ಸೌರ ಫಲಕಗಳಿಂದ ಹಿಡಿದು ಸೌರ ದೀಪಗಳು ಮತ್ತು ಸೌರ ವಿದ್ಯುತ್ ಕಡೆಗೆ ಜನರು ಉತ್ತಮ ಒಲುವು ತೋರುತ್ತಿದ್ದಾರೆ. ಆದ್ದರಿಂದ ಇತ್ತೀಚಿನ ದಿನಗಳಲ್ಲಿ ಸೌರ ಉತ್ಪನ್ನಗಳ ಬೇಡಿಕೆ ವೇಗವಾಗಿ ಹೆಚ್ಚಾಗುತ್ತಿದೆ. ಇಂತಹ ಪರಿಸ್ಥಿತಿಯಲ್ಲಿ, ನಿಮ್ಮ ಸ್ವಂತ ಸೌರ ವ್ಯವಹಾರವನ್ನು ಪ್ರಾರಂಭಿಸಲು ನಿಮಗೆ ಅವಕಾಶವಿದೆ. ಮತ್ತು ಇದರಲ್ಲಿ ಅದರಲ್ಲಿ ಸಾಕಷ್ಟು ಲಾಭ ಕೂಡ ಗಳಿಸಬಹುದು. ಸೌರ ಉತ್ಪನ್ನಗಳನ್ನು ಉತ್ತೇಜಿಸಲು ಸರ್ಕಾರ ನಿಮಗೆ ಸಹಕಾರ ನೀಡುತ್ತದೆ. ಬ್ಯಾಂಕ್ ಗಳಿಂದಲೂ ಕೂಡ ತುಂಬಾ ಸರಳ ಶರತ್ತಿನ ಮೇಲೆ ಸಾಲ ಲಭಿಸುತದೆ. ಸಣ್ಣ ಹೂಡಿಕೆಗಳನ್ನು ಮಾಡುವ ಮೂಲಕ ನೀವು ಸೌರ ದೀಪ ವ್ಯವಹಾರವನ್ನು ಪ್ರಾರಂಭಿಸಲು ಇದು ಸರಿಯಾದ ಸಮಯ.
ಎಷ್ಟು ಹೂಡಿಕೆ ಸೂಕ್ತ?
ಯಾವುದೇ ಕೆಲಸವನ್ನು ಪ್ರಾರಂಭಿಸುವ ಮೊದಲು, ಅಧಕ್ಕೆ ಎಷ್ಟು ಪ್ರಮಾಣದಲ್ಲಿ ಹೂಡಿಕೆ ಮಾಡಬೇಕು ಎಂಬ ಪ್ರಶ್ನೆ ಉದ್ಭವಿಸುತ್ತದೆ. ಇದಕ್ಕಾಗಿ ಮೈಕ್ರೋ, ಸ್ಮಾಲ್ ಮತ್ತು ಮಧ್ಯಮ ಉದ್ಯಮಗಳು (MSME) ಅಭಿವೃದ್ಧಿ ಸಂಸ್ಥೆ ವ್ಯವಹಾರವನ್ನು ಪ್ರಾರಂಭಿಸುವವರಿಗೆ ಯೋಜನಾ ವರದಿಯೊಂದನ್ನು ಸಿದ್ಧಪಡಿಸಿದೆ. ಈ ವರದಿಯ ಪ್ರಕಾರ, ಹೂಡಿಕೆ ಮಾಡಲು, ಮೊದಲ ತಿಂಗಳು 1.50 ಲಕ್ಷ ರೂ.ಗಳ ಬಂಡವಾಳವಾಗಿ ಹೂಡಿಕೆ ಮಾಡಬೇಕಾಗುತ್ತದೆ. ಅಲ್ಲದೆ ಸ್ಥಿರ ಯಂತ್ರೋಪಕರಣಗಳು ಮತ್ತು ಸಲಕರಣೆಗಳ ಮೇಲೆ 3.50 ಲಕ್ಷ ರೂ. ಹೂಡಿಕೆ ಮಾಡಬೇಕಾಗುತ್ತದೆ.
ಸ್ಥಾಪನೆಗೆ ಎಷ್ಟು ವೆಚ್ಚ ತಗುಲುತ್ತದೆ?
ಇದರಲ್ಲಿ ಡ್ರಿಲ್ ಮೆಷಿನ್, ಗ್ರೈಂಡರ್, ಹೈ ವೋಲ್ಟೇಜ್ ಬ್ರೇಕ್ ಡೌನ್ ಟೆಸ್ಟರ್, ಆಟೋ ಟ್ರಾನ್ಸ್ಫಾರ್ಮರ್, ಇನ್ಸುಲೇಷನ್ ಟೆಸ್ಟರ್, ಟೆಸ್ಟಿಂಗ್ ಸೆಟಪ್, ಡಿಜಿಟಲ್ ಮಲ್ಟಿಮೀಟರ್, ವೋಲ್ಟೇಜ್ ಸ್ಟೆಬಿಲೈಜರ್, ಕಂಪ್ಯೂಟರ್, ಪ್ರಿಂಟರ್ ಇತ್ಯಾದಿ ಸೇರಿವೆ. ಇವುಗಳ ಸ್ಥಾಪನೆಗೆ ಸುಮಾರು 1 ಲಕ್ಷ 5 ಸಾವಿರ ರೂಪಾಯಿ ವೆಚ್ಚವಾಗಲಿದೆ. ಒಟ್ಟಾರೆಯಾಗಿ, ವ್ಯವಹಾರವನ್ನು ಸ್ಥಾಪಿಸಲು, 5 ಲಕ್ಷ 30 ಸಾವಿರ ರೂ.ಗಳ ಹೂಡಿಕೆ ಮಾಡಬೇಕಾಗುತ್ತದೆ.
