2019 ರ ಚುನಾವಣೆಯ ಫೇಕ್ ದಿನಾಂಕ ವೈರಲ್; ತನಿಖೆಗೆ ಆದೇಶಿಸಿದ ಚುನಾವಣಾ ಆಯೋಗ

ಸಾಮಾಜಿಕ ಜಾಲತಾಣಗಳಲ್ಲಿ ಮುಂಬರುವ 2019 ರ ಸಾರ್ವತ್ರಿಕ ಲೋಕಸಭಾ ಚುನಾವಣೆಗೆ ಸಂಬಂಧಿಸಿದ ದಿನಾಂಕಗಳು ವೈರಲ್ ಆಗಿದ್ದು, ಈಗ ಅದು ಫೆಸ್ ಬುಕ್ ನಿಂದ ಹಿಡಿದು ವಾಟ್ಸಪ್ ನಲ್ಲಿಯೂ ಕೂಡ ಶೇರ್ ಮಾಡಲಾಗುತ್ತಿದೆ.

Last Updated : Jan 17, 2019, 06:16 PM IST
2019 ರ ಚುನಾವಣೆಯ ಫೇಕ್ ದಿನಾಂಕ ವೈರಲ್; ತನಿಖೆಗೆ ಆದೇಶಿಸಿದ ಚುನಾವಣಾ ಆಯೋಗ title=

ನವದೆಹಲಿ: ಸಾಮಾಜಿಕ ಜಾಲತಾಣಗಳಲ್ಲಿ ಮುಂಬರುವ 2019 ರ ಸಾರ್ವತ್ರಿಕ ಲೋಕಸಭಾ ಚುನಾವಣೆಗೆ ಸಂಬಂಧಿಸಿದ ದಿನಾಂಕಗಳು ವೈರಲ್ ಆಗಿದ್ದು, ಈಗ ಅದು ಫೆಸ್ ಬುಕ್ ನಿಂದ ಹಿಡಿದು ವಾಟ್ಸಪ್ ನಲ್ಲಿಯೂ ಕೂಡ ಶೇರ್ ಮಾಡಲಾಗುತ್ತಿದೆ.

ಈಗ ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿರುವ ಚುನಾವಣಾ ಆಯೋಗ ದೆಹಲಿಯ ಮುಖ್ಯ ಚುನಾವಣಾ ಅಧಿಕಾರಿಗೆ ಈ ಫೇಕ್ ನ್ಯೂಸ್ ವೈರಲ್ ಆಗುತ್ತಿರುವ ವಿಚಾರವಾಗಿ ತನಿಖೆ ನಡೆಸಬೇಕೆಂದು ಆದೇಶಿಸಿದೆ. ಅಲ್ಲದೆ ಇದರ ಹಿಂದಿರುವ ವ್ಯಕ್ತಿಯನ್ನು ಪತ್ತೆ ಹಚ್ಚಿ ಕಾನೂನಿನ ಅಡಿಯಲ್ಲಿ ಸೂಕ್ತ ಕ್ರಮವನ್ನು ತೆಗೆದುಕೊಳ್ಳಬೇಕೆಂದು ಚುನಾವಣಾ ಆಯೋಗ ತಿಳಿಸಿದೆ.

ಕೆಲವು ದಿನಗಳ ಹಿಂದೆ ಮುಂಬರುವ ಲೋಕಸಭಾ ಚುನಾವಣೆ ದಿನಾಂಕಗಳ ಕುರಿತಾದ ಪೋಸ್ಟ್ ವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು,ಈ ಹಿನ್ನಲೆಯಲ್ಲಿ ಈ ವಿಚಾರ ಚುನಾವಣಾ ಆಯೋಗದ ಗಮನಕ್ಕೆ ಬಂದ ಹಿನ್ನಲೆಯಲ್ಲಿ ತನಿಖೆಗೆ ಆದೇಶಿಸಿದೆ. 

Trending News