ಸುಕುಮಾರಕ ಮಾ ರೋದೀ:  ತವ ಹ್ಯೇಷಃ ಶ್ಯಮಂತಕಃ.. ' ಮಂತ್ರವನ್ನು ಜಪಿಸಬೇಕು. ಒಂದು ವೇಳೆ ನೀವು ಹಾಗೆ ಮಾಡಿದರೆ ಚಂದ್ರ ದೋಷದ ಪರಿಣಾಮ ನಿಮ್ಮ ಮೇಲೆ ಬೀಳುವುದಿಲ್ಲ.ಈ ಮಂತ್ರವನ್ನು ಪ್ರತಿದಿನ 108 ಬಾರಿ ಪಠಿಸುವುದರಿಂದ ವ್ಯಕ್ತಿಯು ದೋಷದಿಂದ ಮುಕ್ತನಾಗುತ್ತಾನೆ ಎಂದು ಹೇಳಲಾಗುತ್ತದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

 

Trending News