ಭೋಪಾಲ್: ಮಧ್ಯಪ್ರದೇಶದ ಮಾಜಿ ಮುಖ್ಯಮಂತ್ರಿ, ಬಿಜೆಪಿ ಹಿರಿಯ ನಾಯಕ ಬಾಬುಲಾಲ್ ಗೌರ್ ತಮ್ಮ 89ನೇ ವಯಸ್ಸಿನಲ್ಲಿ ಇಂದು ಬೆಳಿಗ್ಗೆ ಇಹಲೋಕ ತ್ಯಜಿಸಿದ್ದಾರೆ.
ಹಲವು ದಿನಗಳಿಂದ ಅನಾರೋಗ್ಯಕ್ಕೆ ತುತ್ತಾಗಿದ್ದ 89 ವರ್ಷದ ಬಾಬುಲಾಲ್ ಗೌರ್ ಅವರನ್ನು ಆಗಸ್ಟ್ 7ರಂದು ರಕ್ತದೊತ್ತಡ ಹೆಚ್ಚಾದ ಹಿನ್ನೆಲೆಯಲ್ಲಿ ನರ್ಮದಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಬಳಿಕ ಅವರ ಸ್ಥಿತಿ ಗಂಭೀರವಾಗಿದ್ದ ಕಾರಣ ಅವರಿಗೆ ವೆಂಟಿಲೇಟರ್ ನಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು.
ಜೂನ್ 2, 1930ರಂದು ಜನಿಸಿದ ಬಾಬುಲಾಲ್ ಗೌರ್, ಬಿಜೆಪಿಯಲ್ಲಿ ಗುರುತಿಸಿಕೊಂಡರು. ಮಧ್ಯಪ್ರದೇಶದಲ್ಲಿ ಬಿಜೆಪಿಯನ್ನು ಬಲಪಡಿಸುವಲ್ಲಿ ಇವರ ಶ್ರಮ ಅಪಾರ. ಮಧ್ಯಪ್ರದೇಶದಲ್ಲಿ ಬಿಜೆಪಿಯ ಹೆಜ್ಜೆಯನ್ನು ವಿಸ್ತರಿಸಿದ ಕೀರ್ತಿ ಬಿಜೆಪಿ ನಾಯಕನಿಗೆ ಸಲ್ಲುತ್ತದೆ.
ಬಾಬುಲಾಲ್ ಗೌರ್ ಅಗಸ್ಟ್ 2004 ರಿಂದ ನವೆಂಬರ್ 2005ರವರೆಗೆ ಮಧ್ಯಪ್ರದೇಶದ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದ್ದಾರೆ.
ಬಾಬುಲಾಲ್ ಗೌರ್ ಅನಾರೋಗ್ಯದ ನಿಮಿತ್ತ 2018ರಲ್ಲಿ ತಮ್ಮ ಚುನಾವಣಾ ರಾಜಕೀಯಕ್ಕೆ ರಾಜೀನಾಮೆ ಘೋಷಿಸಿದರು.