ಗುಜರಾತ್, ಮಹಾರಾಷ್ಟ್ರ, ಕೇರಳ, ಕರ್ನಾಟಕದಲ್ಲಿ ಪ್ರವಾಹ; ನಿರಂತರ ಮಳೆಯಿಂದಾಗಿ ಕನಿಷ್ಠ 162 ಮಂದಿ ಮೃತ

ನೈರುತ್ಯ ಮಾನ್ಸೂನ್ ಮಾರುತದದಿಂದಾಗಿ ನಿರಂತರವಾಗಿ ಸುರಿಯುತ್ತಿರುವ ಧಾರಾಕಾರ ಮಳೆಯಿಂದ ಹಲವು ರಾಜ್ಯಗಳ ವಿವಿಧ ಜಿಲ್ಲೆಗಳಲ್ಲಿ ಜನ ಜೀವನ ಅಸ್ತವ್ಯಸ್ತವಾಗಿದೆ.

Last Updated : Aug 10, 2019, 12:08 PM IST
ಗುಜರಾತ್, ಮಹಾರಾಷ್ಟ್ರ, ಕೇರಳ, ಕರ್ನಾಟಕದಲ್ಲಿ ಪ್ರವಾಹ; ನಿರಂತರ ಮಳೆಯಿಂದಾಗಿ ಕನಿಷ್ಠ 162 ಮಂದಿ ಮೃತ title=

ನವದೆಹಲಿ: ಮಹಾರಾಷ್ಟ್ರ, ಕೇರಳ, ಕರ್ನಾಟಕ ಮತ್ತು ಗುಜರಾತ್ ರಾಜ್ಯಗಳಲ್ಲಿ ಉಂಟಾಗಿರುವ ಪ್ರವಾಹದಿಂದಾಗಿ ಈವರೆಗೂ ಕನಿಷ್ಠ 162 ಜನರನ್ನು ಬಲಿ ತೆಗೆದುಕೊಂಡಿದೆ ಮತ್ತು ಲಕ್ಷಾಂತರ ಜನರನ್ನು ಸ್ಥಳಾಂತರಿಸಲಾಗಿದೆ. ಈ ರಾಜ್ಯಗಳಲ್ಲಿನ ಪ್ರವಾಹ ಪರಿಸ್ಥಿತಿ ಹಿನ್ನೆಲೆಯಲ್ಲಿ ರಕ್ಷಣಾ ಮತ್ತು ಪರಿಹಾರ ಕಾರ್ಯಾಚರಣೆಗಳ ಕುರಿತು ಗೃಹ ಸಚಿವಾಲಯವು ಉನ್ನತ ಮಟ್ಟದ ಸಭೆ ನಡೆಸಿತು.

ಕರ್ನಾಟಕದಲ್ಲಿ, ಬೆಳಗಾವಿ ಜಿಲ್ಲೆಯಲ್ಲಿ ಪ್ರವಾಹದಿಂದಾಗಿ ಕನಿಷ್ಠ ಆರು ಜನರು ಪ್ರಾಣ ಕಳೆದುಕೊಂಡಿದ್ದಾರೆ. ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ದಕ್ಷಿಣ ಕನ್ನಡ, ಉತ್ತರ ಕನ್ನಡ, ರಾಯಚೂರು, ಬಾಗಲ್ಕೋಟ್, ಬೆಳಗಾವಿ, ಚಿಕ್ಕೋಡಿ, ಶಿವಮೊಗ್ಗ, ಬೀದರ್, ಹಾವೇರಿ, ಕೊಡಗು, ಕೊಪ್ಪಳ, ಯಾದಗಿರಿ, ಕಲಬುರ್ಗಿ, ಧಾರವಾಡ, ಬಳ್ಳಾರಿ ಮತ್ತು ಗದಗ ಜಿಲ್ಲೆಗಳಲ್ಲಿ ಎಲ್ಲ ಶಾಲೆಗಳು, ಕಾಲೇಜುಗಳು ಮತ್ತು ಶಿಕ್ಷಣ ಸಂಸ್ಥೆಗಳನ್ನು ಆಗಸ್ಟ್ 15 ರವರೆಗೆ ಮುಚ್ಚಲು ಆದೇಶಿಸಲಾಗಿದೆ. 

