ನವದೆಹಲಿ: ಚುನಾವಣೆಗೂ ಮೊದಲು ಫೇಸ್ ಬುಕ್ ಕಾಂಗ್ರೆಸ್ ಪಕ್ಷಕ್ಕೆ ಸಂಬಂಧಿಸಿದ 687 ಪೇಜ್ ಗಳನ್ನು ಹಾಗೂ ಇತರ ಖಾತೆಗಳನ್ನು ಅನಧಿಕೃತ ನಡವಳಿಕೆಯಿಂದ ಸಂಘಟಿತವಾಗಿರುವ ಹಿನ್ನಲೆಯಲ್ಲಿ ಸೋಮವಾರದಂದು ಅವುಗಳನ್ನು ತೆಗೆದು ಹಾಕುವುದಾಗಿ ಸೋಮವಾರ ಫೇಸ್ ಬುಕ್ ಹೇಳಿದೆ.
ಈ ಖಾತೆಗಳಲ್ಲಿ ಹಲವು ವ್ಯಕ್ತಿಗಳು ನಕಲಿ ಖಾತೆಗಳನ್ನು ಸೃಷ್ಟಿ ಮಾಡಿ ತಮ್ಮ ಪೋಸ್ಟ್ ಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಹಂಚಿಕೊಳ್ಳಲು ಹಲವಾರು ಗುಂಪುಗಳನ್ನು ಸೇರಿದ್ದಾರೆ. ಈ ಹಿನ್ನಲೆಯಲ್ಲಿ ಅಂತಹ ಪೇಜ್ ಗಳನ್ನು ಹಾಗೂ ಖಾತೆಗಳನ್ನು ತೆಗೆದುಹಾಕಲಾಗುವುದು ಎಂದು ಫೇಸ್ಬುಕ್ ಸೈಬರ್ ಸೆಕ್ಯೂರಿಟಿ ಪಾಲಿಸಿ ಮುಖ್ಯಸ್ಥ ನಥಾನಿಯಲ್ ಗ್ಲೀಚರ್ ಹೇಳಿದ್ದಾರೆ.
ಇತ್ತೀಚಿಗೆ ಚುನಾವಣಾ ಆಯೋಗವು ಕೂಡ ಫೇಕ್ ನ್ಯೂಸ್ ವಿಚಾರವಾಗಿ ಕ್ರಮ ತೆಗೆದುಕೊಳ್ಳುವ ನಿಟ್ಟಿನಲ್ಲಿ ಸೋಶಿಯಲ್ ಮಿಡಿಯಾ ವೇದಿಕೆಗಳಿಗೆ ಸೂಚನೆ ನೀಡಿತ್ತು. ಈ ಹಿನ್ನಲೆಯಲ್ಲಿ ಪಾರದರ್ಶಕ ಚುನಾವಣೆ ನಡೆಯುವ ನಿಟ್ಟಿನಲ್ಲಿ ಚುನಾವಣಾ ಆಯೋಗದ ಜೊತೆ ಅವು ಕೈಜೋಡಿಸಿದ್ದವು. ಇದೇ ಏಪ್ರಿಲ್ 11 ರಿಂದ ಲೋಕಸಭಾ ಚುನಾವಣೆಯಲ್ಲಿ ಪ್ರಾರಂಭವಾಗಿ ಮೇ 19 ರಂದು ಕೊನೆಗೊಳ್ಳಲಿದೆ.ಅಂತಿಮ ಫಲಿತಾಂಶಗಳು ಮೇ 23 ರಂದು ಘೋಷಿಸಲ್ಪಡುತ್ತವೆ.ಈ ಹಿನ್ನಲೆಯಲ್ಲಿ ಅವು ಈಗ ಕ್ರಮ ಕೈಗೊಳ್ಳಲು ಮುಂದಾಗಿವೆ ಎಂದು ತಿಳಿದುಬಂದಿದೆ.