ನವದೆಹಲಿ: ಇಂದು ಬೆಳ್ಳಂಬೆಳಗ್ಗೆ ಅರುಣಾಚಲ ಪ್ರದೇಶದಲ್ಲಿ ಭೂಕಂಪ ಸಂಭವಿಸಿದೆ. ಅರುಣಾಚಲ ಪ್ರದೇಶದಲ್ಲಿ ಬೆಳಗ್ಗೆ 6.56ಕ್ಕೆ ಭೂಕಂಪನದ ಅನುಭವವಾಗಿದೆ. ಭೂಕಂಪನದ ರಾಷ್ಟ್ರೀಯ ಕೇಂದ್ರದ ಪ್ರಕಾರ, ಭೂಕಂಪದ ಕೇಂದ್ರಬಿಂದು ಅರುಣಾಚಲ ಪ್ರದೇಶದ ಪಾಂಗಿನ್‌ನ ಉತ್ತರ ಭಾಗದಲ್ಲಿದೆ ಎಂದು ತಿಳಿದುಬಂದಿದೆ. ರಿಕ್ಟರ್ ಮಾಪಕದಲ್ಲಿ ಇದರ ತೀವ್ರತೆ 5.3 ರಷ್ಟಿತ್ತು ಎಂದು ತಿಳಿದುಬಂದಿದೆ.
ಭೀತಿಯನ್ನು ಉಂಟುಮಾಡಿದ ಭೂಕಂಪ:
ಅರುಣಾಚಲ ಪ್ರದೇಶದಲ್ಲಿ ಇಂದು ಬೆಳಿಗ್ಗೆ ಭೂಮಿ ನಡುಗಿದ ಅನುಭವವಾಗುತ್ತಿದ್ದಂತೆ ಜನರು ಪ್ರಾಣ ಉಳಿಸಿಕೊಳ್ಳಲು ಮನೆಯಿಂದ ಹೊರಗೆ ಬಂದರು. ಕೆಲ ಕಾಲ ಭೀತಿಯ ವಾತಾವರಣ ನಿರ್ಮಾಣವಾಗಿತ್ತು. ಆದರೆ, ಇದುವರೆಗೆ ಯಾವುದೇ ಪ್ರಾಣಹಾನಿ ಅಥವಾ ಆಸ್ತಿಪಾಸ್ತಿ ನಷ್ಟದ ಸುದ್ದಿ ಬಂದಿಲ್ಲ. ಜನರು ಭಯಭೀತರಾಗದೆ ಶಾಂತಿ ಕಾಪಾಡುವಂತೆ ಆಡಳಿತ ಮಂಡಳಿ ಮನವಿ ಮಾಡಿದೆ.
ಇದನ್ನೂ ಓದಿ- IAS Pradeep Gawande: ಮದುವೆಗೂ ಮುನ್ನವೇ ಟೀನಾ ದಾಬಿಯಿಂದ ಪ್ರದೀಪ್ ಗಾವಂಡೆ ದೂರ!
ಭೂಕಂಪ ಏಕೆ ಸಂಭವಿಸುತ್ತದೆ?
ಭೂಮಿಯೊಳಗೆ 7 ಫಲಕಗಳಿವೆ, ಅವು ನಿರಂತರವಾಗಿ ತಿರುಗುತ್ತಿರುತ್ತವೆ. ಈ ಫಲಕಗಳು ಎಲ್ಲಿ ಹೆಚ್ಚು ಡಿಕ್ಕಿ ಹೊಡೆಯುತ್ತವೆಯೋ ಆ ವಲಯವನ್ನು ಫಾಲ್ಟ್ ಲೈನ್ ಎಂದು ಕರೆಯಲಾಗುತ್ತದೆ. ಪುನರಾವರ್ತಿತ ಘರ್ಷಣೆಯಿಂದಾಗಿ, ಹೆಚ್ಚಿನ ಒತ್ತಡವು ನಿರ್ಮಾಣವಾದಾಗ, ಫಲಕಗಳು ಒಡೆಯುತ್ತವೆ ಮತ್ತು ಕೆಳಗಿನ ಶಕ್ತಿಯು ಒಂದು ಮಾರ್ಗವನ್ನು ಕಂಡುಕೊಳ್ಳುತ್ತದೆ. ಇದರ ನಂತರ ಭೂಕಂಪ ಸಂಭವಿಸುತ್ತದೆ ಎನ್ನಲಾಗುತ್ತದೆ.
ಇದನ್ನೂ ಓದಿ- Coronavirus 4th Wave: ಈಗ ಕಣ್ಣುಗಳ ಮೇಲೆ ಕರೋನಾ ಪರಿಣಾಮ, ಇವು 3 ದೊಡ್ಡ ಲಕ್ಷಣಗಳು
ರಿಕ್ಟರ್ ಮಾಪಕ | ಪರಿಣಾಮ |
0 ರಿಂದ 1.9 | ಇದನ್ನು ಸೀಸ್ಮೋಗ್ರಾಫ್ ಮೂಲಕ ಮಾತ್ರ ನೋಡಬಹುದು. |
2 ರಿಂದ 2.9 | ಸೌಮ್ಯವಾದ ಕಂಪನ. |
3 ರಿಂದ 3.9 | ಟ್ರಕ್ ನಿಮ್ಮ ಬಳಿ ಹಾದು ಹೋದರೆ, ಅಂತಹ ಪರಿಣಾಮ. |
4 ರಿಂದ 4.9 | ಕಿಟಕಿಗಳು ಒಡೆಯಬಹುದು. ಗೋಡೆಗಳ ಮೇಲೆ ನೇತಾಡುವ ಚೌಕಟ್ಟುಗಳು ಬೀಳಬಹುದು. |
5 ರಿಂದ 5.9 | ಪೀಠೋಪಕರಣಗಳು ಚಲಿಸಬಹುದು. |
6 ರಿಂದ 6.9 | ಕಟ್ಟಡಗಳ ಅಡಿಪಾಯ ಬಿರುಕು ಬಿಡಬಹುದು. ಮೇಲಿನ ಮಹಡಿಗಳು ಹಾನಿಗೊಳಗಾಗಬಹುದು. |
7 ರಿಂದ 7.9 | ಕಟ್ಟಡಗಳು ಬೀಳುತ್ತವೆ. ನೆಲದೊಳಗೆ ಪೈಪ್‌ಗಳು ಒಡೆಯುತ್ತವೆ. |
8 ರಿಂದ 8.9 | ಕಟ್ಟಡಗಳು ಸೇರಿದಂತೆ ದೊಡ್ಡ ಸೇತುವೆಗಳು ಸಹ ಕುಸಿಯುತ್ತವೆ. ಸುನಾಮಿ ಭೀತಿ ಉಂಟಾಗುವ ಸಾಧ್ಯತೆ |
9 ಮತ್ತು ಹೆಚ್ಚಿನದು | ಸಂಪೂರ್ಣ ವಿನಾಶ. ಯಾರಾದರೂ ಗದ್ದೆಯಲ್ಲಿ ನಿಂತಿದ್ದರೆ, ಅವನು ಭೂಮಿ ಕುಸಿಯುವುದನ್ನು ನೋಡುತ್ತಾನೆ. ಸಮುದ್ರವು ಹತ್ತಿರದಲ್ಲಿದ್ದರೆ, ಸುನಾಮಿ ಉಂಟಾಗುತ್ತದೆ. |
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.