EXCLUSIVE: ಚುನಾವಣಾ ಪ್ರಚಾರದಲ್ಲಿ ಮಾಜಿ ಪ್ರಧಾನಿ ರಾಜೀವ್ ಗಾಂಧಿ ಹೆಸರು ಪ್ರಸ್ತಾಪಿಸಿದ್ದೇಕೆ? ವೀಕ್ಷಿಸಿ ಪ್ರಧಾನಿ ಮೋದಿ ವಿಶೇಷ ಸಂದರ್ಶನ, ಇಂದು ರಾತ್ರಿ 8 ಗಂಟೆಗೆ...

ವಿರೋಧ ಪಕ್ಷಗಳು ಈ ಬಾರಿ ಚುನಾವಣೆಯಲ್ಲಿ ಯಾವ ರೀತಿಯಲ್ಲಿ ತೊಡಗಿವೆ ಎಂಬುದರ ಬಗ್ಗೆಯೂ ಪ್ರಧಾನಿ ಮಾತನಾಡಿದ್ದಾರೆ.

Last Updated : May 9, 2019, 06:40 PM IST
EXCLUSIVE: ಚುನಾವಣಾ ಪ್ರಚಾರದಲ್ಲಿ ಮಾಜಿ ಪ್ರಧಾನಿ ರಾಜೀವ್ ಗಾಂಧಿ ಹೆಸರು ಪ್ರಸ್ತಾಪಿಸಿದ್ದೇಕೆ? ವೀಕ್ಷಿಸಿ ಪ್ರಧಾನಿ ಮೋದಿ ವಿಶೇಷ ಸಂದರ್ಶನ, ಇಂದು ರಾತ್ರಿ 8 ಗಂಟೆಗೆ... title=

ನವದೆಹಲಿ: ಲೋಕಸಭಾ ಚುನಾವಣೆ ಪ್ರಚಾರದಲ್ಲಿ ಬ್ಯುಸಿ ಆಗಿರುವ ಪ್ರಧಾನಿ ನರೇಂದ್ರ ಮೋದಿ ಅವರ ವಿಶೇಷ ಸಂದರ್ಶನ ಇಂದು ರಾತ್ರಿ 8 ಗಂಟೆಗೆ ಝೀ ನ್ಯೂಸ್ ವಾಹಿನಿಯಲ್ಲಿ ಪ್ರಸಾರವಾಗಲಿದೆ. 

ಝೀ ನ್ಯೂಸ್ ಮುಖ್ಯ ಸಂಪಾದಕ ಸುಧೀರ್ ಚೌಧರಿ ನಡೆಸಿರುವ ಪ್ರಧಾನಿ ನರೇಂದ್ರ ಮೋದಿ ವಿಶೇಷ ಸಂದರ್ಶನದಲ್ಲಿ ಲೋಕಸಭಾ ಚುನಾವಣೆಯಲ್ಲಿ ಎನ್‌ಡಿಎ ಮೈತ್ರಿಕೂಟ 272ಕ್ಕೂ ಹೆಚ್ಚು ಸ್ಥಾನಗಳನ್ನು ಗಳಿಸುವ ಮೂಲಕ ಕೇಂದ್ರದಲ್ಲಿ ಮತ್ತೊಮ್ಮೆ ಸರ್ಕಾರ ರಚಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ ಮೋದಿ ಅವರೊಂದಿಗೆ ಹಲವು ವಿಚಾರಗಳ ಬಗ್ಗೆ ಚರ್ಚಿಸಿದ್ದಾರೆ.

ಒಂದು ವೇಳೆ ಲೋಕಸಭಾ ಚುನಾವಣೆಯಲ್ಲಿ ಎನ್‌ಡಿಎ ಮೈತ್ರಿಕೂಟ ಬಹುಮತ ಪಡೆಯಲು ವಿಫಲವಾದರೆ 'ಪ್ಲಾನ್ ಬಿ' ಸಿದ್ಧವಾಗಿದೆಯೇ ಎಂಬ ಸುಧೀರ್ ಚೌಧರಿ ಪ್ರಶ್ನೆಗೆ ಪ್ರತಿಕ್ರಿಯಿಸಿರುವ ಪ್ರಧಾನಿ, "ನಮ್ಮ ಬಳಿ ಕೇವಲ ಒಂದೇ ಪ್ಲಾನ್ ಇದೆ, ಮತಎಣಿಕೆ ಬಳಿಕ ಎನ್‌ಡಿಎ ಮೈತ್ರಿಕೂಟ ಸಭೆ ನಡೆಸಲಿದೆ ಮತ್ತು ಪ್ರಮಾಣವಚನ ಸ್ವೀಕಾರಕ್ಕೆ ರಾಷ್ಟ್ರಪತಿ ನಮ್ಮನ್ನು ಆಹ್ವಾನಿಸಲಿದ್ದಾರೆ" ಎಂದಿದ್ದಾರೆ.

ಬದಲಾಗಿ, ರಾಷ್ಟ್ರೀಯ ಮತ್ತು ಜಾಗತಿಕ ಮಟ್ಟದಲ್ಲಿ ಈ ಸಂದರ್ಭವನ್ನು ಹೇಗೆ ವರದಿ ಮಾಡುವುದು ಎಂಬುದರ ಬಗ್ಗೆ ವಿಶೇಷ ಕಾರ್ಯತಂತ್ರ ರೂಪಿಸುವಂತೆ ಪ್ರಧಾನಿ ಮೋದಿ ಅವರು ಸುಧೀರ್ ಚೌಧರಿ ಅವರಿಗೆ ಹೇಳಿದ್ದಾರೆ. 

ವಿರೋಧ ಪಕ್ಷಗಳು ಈ ಬಾರಿ ಚುನಾವಣೆಯಲ್ಲಿ ಯಾವ ರೀತಿಯಲ್ಲಿ ತೊಡಗಿವೆ ಎಂಬುದರ ಬಗ್ಗೆಯೂ ಪ್ರಧಾನಿ ಮಾತನಾಡಿದ್ದು, ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ತಮ್ಮನ್ನು ಪ್ರಧಾನಿಯಾಗಿ ಸ್ವೀಕರಿಸಲು ಸಿದ್ಧವಿಲ್ಲ ಎನ್ನುವ ಮೂಲಕ ಸಂವಿಧಾನಕ್ಕೆ ಅವಮಾನ ಮಾಡಿದ್ದಾರೆ ಎಂದಿದ್ದಾರೆ.

ಚುನಾವಣೆಯ ಬಗ್ಗೆ ಪ್ರಧಾನಿ ಮೋದಿ ಮತ್ತಷ್ಟು ವಿಚಾರಗಳ ಬಗ್ಗೆ ಚರ್ಚಿಸಿದ್ದಾರೆ. ಅವುಗಳ ಬಗ್ಗೆ ತಿಳಿಯಲು ಗುರುವಾರ ರಾತ್ರಿ 8 ಗಂಟೆಗೆ Zee Newsನಲ್ಲಿ ಪ್ರಸಾರವಾಗಲಿರುವ ಸುಧೀರ್ ಚೌಧರಿ ನಡೆಸಿರುವ ಪ್ರಧಾನಿ ನರೇಂದ್ರ ಮೋದಿ ಅವರ ವಿಶೇಷ ಸಂದರ್ಶನವನ್ನು ತಪ್ಪದೇ ವೀಕ್ಷಿಸಿ.

Trending News