VIDEO: ಕೈಲಾಸ ಮಾನಸ ಸರೋವರದಲ್ಲಿ ರಾಹುಲ್​ ಗಾಂಧಿ

ಶುಕ್ರವಾರ, ರಾಹುಲ್ ಗಾಂಧಿ ತಮ್ಮ ಟ್ವಿಟ್ಟರ್ ಪುಟದಲ್ಲಿ ಕೈಲಾಶ್ ಮಾನಸಸರೋವರ ಯಾತ್ರೆಯ ವೀಡಿಯೊವನ್ನು ಹಂಚಿಕೊಂಡಿದ್ದಾರೆ. ಈ ವೀಡಿಯೊದ ಶೀರ್ಷಿಕೆಯಲ್ಲಿ, ರಾಹುಲ್ "ಶಿವನೇ ಬ್ರಹ್ಮಾಂಡ" ಎಂದು ಬರೆದಿದ್ದಾರೆ.

Last Updated : Sep 7, 2018, 11:37 AM IST
VIDEO: ಕೈಲಾಸ ಮಾನಸ ಸರೋವರದಲ್ಲಿ ರಾಹುಲ್​ ಗಾಂಧಿ title=
Pic: ANI

ನವದೆಹಲಿ: ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಕೈಲಾಸ ಮಾನಸ ಸರೋವರದಲ್ಲಿದ್ದಾರೆ. ಕೈಲಾಸ ಮಾನಸ ಸರೋವರ ಯಾತ್ರೆಗೆ ತೆರಳಿರುವ ರಾಹುಲ್ ಅವರ ಕೆಲವು ಛಾಯಾಚಿತ್ರಗಳು ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿವೆ. ಈ ಛಾಯಾಚಿತ್ರಗಳಲ್ಲಿ, ರಾಹುಲ್ ಗಾಂಧಿ ಜೀನ್ಸ್, ಜಾಕೆಟ್ಗಳು ಮತ್ತು ಸ್ಪೋರ್ಟ್ಸ್ ಶೂ ನಲ್ಲಿ ಕಾಣಿಸಿಕೊಂಡಿದ್ದಾರೆ. 

ಅಲ್ಲಿನ ಪ್ರವಾಸಿಗರ ಜೊತೆಗೆ ಸೆಲ್ಫಿ ಕ್ಲಿಕ್ಕಿಸಿಕೊಂಡಿದ್ದು ಅವರ ಅಭಿಮಾನಿಗಳು ಆ ಫೋಟೋಗಳನ್ನು ಟ್ವಿಟ್ಟರ್ ನಲ್ಲಿ ಶೇರ್ ಮಾಡಿದ್ದಾರೆ. 

ರಾಹುಲ್ ಅವರ ಕೈಲಾಶ್ ಯಾತ್ರೆಯನ್ನು ವಿಡಿಯೋ ಸುದ್ದಿ ಸಂಸ್ಥೆ ANI ಬಿಡುಗಡೆ ಮಾಡಿದೆ. ಈ ವಿಡಿಯೋದಲ್ಲಿ ರಾಹುಲ್ ಗಾಂಧಿಯವರು ಅಲ್ಲಿರುವ ಕೆಲವು ಜನರೊಂದಿಗೆ ಮಾತನಾಡುತ್ತಿದ್ದಾರೆ.

ಶುಕ್ರವಾರ, ರಾಹುಲ್ ಗಾಂಧಿ ತಮ್ಮ ಟ್ವಿಟ್ಟರ್ ಪುಟದಲ್ಲಿ ಕೈಲಾಶ್ ಮಾನಸಸರೋವರ ಯಾತ್ರೆಯ ವೀಡಿಯೊವನ್ನು ಹಂಚಿಕೊಂಡಿದ್ದಾರೆ. ಈ ವೀಡಿಯೊದ ಶೀರ್ಷಿಕೆಯಲ್ಲಿ, ರಾಹುಲ್ "ಶಿವನೇ ಬ್ರಹ್ಮಾಂಡ" ಎಂದು ಬರೆದಿದ್ದಾರೆ.

ಇದಕ್ಕೂ ಮೊದಲು ಗುರುವಾರ ತಮ್ಮ ಕೈಲಾಸ ಮಾನಸ ಸರೋವರ ಯಾತ್ರೆಯ ಕೆಲವು ಚಿತ್ರಗಳನ್ನು ಶೇರ್ ಮಾಡಿದ್ದ ರಾಹುಲ್, "ಈ ಭವ್ಯ ಪರ್ವತಕ್ಕೆ ಬಂದಿರುವುದೇ ಸೌಭಾಗ್ಯ. ಇಂತಹ ಅವಕಾಶ ಲಭಿಸಿರುವುದು ನನಗೆ ಸಂತೋಷವಾಗಿದೆ ಎಂದು ಟ್ವೀಟ್ ಮಾಡಿದ್ದರು. 

Trending News