ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸಿತಾರಮನ್ ಅವರಿಂದ ಸಂಜೆ 4 ಗಂಟೆಗೆ ಸುದ್ದಿಗೋಷ್ಠಿ

ಈ ಆರ್ಥಿಕ ಪ್ಯಾಕೇಜ್ ಅನ್ನು ವಿವಿಧ ಕ್ಷೇತ್ರಗಳಿಗೆ ಹೇಗೆ ವಿತರಿಸಲಾಗುವುದು ಎಂಬುದನ್ನು ವಿವರಿಸಲು ಕೇಂದ್ರ ಹಣಕಾಸು ಸಚಿವ ನಿರ್ಮಲಾ ಸೀತಾರಾಮನ್ ಅವರು ಇಂದು ಸಂಜೆ 4 ಗಂಟೆಗೆ ಪತ್ರಿಕಾಗೋಷ್ಠಿ ನಡೆಸಲಿದ್ದಾರೆ.

Last Updated : May 13, 2020, 12:16 PM IST
ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸಿತಾರಮನ್ ಅವರಿಂದ ಸಂಜೆ 4 ಗಂಟೆಗೆ ಸುದ್ದಿಗೋಷ್ಠಿ title=

ನವದೆಹಲಿ:ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಇಂದು ಸಂಜೆ 4 ಗಂಟೆಗೆ ಪತ್ರಿಕಾಗೋಷ್ಠಿ ನಡೆಸಲಿದ್ದಾರೆ. ನಿನ್ನೆ, ಪ್ರಧಾನಿ ನರೇಂದ್ರ ಮೋದಿ ಅವರು ದೇಶಕ್ಕೆ 20 ಲಕ್ಷ ಕೋಟಿ ರೂಪಾಯಿಗಳ ಆರ್ಥಿಕ ಪ್ಯಾಕೇಜ್ ಘೋಷಿಸಿದ್ದಾರೆ.ಮುಂದಿನ ದಿನಗಳಲ್ಲಿ ದೇಶದ ವಿವಿಧ ವಿಭಾಗಗಳು, ಕ್ಷೇತ್ರಗಳು ಮತ್ತು ವ್ಯವಹಾರಗಳಿಗೆ ಈ ಆರ್ಥಿಕ ಪ್ಯಾಕೇಜ್ ಅನ್ನು ಹೇಗೆ ನೀಡಲಾಗುವುದು ಎಂಬುದರ ಕುರಿತು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ವಿಸ್ತೃತ ಮಾಹಿತಿ ನೀಡಲಿದ್ದಾರೆ ಎಂದು ಪ್ರಧಾನಿ ಹೇಳಿದ್ದರು. ಈ ಪ್ಯಾಕೇಜ್ ಅಡಿಯಲ್ಲಿ ಎಷ್ಟು ಮೊತ್ತವನ್ನು ನೀಡಲಾಗುವುದು ಎಂಬುದರ ವಿಸ್ತೃತ ವಿವರವನ್ನು ನೀಡಲು ಇಂದು ಹಣಕಾಸು ಸಚಿವೆ ಸಂಜೆ 4 ಗಂಟೆಗೆ ಪತ್ರಿಕಾಗೋಷ್ಠಿ ನಡೆಸಲಿದ್ದಾರೆ.