ಪ್ರವಾಹ ಸಂಬಂಧಿತ ತುರ್ತು ಸ್ಥಿತಿಯಲ್ಲಿ ರಕ್ಷಣೆಗಾಗಿ ಕರ್ನಾಟಕ ರಾಜ್ಯ ಸರ್ಕಾರ ಸಹಾಯವಾಣಿ ಆರಂಭಿಸಿದ್ದು, ಕೆಳಕಂಡ ಸಹಾಯವಾಣಿ ಸಂಖ್ಯೆಗೆ ಕರೆ ಮಾಡಿ ಸರ್ಕಾರದ ನೆರವು ಪಡೆಯಬಹುದು.

ಕರ್ನಾಟಕ​ ರಾಜ್ಯ ಸಹಾಯವಾಣಿ ಕೇಂದ್ರ:

* 080-1070
* 080-22340676
ಸಹಾಯವಾಣಿಗಾಗಿ ವಾಟ್ಸಾಪ್ ಸಂಖ್ಯೆ: 9008405955

ಪ್ರವಾಹಕ್ಕೆ ಸಿಲುಕಿರುವ ಜಿಲ್ಲೆಗಳ ಸಹಾಯವಾಣಿ ಸಂಖ್ಯೆ:

  • ಬೆಳಗಾವಿ ಜಿಲ್ಲಾ ಸಹಾಯವಾಣಿ - 0831-2407290
  • ಯಾದಗಿರಿ ಜಿಲ್ಲಾ ಸಹಾಯವಾಣಿ - 08473-253771
  • ಉತ್ತರಕನ್ನಡ ಜಿಲ್ಲಾ ಸಹಾಯವಾಣಿ - 08382-229857
  • ವಿಜಯಪುರ ಜಿಲ್ಲಾ ಸಹಾಯವಾಣಿ - 08352-221261
  • ರಾಯಚೂರು ಜಿಲ್ಲಾ ಸಹಾಯವಾಣಿ - 08532-226383
  • ಕೊಡಗು ಜಿಲ್ಲಾ ಸಹಾಯವಾಣಿ - 08272-221077
  • ಬಾಗಲಕೋಟೆ ಜಿಲ್ಲಾ ಸಹಾಯವಾಣಿ - 08354-236240
  • ದಕ್ಷಿಣ ಕನ್ನಡ ಜಿಲ್ಲಾ ಸಹಾಯವಾಣಿ - 0824-2442590
  • ಹಾಸನ ಜಿಲ್ಲಾ ಸಹಾಯವಾಣಿ - 08172-261111
  • ಶಿವಮೊಗ್ಗ ಜಿಲ್ಲಾ ಸಹಾಯವಾಣಿ - 08182-271101, 08182-267226
  • ಉಡುಪಿ ಜಿಲ್ಲಾ ಸಹಾಯವಾಣಿ - 0820-2574802
  • ಚಿಕ್ಕಮಗಳೂರು ಜಿಲ್ಲಾ ಸಹಾಯವಾಣಿ - 08262-238950

ಮಹಾರಾಷ್ಟ್ರದಲ್ಲಿ ಮಾತ್ರ ಒಂದು ವಾರದಲ್ಲಿ 30 ಜನರು ಸಾವನ್ನಪ್ಪಿದ್ದಾರೆ. ಸತಾರಾ, ಸಾಂಗ್ಲಿ ಮತ್ತು ಕೊಲ್ಹಾಪುರದ ಹಲವಾರು ಭಾಗಗಳು ಶನಿವಾರ ಪ್ರವಾಹದಲ್ಲಿ ಮುಳುಗಿವೆ. ಕರ್ನಾಟಕದ ಆಲಮಟ್ಟಿ ಅಣೆಕಟ್ಟಿನಿಂದ ನೀರು ಬಿಡುಗಡೆ ಮಾಡುವುದರಿಂದ ಇನ್ನೂ ಮೂರು ಜಿಲ್ಲೆಗಳಲ್ಲಿನ ಪ್ರವಾಹ ಪರಿಸ್ಥಿತಿ ಕಡಿಮೆಯಾಗಿಲ್ಲ. ಧಾರಾಕಾರವಾಗಿ ಸುರಿಯುತ್ತಿದ್ದ ಮಳೆಯಿಂದ ಕೊಂಚ ವಿರಾಮ ದೊರೆತಿದ್ದರೂ ಮುಖ್ಯ ನದಿಗಳಲ್ಲಿ ಮತ್ತು ಕೆಲ ಪ್ರದೇಶಗಳಲ್ಲಿ ನೀರಿನ ಮಟ್ಟ ಕಡಿಮೆಯಾಗಲಿಲ್ಲ. ರಕ್ಷಣಾ ಮತ್ತು ಪರಿಹಾರ ಕಾರ್ಯಾಚರಣೆ ಇನ್ನೂ ನಡೆಯುತ್ತಿದೆ. ರಾಷ್ಟ್ರೀಯ ವಿಪತ್ತು ಪ್ರತಿಕ್ರಿಯೆ ಪಡೆ (ಎನ್‌ಡಿಆರ್‌ಎಫ್), ನೌಕಾಪಡೆ, ಸೇನೆ, ವಾಯುಪಡೆ, ಮತ್ತು ಕೋಸ್ಟ್ ಗಾರ್ಡ್ ರಕ್ಷಣಾ ಕಾರ್ಯಗಳಿಗೆ ನೆರವಾಗುತ್ತಿವೆ.

