IAS Pradeep Gawande: ಮದುವೆಗೂ ಮುನ್ನವೇ ಟೀನಾ ದಾಬಿಯಿಂದ ಪ್ರದೀಪ್ ಗಾವಂಡೆ ದೂರ!

ಐಎಎಸ್ ಪ್ರದೀಪ್ ಗಾವಂಡೆ ಈ ಹಿಂದೆ ಅವರು ಪುರಾತತ್ವ ಮತ್ತು ವಸ್ತುಸಂಗ್ರಹಾಲಯ (ಜೈಪುರ) ಇಲಾಖೆಯಲ್ಲಿ ನಿರ್ದೇಶಕರಾಗಿ ನೇಮಕಗೊಂಡಿದ್ದರು.

Written by - Puttaraj K Alur | Last Updated : Apr 14, 2022, 08:16 PM IST
  • ಶೀಘ್ರವೇ ದಾಂಪತ್ಯ ಜೀವನಕ್ಕೆ ಕಾಲಿಡಲಿರುವ ಟೀನಾ ದಾಬಿ ಮತ್ತು ಪ್ರದೀಪ್ ಗಾವಂಡೆ
  • ಈ ಜೋಡಿಯ ಮದುವೆಗೂ ಮುನ್ನವೇ ಎಲ್ಲ ಅಧಿಕಾರಿಗಳನ್ನು ವರ್ಗಾವಣೆ ಮಾಡಿದ ರಾಜಸ್ಥಾನ ಸರ್ಕಾರ
  • ಐಎಎಸ್ ಪ್ರದೀಪ್ ಗಾವಂಡೆ ಅವರನ್ನು ಸೆಕ್ರೆಟರಿಯೇಟ್‌ಗೆ ವರ್ಗಾವಣೆ ಮಾಡಲಾಗಿದೆ
IAS Pradeep Gawande: ಮದುವೆಗೂ ಮುನ್ನವೇ ಟೀನಾ ದಾಬಿಯಿಂದ ಪ್ರದೀಪ್ ಗಾವಂಡೆ ದೂರ!  title=
ಸೆಕ್ರೆಟರಿಯೇಟ್‌ಗೆ ಪ್ರದೀಪ್ ಗಾವಂಡೆ ವರ್ಗಾವಣೆ

ನವದೆಹಲಿ: ಇತ್ತೀಚಿನ ದಿನಗಳಲ್ಲಿ ಮತ್ತೊಂದು ದಂಪತಿ ಸಾಮಾಜಿಕ ಮಾಧ್ಯಮದಲ್ಲಿ ಸಾಕಷ್ಟು ಚರ್ಚೆಯಲ್ಲಿದೆ. ಆ ಜೋಡಿಯೇ ಐಎಎಸ್ ಟೀನಾ ದಾಬಿ ಮತ್ತು ಪ್ರದೀಪ್ ಗವಾಂಡೆ. ಇಬ್ಬರೂ ಶೀಘ್ರದಲ್ಲೇ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ. ಇಬ್ಬರೂ ರಾಜಸ್ಥಾನ ಕೇಡರ್‌ನ ಐಎಎಸ್ ಅಧಿಕಾರಿಗಳು. ಇವರ ನಿಶ್ಚಿತಾರ್ಥದ ಚಿತ್ರಗಳನ್ನು ನೋಡಿ ಜನರು ವಿವಿಧ ರೀತಿಯಲ್ಲಿ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದರು.