ಮಾರ್ಚ್ ಕೊನೆಯ ವಾರದಲ್ಲಿ ಪ್ರಧಾನ ಮಂತ್ರಿ ಗರಿಬ್ ಕಲ್ಯಾಣ್ ಯೋಜನೆ ಅಡಿಯಲ್ಲಿ ಹಣಕಾಸು ಸಚಿವರು ಈಗಾಗಲೇ 1.70 ಲಕ್ಷ ಕೋಟಿ ರೂ.ಗಳ ಆರ್ಥಿಕ ಪರಿಹಾರ ಪ್ಯಾಕೇಜ್ ಘೋಷಿಸಿದ್ದಾರೆ ಇದಲ್ಲದೆ ಭಾರತದ ವಿವಿಧ ಕ್ಷೇತ್ರಗಳಿಗೆ ಸುಮಾರು 5.24 ಲಕ್ಷ ಕೋಟಿ ರೂಪಾಯಿಗಳ ಕ್ರಮವನ್ನು ಭಾರತೀಯ ರಿಸರ್ವ್ ಬ್ಯಾಂಕ್ ಪ್ರಕಟಿಸಿದೆ. ನೀವು ಈ ಮೊತ್ತವನ್ನು ಸೇರಿಸಿದರೆ, ಈಗಾಗಲೇ 7 ಲಕ್ಷ ಕೋಟಿ ರೂಪಾಯಿಗಳನ್ನು ಘೋಷಿಸಲಾಗಿದೆ. ಆದ್ದರಿಂದ, ಉಳಿದ 13 ಲಕ್ಷ ಕೋಟಿ ರೂ.ಗಳನ್ನು ಇಂದು ಹೇಗೆ ವಿಂಗಡಿಸಲಾಗುವುದು ಎಂಬ ಬಗ್ಗೆ ಹಣಕಾಸು ಸಚಿವೆ ಮಾಹಿತಿ ನೀಡಲಿದ್ದಾರೆ.

ನಿನ್ನೆ ಪ್ರಧಾನಿ ನರೇಂದ್ರ ಮೋದಿ ಅವರು ದೇಶವನ್ನು ಉದ್ದೇಶಿಸಿ ಮಾತನಾಡುತ್ತಾ 20 ಲಕ್ಷ ಕೋಟಿ ರೂ.ಗಳ ಆರ್ಥಿಕ ಪ್ಯಾಕೇಜ್ ಘೋಷಿಸಿದ್ದಾರೆ. ಈ ಸಂದರ್ಭದಲ್ಲಿ, ಈ ಪ್ಯಾಕೇಜ್ ಮೂಲಕ ದೇಶದ ವಿವಿಧ ವಿಭಾಗಗಳು, ಆರ್ಥಿಕ ವ್ಯವಸ್ಥೆಯ ಕೊಂಡಿಗಳು, 20 ಲಕ್ಷ ಕೋಟಿ ರೂಪಾಯಿಗಳಬೆಂಬಲ ಪಡೆಯಲಿವೆ ಎಂದು ಅವರು ಮಾಹಿತಿ ನೀಡಿದ್ದರು. 20 ಲಕ್ಷ ಕೋಟಿ ರೂಪಾಯಿಗಳ ಈ ಪ್ಯಾಕೇಜ್ 2020 ರಲ್ಲಿ ದೇಶದ ಅಭಿವೃದ್ಧಿ ಪಯಣಕ್ಕೆ ಸ್ವಾವಲಂಭಿ ಭಾರತ  ಅಭಿಯಾನಕ್ಕೆ ಹೊಸ ಪ್ರಚೋದನೆಯನ್ನು ನೀಡಲಿದೆ ಎಂದು ಪ್ರಧಾನಿ ಮೋದಿ ಹೇಳಿದ್ದರು.

ರಿಸರ್ವ್ ಬ್ಯಾಂಕಿನ ನಿರ್ಧಾರಗಳನ್ನು ಹೊರತುಪಡಿಸಿ, ಇತ್ತೀಚೆಗೆ ಕರೋನಾ ಬಿಕ್ಕಟ್ಟಿಗೆ ಸಂಬಂಧಿಸಿದ ಆರ್ಥಿಕ ಪ್ರಕಟಣೆಗಳನ್ನು ಸರ್ಕಾರ ಮಾಡಿದೆ ಮತ್ತು ಇಂದು ಘೋಷಿಸಲಾಗುತ್ತಿರುವ ಆರ್ಥಿಕ ಪ್ಯಾಕೇಜ್ ಸೇರಿ ಇದು ಸುಮಾರು 20 ಲಕ್ಷ ಆಗಲಿದೆ ಎಂದು ಪಿಎಂ ಮೋದಿ ಹೇಳಿದ್ದು, ಈ ಪ್ಯಾಕೇಜ್ ಭಾರತದ ಜಿಡಿಪಿಯ ಶೇಕಡಾ 10 ರಷ್ಟಿದೆ ಎಂದಿದ್ದಾರೆ.

Trending News