ಮುತ್ತಿನ ನಗರಿಯಲ್ಲಿ 'ಇವಾಂಕ ಟ್ರಂಪ್' ಷಡ್ಯೂಲ್ ವಿವರ

ಮುತ್ತಿನ ನಗರಿಯಲ್ಲಿ ಇವಾಂಕ ಟ್ರಂಪ್.

Last Updated : Nov 28, 2017, 11:52 AM IST
  • GES ಶೃಂಗಸಭೆಯಲ್ಲಿ ಪ್ರಧಾನಿ ಮೋದಿ, ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್, ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ರನ್ನು ಭೇಟಿ ಮಾಡಲಿರುವ ಇವಾಂಕ.
  • ಭಾರತೀಯ ಸಂಸ್ಕೃತಿ ಪ್ರತಿಬಿಂಬಿಸುವ ಕಾರ್ಯಕ್ರಮದಲ್ಲಿ ಇವಾಂಕ ಭಾಗಿ.
  • ಇವಾಂಕ ಗಾಗಿ ತೆಲಂಗಾಣ ಸರ್ಕಾರದ ವಿಶೇಷ ಔತಣ ಕೂಟ.
ಮುತ್ತಿನ ನಗರಿಯಲ್ಲಿ 'ಇವಾಂಕ ಟ್ರಂಪ್' ಷಡ್ಯೂಲ್ ವಿವರ title=

ಹೈದರಾಬಾದ್ : ನ. 28 ಮತ್ತು ನ. 29 ಎರಡು ದಿನಗಳ ಕಾಲ ಮುತ್ತಿನ ನಗರಿಯಲ್ಲಿ ಇರುವ ಅಮೇರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಷಡ್ಯೂಲ್ ಇಂತಿದೆ.

ನ. 28 ರಂದು ಇವಾಂಕ ಕಾರ್ಯಕ್ರಮಗಳು...

* 3 ಗಂಟೆಗೆ ಎಚ್ಐಸಿಸಿ ಜಿಎಸ್ಇ ಶೃಂಗಸಭೆಯಲ್ಲಿ ಭಾಗವಹಿಸುತ್ತಾರೆ.

* ಎಚ್ಐಸಿಸಿಯ ಎರಡನೇ ಮಹಡಿಯಲ್ಲಿ ಭಾರತೀಯ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರೊಂದಿಗೆ ಭೇಟಿ.

* GES ಸಮ್ಮೇಳನ ಉದ್ಘಾಟನೆಯ ನಂತರ, ಭಾರತದ ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಭೇಟಿ.

* ಮಹಿಳಾ ಉದ್ಯಮಿಗಳ ಪ್ರಚಾರ ಮತ್ತು ಅಭಿವೃದ್ಧಿ ಕುರಿತು ಚರ್ಚೆಯಲ್ಲಿ ಕೇಂದ್ರ ರಕ್ಷಣಾ ಸಚಿವೆ ನಿರ್ಮಲ ಸೀತಾರಾಮನ್ ಮತ್ತು ಇತರ ಮಹಿಳಾ ಪ್ರತಿನಿಧಿಗಳೊಂದಿಗೆ ಸಮಾಲೋಚನೆ.

* GES ಸಮ್ಮೇಳನ ಮೊದಲ ದಿನದ ಕಾರ್ಯಕ್ರಮ ಮುಕ್ತಾಯವಾದ ನಂತರ, ರಾತ್ರಿ 8 ಗಂಟೆಗೆ ಓಲ್ಡ್ ಬಾಸ್ಟಿಯಲ್ಲಿನ 'ಫಲಾಕ್ ನುಮಾ' ಅರಮನೆಗೆ ತೆರಳಲಿದ್ದಾರೆ. ಅಲ್ಲಿ ಭಾರತೀಯ ಸಂಸ್ಕೃತಿಯನ್ನು ಪ್ರತಿಬಿಂಬಿಸುವ ಕಲಾ ಪ್ರದರ್ಶನ ನಡೆಯಲಿದೆ.ಭದ್ರತಾ ಸಿಬ್ಬಂದಿ ಅನುಮತಿಸಿದರೆ ಇವಾಂಕ ಸಹ ನೃತ್ಯಗಾರರೊಂದಿಗೆ ಹೆಜ್ಜೆ ಹಾಕಲಿದ್ದಾರೆ.

* ಊಟದ ನಂತರ, 10:45 ಎ.ಎಂ. ಮದಪುರದ 'ಟ್ರೈಡೆಂಟ್ ಹೋಟೆಲ್ಗೆ' ಆಗಮಿಸಿ ವಿಶ್ರಾಂತಿ ಪಡೆಯಲಿದ್ದಾರೆ.

ನ. 29 ರಂದು ಇವಾಂಕ ಕಾರ್ಯಕ್ರಮಗಳು...

* ಬುಧವಾರ ಇವಾಂಕಾ ಟ್ರಂಪ್ ಮತ್ತೊಮ್ಮೆ ಎಚ್ಐಸಿಸಿ ಶೃಂಗಸಭೆಯಲ್ಲಿ ಭಾಗಿಯಾಗಲಿದ್ದಾರೆ.

* 12 ಗಂಟೆಯ ನಂತರ, ಎಚ್ಐಸಿಸಿ ಸಮಾವೇಶ ಮುಕ್ತಾಯಗೊಳ್ಳುತ್ತದೆ.

* ನಂತರ ತೆಲಂಗಾಣ ಸರ್ಕಾರ ಗೋಲ್ಕೊಂಡಾ ಹೋಟೆಲ್ನಲ್ಲಿ ಮಧ್ಯಾಹ್ನ ಏರ್ಪಡಿಸಿರುವ ವಿಶೇಷ ಔತಣ ಕೂಟದಲ್ಲಿ ಇವಾಂಕ ಪಾಲ್ಗೊಳ್ಳಲಿದ್ದಾರೆ. ಆದಾಗ್ಯೂ, ಅಧಿಕೃತ ವೇಳಾಪಟ್ಟಿಯನ್ನು ಅಂತಿಮಗೊಳಿಸಲಾಗಿಲ್ಲ. ಆದರೆ ಭದ್ರತಾ ಪಡೆಗಳು ಈ ವಿಷಯವನ್ನು ರಹಸ್ಯವಾಗಿ ಇಟ್ಟುಕೊಂಡಿದ್ದವು.

* ಊಟದ ನಂತರ ಟ್ರೈಡೆಂಟ್ ಹೋಟೆಲ್ಗೆ ಆಗಮಿಸಲಿರುವ ಇವಾಂಕ ಸ್ವಲ್ಪ ಸಮಯ ವಿಶ್ರಾಂತಿ ಪಡೆದು,  ಸಾಯಂಕಾಲ ಅಮೇರಿಕದ ಪ್ರತಿನಿಧಿಗಳನ್ನು ಭೇಟಿ ಮಾಡಲಿದ್ದಾರೆ.

* ಬುಧವಾರ 9:20 ಕ್ಕೆ ಶಂಶಾಬಾದ್ ವಿಮಾನ ನಿಲ್ದಾಣದಿಂದ ದುಬೈಗೆ ಇವಾಂಕ ಪ್ರಯಾಣ ಬೆಳೆಸಲಿದ್ದಾರೆ.

Trending News