ಮಹಾರಾಷ್ಟ್ರದ ಪಾಲ್‌ಘರ್‌ನಲ್ಲಿ ಭೂಕಂಪ

ಇಡೀ ಪ್ರದೇಶವು ನವೆಂಬರ್ 2018 ರಿಂದ ಆಗಾಗ್ಗೆ ಭೂಕಂಪವನ್ನು ಅನುಭವಿಸುತ್ತಿದೆ, ಅವುಗಳಲ್ಲಿ ಹೆಚ್ಚಿನವು ದುಧಲ್ವಾಡಿ ಗ್ರಾಮವನ್ನು ಕೇಂದ್ರೀಕರಿಸಿದೆ.

Updated: Jul 25, 2019 , 08:42 AM IST
ಮಹಾರಾಷ್ಟ್ರದ ಪಾಲ್‌ಘರ್‌ನಲ್ಲಿ ಭೂಕಂಪ

ಮುಂಬೈ: ಮಹಾರಾಷ್ಟ್ರದ ಪಾಲ್‌ಘರ್‌ ಜಿಲ್ಲೆಯಲ್ಲಿ ಗುರುವಾರ ಮುಂಜಾನೆ ಒಂದೆರಡು ನಿಮಿಷದಲ್ಲಿ ಎರಡು ಭಾರೀ ಭೂಕಂಪದ ಅನುಭವವಾಗಿರುವ ಬಗ್ಗೆ ವರದಿಯಾಗಿದೆ.

ಈ ಪ್ರದೇಶದಲ್ಲಿ ಮುಂಜಾನೆ 1:03 ಕ್ಕೆ ಮೊದಲ ಭೂಕಂಪ ಅಪ್ಪಳಿಸಿದ್ದು, ಭೂಕಂಪದ ತೀವ್ರತೆ ರಿಕ್ಟರ್ ಮಾಪಕದಲ್ಲಿ 3.8 ರಷ್ಟು ದಾಖಲಾಗಿದೆ. ಈ ಭೂಕಂಪ 10 ಕಿಲೋಮೀಟರ್ ಆಳದಲ್ಲಿ ಸಂಭವಿಸಿದೆ. 

ಮುಂಜಾನೆ 1: 05 ಕ್ಕೆ ಎರಡನೇ ಬಾರಿಗೆ ಭೂಕಂಪ ಸಂಭವಿಸಿದ್ದು, ರಿಕ್ಟರ್ ಮಾಪಕದಲ್ಲಿ ಇದರ ತೀವ್ರತೆ 3.6 ಎಂದು ದಾಖಲಾಗಿದೆ.

ಇಡೀ ಪ್ರದೇಶವು ನವೆಂಬರ್ 2018 ರಿಂದ ಆಗಾಗ್ಗೆ ಭೂಕಂಪದ ನಡುಕವನ್ನು ಅನುಭವಿಸುತ್ತಿದೆ, ಅವುಗಳಲ್ಲಿ ಹೆಚ್ಚಿನವು ದುಧಲ್ವಾಡಿ ಗ್ರಾಮವನ್ನು ಕೇಂದ್ರೀಕರಿಸಿದೆ.

ಇಂತಹ ತುರ್ತು ಸಂದರ್ಭಗಳಲ್ಲಿ ಕೈಗೊಳ್ಳಬೇಕಾದ ಮುನ್ನೆಚ್ಚರಿಕೆ ಕ್ರಮಗಳ ಬಗ್ಗೆ ಜಿಲ್ಲಾಡಳಿತ ಕೆಲವು ಗ್ರಾಮಗಳಲ್ಲಿ ಹಲವಾರು ಜಾಗೃತಿ ಕಾರ್ಯಕ್ರಮಗಳನ್ನು ನಡೆಸಿದೆ.