ನವದೆಹಲಿ : Amarnath Cave Shivling 2021: ಅಮರನಾಥ ಗುಹೆಯಲ್ಲಿ ಈ ಬಾರಿ ಕಂಡು ಬಂದ ಶಿವಲಿಂಗದ ಪೋಟೋಗಳು ಇದೋಗ ಹೊರ ಬಂದಿವೆ. ಪ್ರತಿ ವರ್ಷದಂತೆ, ಈ ಬಾರಿಯೂ ಕೂಡಾ ಶಿವಲಿಂಗದ (Amarnath cave Shivalinga) ಆಕಾರ ಮನೋಹರವಾಗಿದೆ. ಜಮ್ಮು ಮತ್ತು ಕಾಶ್ಮೀರದ ಉಪರಾಜ್ಯಪಾಲರಾದ ಮನೋಜ್ ಸಿನ್ಹಾ, ಅಮರನಾಥ ಗುಹೆಯಲ್ಲಿರುವ ಹಿಮಭರಿತ ಶಿವಲಿಂಗ್ ದರ್ಶನ ಪಡೆದಿದ್ದಾರೆ.
ಈ ಸಂದರ್ಭದಲ್ಲಿ ಮಾತನಾಡಿದ ಸಿನ್ಹಾ, "ಶಿವನ ಆಶೀರ್ವಾದದಿಂದ ಪ್ರತಿಯೊಬ್ಬರ ಜೀವನದಲ್ಲಿ ಉತ್ತಮ ಆರೋಗ್ಯ ಮತ್ತು ಸಂತೋಷ ಸಿಗುವಂತಾಗಲಿ ಎಂದು ಹೇಳಿದ್ದಾರೆ. ಸದ್ಯದ ಪರಿಸ್ಥಿತರಿಯಲ್ಲಿ ಎದುರಾಗಿರುವ ಆರೋಗ್ಯ ಸಮಸ್ಯೆಗಳಿಂದ (Health Problems) ಎಲ್ಲರೂ ಮುಕ್ತರಾಗುವಮತಾಗಲಿ ಎಂದು ಹೇಳಿದ್ದಾರೆ.
ಇದನ್ನೂ ಓದಿ : International Flights : ಜು. 31 ರವರೆಗೆ ಇಂಟೆರ್ ನ್ಯಾಷನಲ್ ಫ್ಲೈಟ್ ಬಂದ್ : ಕೇಂದ್ರ ಸರ್ಕಾರ ಆದೇಶ
ಪವಿತ್ರ ಗುಹಾ ದೇವಾಲಯದ, ವಾರ್ಷಿಕ ತೀರ್ಥಯಾತ್ರೆ ಜಮ್ಮು ಮತ್ತು ಕಾಶ್ಮೀರದಲ್ಲಿ (Kashmir) ಸಾಂಸ್ಕೃತಿಕ ಸಮನ್ವಯತೆಯ ಪರಂಪರೆಗೆ ಸಾಕ್ಷಿಯಾಗಿದೆ. ಆದರೆ COVID-19 ಸಾಂಕ್ರಾಮಿಕ ರೋಗದ ದೃಷ್ಟಿಯಿಂದ, ಈ ವರ್ಷ ವಾರ್ಷಿಕ ಯಾತ್ರೆಯನ್ನು 'ಸಾಂಕೇತಿಕ'ವಾಗಿಡಲು ನಿರ್ಧರಿಸಲಾಗಿದೆ. ಅಂದರೆ ಭಕ್ತರು ಈ ಬಾರಿ ಇಲ್ಲಿಗೆ ಭೇಟಿ ನೀಡಿ ದರ್ಶನ ಪಡೆಯುವಂತಿಲ್ಲ. ಆದರೆ, ಭಕ್ತರ ಭಾವನೆಗಳನ್ನು ಗೌರವಿಸುವ ದೃಷ್ಟಿಯಿಂದ, ಪವಿತ್ರ ಗುಹಾ ದೇವಾಲಯದ ಬೆಳಿಗ್ಗೆ ಮತ್ತು ಸಂಜೆಯ ಆರತಿಯ ನೇರ ಪ್ರಸಾರಕ್ಕೆ (Live telecast of Aarati) ಎಸ್‌ಎಎಸ್‌ಬಿ ವ್ಯವಸ್ಥೆ ಮಾಡಿದೆ. ಪದ್ದತಿಯಂತೆಯೇ ಎಲ್ಲಾ ಸಾಂಪ್ರದಾಯಿಕ ಧಾರ್ಮಿಕ ವಿಧಿಗಳನ್ನು ದೇವಾಲಯದಲ್ಲಿ ನಡೆಸಲಾಗುವುದು ಎಂದು ಮನೋಜ್ ಸಿನ್ಹಾ ತಿಳಿಸಿದ್ದಾರೆ.
ಎಸ್‌ಎಎಸ್‌ಬಿಯ ಪೋರ್ಟಲ್ www.shreeamarnathjishrine.com/aartilive.html ಮೂಲಕ ಭಕ್ತರು ಪೂಜೆಯ ನೇರ ಪ್ರಸಾರವನ್ನು ವೀಕ್ಷಿಸಬಹುದು. ಮೊಬೈಲ್ ಆಧಾರಿತ ಅಪ್ಲಿಕೇಶನ್ ಮೂಲಕವೂ ಇದನ್ನು ಸ್ಟ್ರೀಮ್ ಮಾಡಬಹುದು. ಗೂಗಲ್ ಪ್ಲೇ ಸ್ಟೋರ್‌ನಿಂದ ಇದನ್ನೂ ಡೌನ್‌ಲೋಡ್ ಮಾಡಿಕೊಳ್ಳಬೇಕು.
ಇದನ್ನೂ ಓದಿ : Supreme Court Big Verdict: ಕೊರೊನಾದಿಂದ ಮೃತಪಟ್ಟವರ ಕುಟುಂಬ ಸದಸ್ಯರಿಗೆ ಸರ್ಕಾರ ಪರಿಹಾರ ಒದಗಿಸಬೇಕು
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.