ಗುರುಗ್ರಾಮ: ಇಡಿ-ಸಿಬಿಐ ಅಧಿಕಾರಿಗಳಂತೆ ನಟಿಸಿ ಕೋಟ್ಯಂತರ ರೂ. ಹಣಕ್ಕೆ ಬೇಡಿಕೆ ಇಟ್ಟಿದ್ದ ತಂದೆ-ಮಗನನ್ನು ಸಿನಿಮೀಯ ರೀತಿಯಲ್ಲಿ ಪೊಲೀಸರು ಬಂಧಿಸಿದ್ದಾರೆ. ಹರ್ಯಾಣದ ಗುರುಗ್ರಾಮದಲ್ಲಿ ಈ ಘಟನೆ ನಡೆದಿದ್ದು, ರೆಡ್‍ಹ್ಯಾಂಡ್ ಆಗಿ ಆರೋಪಿಗಳನ್ನು ಬಂಧಿಸಲಾಗಿದೆ.
ಬಂಧಿತ ಆರೋಪಿಗಳನ್ನು ಯಶ್ಪಾಲ್ ಅರೋರಾ ಮತ್ತು ರಾಹುಲ್ ಅರೋರಾ ಎಂದು ಗುರುತಿಸಲಾಗಿದೆ. ಇವರಿಬ್ಬರು ನಕಲಿ ಪ್ರಕರಣಗಳ ಮೂಲಕ ಬೆದರಿಕೆ ಹಾಕಿ ಜನರನ್ನು ವಂಚಿಸುವುದನ್ನೇ ಉದ್ಯೋಗ ಮಾಡಿಕೊಂಡಿದ್ದರು. ನಾವು ಇಡಿ-ಸಿಬಿಐ ಅಧಿಕಾರಿಗಳು ಎಂದು ಹೇಳಿ ಕೋಟಿ-ಕೋಟಿ ಹಣಕ್ಕೆ ಬೇಡಿಕೆ ಇಡುತ್ತಿದ್ದರು.
Haryana | A father-son duo, Yashpal Arora and Rahul Arora, arrested in Gurugram for posing as ED-CBI officer and duping people by threatening them with fake cases. pic.twitter.com/ShZSturC8m
— ANI (@ANI) May 12, 2022
ಇದನ್ನೂ ಓದಿ: 7th Pay Commission : ಕೇಂದ್ರ ನೌಕರರಿಗೆ ಸಿಹಿ ಸುದ್ದಿ : DA ಶೇ.13ರಷ್ಟು ಹೆಚ್ಚಳ, 3 ತಿಂಗಳ ಬಾಕಿ ಹಣ ಕೈಗೆ!
ಯಶ್ಪಾಲ್ ಬಾತ್ರಾ ಎಂಬುವವರ ವಿರುದ್ಧದ ದೂರನ್ನು ಹಿಂಪಡೆಯಲು ಆರೋಪಿಗಳಾದ ತಂದೆ-ಮಗ ಬರೋಬ್ಬರಿ 4 ಕೋಟಿ ರೂ.ಗೆ ಬೇಡಿಕೆ ಇಟ್ಟಿದ್ದರು. ಆದರೆ ಈ ಪ್ರಕರಣ ನಕಲಿಯಾಗಿದ್ದು, ತಂದೆ ಮತ್ತು ಮಗನ ಬಣ್ಣ ಬಯಲಾಗಿದೆ.
ಯಶ್ಪಾಲ್ ಬಾತ್ರಾರಿಗೆ ವಂಚಿಸುತ್ತಿದ್ದ ಈ ಇಬ್ಬರನ್ನು ರೆಡ್ ಹ್ಯಾಂಡ್ ಆಗಿ ಹಿಡಿದು ಬಂಧಿಸಲಾಗಿದೆ ಗುರುಗ್ರಾಮದ ಅಪರಾಧ ವಿಭಾಗದ ಡಿಸಿಪಿ ತಿಳಿಸಿದ್ದಾರೆ. ಈ ಬಗ್ಗೆ ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಅವರು ತಿಳಿಸಿದ್ದಾರೆ. ಈ ಹಿಂದೆಯೂ ಆರೋಪಿಗಳು ನಕಲಿ ಪ್ರಕರಣಗಳ ಮೂಲಕ ಅನೇಕರನ್ನು ಬೆದರಿಸಿ ಹಣ ವಸೂಲಿ ಮಾಡಿರುವ ಬಗ್ಗೆ ಆರೋಪಗಳು ಕೇಳಿಬಂದಿದೆ. ಈ ಬಗ್ಗೆ ಪೊಲೀಸರು ಆರೋಪಿಗಳ ವಿಚಾರಣೆ ನಡೆಸುತ್ತಿದ್ದಾರೆ.
ಇದನ್ನೂ ಓದಿ: ಬೇಸಿಗೆ ಹಿನ್ನೆಲೆ ಶಾಲೆಗಳಿಗೆ ಕೇಂದ್ರದ ನೂತನ ಮಾರ್ಗಸೂಚಿ
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.