ಟೀನಾರ ಭಾವಿ ಪತಿ ವರ್ಗಾವಣೆ

ಟೀನಾ ಮತ್ತು ಪ್ರದೀಪ್ ಅವರ ಮದುವೆಗೂ ಮುನ್ನವೇ ರಾಜಸ್ಥಾನ ಸರ್ಕಾರ ಆಡಳಿತಾತ್ಮಕ ಪುನಾರಚನೆ ಮಾಡುವಾಗ ಎಲ್ಲಾ ಅಧಿಕಾರಿಗಳನ್ನು ವರ್ಗಾವಣೆ ಮಾಡಿದೆ. ಈ ವರ್ಗಾವಣೆ ಬಳಿಕ ಐಎಎಸ್ ಪ್ರದೀಪ್ ಗಾವಂಡೆ ಅವರನ್ನು ಸೆಕ್ರೆಟರಿಯೇಟ್‌ಗೆ ವರ್ಗಾವಣೆ ಮಾಡಲಾಗಿದೆ. ಈ ಹಿಂದೆ ಅವರು ಪುರಾತತ್ವ ಮತ್ತು ವಸ್ತುಸಂಗ್ರಹಾಲಯ (ಜೈಪುರ) ಇಲಾಖೆಯಲ್ಲಿ ನಿರ್ದೇಶಕರಾಗಿ ನೇಮಕಗೊಂಡಿದ್ದರು. ಈಗ ಅವರನ್ನು ಉನ್ನತ ಶಿಕ್ಷಣ ಇಲಾಖೆ(ಜೈಪುರ)ಯ ಜಂಟಿ ಕಾರ್ಯದರ್ಶಿಯಾಗಿ ನೇಮಕ ಮಾಡಲಾಗಿದೆ.  

ಇದನ್ನೂ ಓದಿ: Fire in Lab: ಆಂಧ್ರಪ್ರದೇಶದ ಕೆಮಿಕಲ್ ಲ್ಯಾಬ್‌ನಲ್ಲಿ ಅಗ್ನಿ ಅವಘಡ, 6 ಮಂದಿ ಸಾವು

ಇಬ್ಬರೂ ರಾಜಸ್ಥಾನ ಕೇಡರ್‌ನ ಅಧಿಕಾರಿಗಳು

ಟೀನಾ ದಾಬಿ ಪ್ರಸ್ತುತ ರಾಜಸ್ಥಾನ ಹಣಕಾಸು ಇಲಾಖೆಯಲ್ಲಿ ಜಂಟಿ ಕಾರ್ಯದರ್ಶಿಯಾಗಿದ್ದಾರೆ ಮತ್ತು ಅವರ ಭಾವಿ ಪತಿ ಪ್ರದೀಪ್ ಗವಾಂಡೆ ಅವರು ಸಚಿವಾಲಯವನ್ನು ತಲುಪಿದ್ದಾರೆ. ಇತ್ತೀಚೆಗೆ ಟೀನಾ ಮತ್ತು ಪ್ರದೀಪ್ ಸೋಷಿಯಲ್ ಮೀಡಿಯಾದಿಂದ ದೂರವಾಗಿದ್ದರು.

ಪ್ರದೀಪ್ ಗಾವಂಡೆ ಯಾರು?

ಪ್ರದೀಪ್ ಗಾವಂಡೆ 2013ರ ಬ್ಯಾಚ್‌ನ ಐಎಎಸ್ ಅಧಿಕಾರಿ. ಪ್ರದೀಪ್ 9 ಡಿಸೆಂಬರ್ 1980ರಂದು ಜನಿಸಿದರು ಮತ್ತು ಟೀನಾಗಿಂತ 13 ವರ್ಷ ದೊಡ್ಡವರು. ಪ್ರದೀಪ್ ಅವರ ಪೂರ್ಣ ಹೆಸರು ಗಾವಂಡೆ ಪ್ರದೀಪ್ ಕೇಶರಾವ್. ಪ್ರದೀಪ್ ನಾಸಿಕ್‌ನ ಸರ್ಕಾರಿ ವೈದ್ಯಕೀಯ ಕಾಲೇಜಿನಲ್ಲಿ 2ನೇ ವಿಭಾಗದಲ್ಲಿ ಎಂಬಿಬಿಎಸ್ ಮಾಡಿದ್ದಾರೆ. ನಂತರ UPSC ಪರೀಕ್ಷೆಯಲ್ಲಿ ತೇರ್ಗಡೆಯಾದರು. ತರಬೇತಿಯ ನಂತರ ಅವರು ರಾಜಸ್ಥಾನ ಕೇಡರ್ ಪಡೆದಿದ್ದರು.

ಇದನ್ನೂ ಓದಿ: ಪ್ರಧಾನ್‌ಮಂತ್ರಿ ಸಂಗ್ರಹಾಲಯ‘ ಉದ್ಘಾಟಿಸಿದ ಪ್ರಧಾನಿ ಮೋದಿ

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News