ಕಚ್ಚಾ ಸಾಮಗ್ರಿಗಳ ವೆಚ್ಚ ಎಷ್ಟು?
ವ್ಯವಹಾರದ ಪ್ರಾರಂಭದಲ್ಲಿ 1000 ಸೌರ ದೀಪಗಳನ್ನು ತಯಾರಿಸಲು 17 ಲಕ್ಷ ರೂ.ಗಳ ಹೂಡಿಕೆ ಇರುತ್ತದೆ. ಈ ಹೂಡಿಕೆ ಸಂಪೂರ್ಣ ಕಚ್ಚಾ ವಸ್ತುಗಳಿಗೆ ಇರಲಿದೆ. ಇವುಗಳಲ್ಲಿ ಸೌರ ಪಿವಿ ಮಾಡ್ಯೂಲ್ಗಳು, ಬ್ಯಾಟರಿಗಳು, ಎಲ್ಇಡಿಗಳು, ಸ್ವಿಚ್ಗಳು, ಇನ್ಪುಟ್ ಕನೆಕ್ಟರ್ಗಳು, ಆಧುನಿಕ ಪ್ಲಾಸ್ಟಿಕ್ ಕ್ಯಾಬಿನೆಟ್ಗಳು, ಫ್ಯೂಸ್ಗಳು, ಕೇಬಲ್ಗಳು, ಪಿಸಿಬಿಗಳು, ಅರೆ ಕಂಡಕ್ಟರ್ಗಳು, ರೆಸಿಸ್ಟರ್ಗಳು, ಕೆಪಾಸಿಟರ್ಗಳು, ಟ್ರಾನ್ಸಿಸ್ಟರ್ಗಳು, ಎಲೆಕ್ಟ್ರೋ ಮೆಕ್ಯಾನಿಕಲ್ ಘಟಕಗಳು ಇತ್ಯಾದಿಗಳು ಸೇರಿವೆ. ಯೋಜನೆಯ ವರದಿಯ ಪ್ರಕಾರ, ಒಂದು ಸೋಲಾರ್ ಲ್ಯಾಂಪ್ ಗೆ ಸುಮಾರು 1700 ರೂ.ಗಳ ಕಚ್ಚಾ ಸಾಮಗ್ರಿ ಬೇಕಾಗುತ್ತದೆ.
ಗಳಿಕೆ ಎಷ್ಟು?
ನೀವು ಒಂದು ತಿಂಗಳಿಗೆ 1000 ಸೌರ ದೀಪಗಳನ್ನು ತಯಾರಿಸಿದರೆ, ಒಂದು ವರ್ಷದಲ್ಲಿ 12000 ಸೌರ ದೀಪಗಳನ್ನು ತಯಾರಿಸಿದಂತಾಗುತ್ತದೆ. ಇದರ ಒಟ್ಟು ವೆಚ್ಚ 2 ಕೋಟಿ 4 ಲಕ್ಷ ರೂಪಾಯಿಗಳು. ಆದರೆ, ಇದು ಸವಕಳಿ ಮತ್ತು ಬಡ್ಡಿ ಹಣವನ್ನು ಸಹ ಒಳಗೊಂಡಿರಬೇಕು. ಈ ವೆಚ್ಚ ಸುಮಾರು 39 ಲಕ್ಷ 66 ಸಾವಿರ ರೂ.ಗಳಾಗಿರುತ್ತದೆ. ಒಂದು ದೀಪದ ಮಾರುಕಟ್ಟೆ ಮೌಲ್ಯ 2200 ರೂಪಾಯಿ ಆಗಿರುತ್ತದೆ. ನೀವು ಸಹ ಇದೇ ದರದಲ್ಲಿ ಮಾರಾಟ ಮಾಡಿದರೆ, ನಿಮ್ಮ ವಾರ್ಷಿಕ ವಹಿವಾಟು 2 ಕೋಟಿ 64 ಲಕ್ಷ ಆಗಿರುತ್ತದೆ. ಈಗ ಖರ್ಚು ಮತ್ತು ವೆಚ್ಚಗಳ ಲೆಕ್ಕಾಚಾರ ಮಾಡಿದರೆ ನಿಮ್ಮ ಬಳಿ ವಾರ್ಷಿಕವಾಗಿ 20 ಲಕ್ಷ 33 ಸಾವಿರ ರೂ.ಗಳು ಉಳಿಯಲಿದೆ.