ಪ್ರವಾಹ ಪೀಡಿತ ಎರಡು ಜಿಲ್ಲೆಗಳಿಂದ ಸುಮಾರು 10,000 ಜನರನ್ನು ಎನ್‌ಡಿಆರ್‌ಎಫ್ ಶುಕ್ರವಾರ ರಕ್ಷಿಸಿದೆ - ಸಾಂಗ್ಲಿ ಜಿಲ್ಲೆಯ ಸುಮಾರು 8000 ಜನರು ಮತ್ತು ಕೊಲ್ಹಾಪುರ ಜಿಲ್ಲೆಯ ಸುಮಾರು 2000 ಜನರನ್ನು ರಕ್ಷಿಸಲಾಗಿದೆ. ಸುಮಾರು 40,000 ಲಾರಿಗಳು ಇನ್ನೂ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಿಲುಕಿಕೊಂಡಿವೆ. ಸುಮಾರು 2,52,813 ಜನರನ್ನು ರಕ್ಷಿಸಲಾಗಿದೆ ಎಂದು ಮಹಾರಾಷ್ಟ್ರ ಮುಖ್ಯಮಂತ್ರಿಗಳ ಕಚೇರಿ ಟ್ವೀಟ್ ಮಾಡಿದೆ. "ಪ್ರವಾಹ ಪೀಡಿತರಿಗೆ ತಕ್ಷಣದ ಸಹಾಯಕ್ಕಾಗಿ ಆಯಾ ಸಂಗ್ರಾಹಕರಿಗೆ 154 ಕೋಟಿ ರೂ., 70 ವೈದ್ಯಕೀಯ ತಂಡಗಳು ಆರೋಗ್ಯ ಸೇವೆ ಒದಗಿಸಲು ಕೆಲಸ ಮಾಡುತ್ತಿವೆ. ವಿದ್ಯುತ್ ಸರಬರಾಜಿನ ಪುನಃಸ್ಥಾಪನೆಗಾಗಿ 40 ತಂಡಗಳನ್ನು ರಚಿಸಲಾಗಿದೆ,”ಎಂದು ಅದು ಹೇಳಿದೆ.

ಗುಜರಾತ್‌ನಲ್ಲಿ ಈ ಋತುವಿನಲ್ಲಿ ಪ್ರವಾಹ ಮತ್ತು ಧಾರಾಕಾರ ಮಳೆಯಿಂದಾಗಿ 98 ಜನರು ಸಾವನ್ನಪ್ಪಿದ್ದಾರೆ. ಕಳೆದ 24 ಗಂಟೆಯಲ್ಲಿ ರಾಜ್ಯದ 251 ತಹಸಿಲ್‌ಗಳಲ್ಲಿ ನಿರಂತರ ಮಳೆಯಾಗಿದೆ. ಬೊಟಾಡ್ ಜಿಲ್ಲೆಯ ಬಾರ್ವಾಲಾದಲ್ಲಿ ಅತಿ ಹೆಚ್ಚು 15 ಇಂಚು ಮಳೆಯಾಗಿದೆ. ಇಡೀ ರಾಜ್ಯಕ್ಕೆ ಒಟ್ಟಾರೆ 3 ರಿಂದ 15 ಇಂಚು ಮಳೆಯಾಗಿದೆ. ಕಳೆದ 12 ಗಂಟೆಗಳಲ್ಲಿ, ನಿರಂತರ ಮಳೆಯಿಂದಾಗಿ ಎರಡು ಕಟ್ಟಡಗಳು ಕುಸಿದು 10 ಮಂದಿ ಸಾವನ್ನಪ್ಪಿದ್ದಾರೆ. ಗುಜರಾತ್‌ನ ಖೇಡಾ ಜಿಲ್ಲೆಯ ನಾಡಿಯಾಡ್‌ನ ಪ್ರಗತಿನಗರದಲ್ಲಿ ಶುಕ್ರವಾರ ತಡರಾತ್ರಿ ಮೂರು ಅಂತಸ್ತಿನ ಅಪಾರ್ಟ್‌ಮೆಂಟ್ ಕಟ್ಟಡ ಕುಸಿದು ಕನಿಷ್ಠ ನಾಲ್ವರು ಮೃತಪಟ್ಟಿದ್ದಾರೆ. ಅಹಮದಾಬಾದ್‌ನಲ್ಲಿ ಮತ್ತೊಂದು ಕಟ್ಟಡ ಕುಸಿದು ನಾಲ್ವರು ಸಾವನ್ನಪ್ಪಿದ್ದಾರೆ. ಸೂರತ್‌ನಲ್ಲಿ, ತಾಯಿ-ಮಗ ಜೋಡಿಯನ್ನು ವಿದ್ಯುದಾಘಾತದಿಂದ ಮೃತಪಟ್ಟಿದ್ದಾರೆ. ಈ ಹಿಂದೆ ಮಳೆ ಮತ್ತು ಪ್ರವಾಹ ಸಂಬಂಧಿತ ಘಟನೆಗಳಿಂದಾಗಿ ರಾಜ್ಯದಲ್ಲಿ 88 ಸಾವುಗಳು ದಾಖಲಾಗಿವೆ.

