ಜ&ಕಾ: ಶೋಪಿಯಾನ್ ಜಿಲ್ಲೆಯಲ್ಲಿ ಭದ್ರತಾ ಪಡೆ - ಉಗ್ರರ ನಡುವೆ ಎನ್ಕೌಂಟರ್

ಶೋಪಿಯಾನ್ ಜಿಲ್ಲೆಯ ಸಂಗ್ರನ್ ಎಂಬ ಗ್ರಾಮದಲ್ಲಿ ಅಡಗಿ ಕುಳಿತಿರುವ ಉಗ್ರರು.

Updated: Dec 3, 2018 , 08:59 AM IST
ಜ&ಕಾ: ಶೋಪಿಯಾನ್ ಜಿಲ್ಲೆಯಲ್ಲಿ ಭದ್ರತಾ ಪಡೆ - ಉಗ್ರರ ನಡುವೆ ಎನ್ಕೌಂಟರ್
File Image

ಶೋಪಿಯಾನ್: ಜಮ್ಮು ಕಾಶ್ಮೀರದ ಶೋಪಿಯಾನ್ ಪ್ರದೇಶದಲ್ಲಿನ ಸಂಗ್ರನ್ ಗ್ರಾಮದಲ್ಲಿ ಸೋಮವಾರ ಬೆಳಿಗ್ಗೆ ಭದ್ರತಾ ಪಡೆಗಳು ಮತ್ತು ಉಗ್ರರ ನಡುವೆ ಗುಂಡಿನ ಕಾಳಗ ನಡೆದಿದೆ.

ಶೋಪಿಯಾನ್ ಪ್ರದೇಶದಲ್ಲಿ ಉಗ್ರರು ಅಡಗಿರುವ ಬಗ್ಗೆ ಮಾಹಿತಿ ಪಡೆದ ಭದ್ರತಾ ಪಡೆಗಳು ಕಾರ್ಯಾಚರಣೆ ಆರಂಭಿಸಿವೆ.  ಏತನ್ಮಧ್ಯೆ, ಭದ್ರತಾ ಪಡೆಗಳ ಮೇಲೆ ಭಯೋತ್ಪಾದಕರು ಗುಂಡುಹಾರಿಸಿದ್ದು, ಭದ್ರತಾ ಪಡೆ ಪ್ರತಿ ದಾಳಿ ನಡೆಸಿದೆ. ಈ ಪ್ರದೇಶದಲ್ಲಿ 2 ರಿಂದ 3 ಭಯೋತ್ಪಾದಕರು ಅಡಗಿ ಕುಳಿತಿದ್ದಾರೆ ಎಂದು ಭದ್ರತಾ ಪಡೆಗಳು ಮಾಹಿತಿ ನೀಡಿವೆ.

ಗುರುವಾರ ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾ ಜಿಲ್ಲೆಯಲ್ಲಿ ಖ್ರೂ ಎಂಬ ಪ್ರದೇಶದಲ್ಲಿ ಎನ್'ಕೌಂಟರ್ ನಡೆಸಿದ್ದ ಭದ್ರತಾಪಡೆಗಳು ಹಿಜ್ಬುಲ್ ಮುಜಾಹಿದೀನ್ನ ಇಬ್ಬರು ಉಗ್ರರನ್ನು ಹೊಡೆದುರುಳಿಸಿತ್ತು. ಭಯೋತ್ಪಾದಕ ಸಂಸ್ಥೆಯ ರಿಯಾಜ್ ನಾಯ್ಕನ ಕಮಾಂಡರ್ ಬಳಿ ಇಬ್ಬರೂ ಸಾವನ್ನಪ್ಪಿದರು.