ಕೇರಳ ರಾಜ್ಯದ ಹಲವಾರು ಭಾಗಗಳಲ್ಲಿ ನಿರಂತರ ಮಳೆಯಾಗುತ್ತಿದ್ದು, ನದಿಗಳು ಉಕ್ಕಿ ಹರಿಯುತ್ತಿರುವುದರಿಂದ ಸುಮಾರು 28 ಜನರು ಸಾವನ್ನಪ್ಪಿದ್ದು, 27 ಮಂದಿ ಗಾಯಗೊಂಡರು. ಮುಖ್ಯಮಂತ್ರಿ ಕಚೇರಿಯ (ಸಿಎಮ್‌ಒ) ಹೇಳಿಕೆಯ ಪ್ರಕಾರ, "ರಾಜ್ಯದಾದ್ಯಂತ ಪ್ರವಾಹದಂತಹ ಪರಿಸ್ಥಿತಿಗೆ ಕಾರಣವಾದ ಭಾರಿ ಮಳೆಯಿಂದಾಗಿ ರಾಜ್ಯವ್ಯಾಪಿ 28 ಜನರು ಪ್ರಾಣ ಕಳೆದುಕೊಂಡಿದ್ದಾರೆ ಮತ್ತು ಇತರ 27 ಜನರು ಗಾಯಗೊಂಡಿದ್ದಾರೆ. ಇಲ್ಲಿಯವರೆಗೆ ಏಳು ಜನರು ನಾಪತ್ತೆಯಾಗಿದ್ದಾರೆ" ಎಂದು ಸುದ್ದಿಸಂಸ್ಥೆ ಎಎನ್ಐ ವರದಿ ಮಾಡಿದೆ. ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ವಿಪತ್ತು ನಿರ್ವಹಣಾ ಚಟುವಟಿಕೆಗಳ ಪರಿಶೀಲನಾ ಸಭೆ ನಡೆಸಿದರು. ಈವರೆಗೆ 22,165 ಜನರನ್ನು ಸುರಕ್ಷತೆಗಾಗಿ ಸ್ಥಳಾಂತರಿಸಲಾಗಿದೆ ಮತ್ತು ರಾಜ್ಯಾದ್ಯಂತ 315 ಶಿಬಿರಗಳಲ್ಲಿ ಸ್ಥಾಪಿಸಲಾಗಿದೆ ಎಂದು ಕೇರಳ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರಕ್ಕೆ (ಕೆಡಿಎಸ್‌ಎಂಎ) ಮಾಹಿತಿ ನೀಡಿದೆ. ರಾಷ್ಟ್ರೀಯ ವಿಪತ್ತು ಪರಿಹಾರ ಪಡೆ (ಎನ್‌ಡಿಆರ್‌ಎಫ್), ಸೇನೆ ಮತ್ತು ಸ್ಥಳೀಯ ಪೊಲೀಸರು ರಕ್ಷಣಾ ಕಾರ್ಯಾಚರಣೆ ನಡೆಸುತ್ತಿದ್ದಾರೆ.

Trending News