ನವದೆಹಲಿ: ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ (84) ಇಂದು ವಿಧಿವಶರಾಗಿದ್ದಾರೆ. ಕಳೆದ ಹಲವು ದಿನಗಳಿಂದ ಅವರನ್ನು ಸೇನಾ ಆಸ್ಪತ್ರೆಯಲ್ಲಿ ದಾಖಲಿಸಲಾಗಿತ್ತು. ಕೆಲ ದಿನಗಳ ಹಿಂದೆ ಅವರು ಮೆದುಳಿನ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಬಳಿಕ ಅವರು ಕೋಮಾಗೆ ಜಾರಿದ್ದರು. ತಂದೆಯವರ ನಿಧನದ ಕುರಿತು ಮಾಹಿತಿ ನೀಡಿರುವ ಅವರ ಪುತ್ರ ಅಭಿಜೀತ್ ಮುಖರ್ಜಿ, ವೈದ್ಯರ ಸತತ ಪ್ರಯತ್ನ ಹಾಗೂ ಜನರ ಪ್ರಾರ್ಥನೆಯ ಹೊರತಾಗಿಯೂ ಕೂಡ ನಮ್ಮ ತಂದೆ ಪ್ರಣಬ್ ಮುಖರ್ಜಿ ಇಂದು ನಮ್ಮ ನಡುವೆ ಇಲ್ಲ ಎಂಬುದನ್ನು ಸೂಚಿಸಲು ಹೃದಯ ಭಾರವಾಗಿದೆ ಎಂದಿದ್ದಾರೆ. ರಾಷ್ಟ್ರಪತಿ ರಾಮನಾಥ್ ಕೋವಿಂದ್ ಮಾಜಿ ರಾಷ್ಟ್ರಪತಿಗಳ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ.
With a Heavy Heart , this is to inform you that my father Shri #PranabMukherjee has just passed away inspite of the best efforts of Doctors of RR Hospital & prayers ,duas & prarthanas from people throughout India !
I thank all of You 🙏— Abhijit Mukherjee (@ABHIJIT_LS) August 31, 2020
ಇದಕ್ಕೂ ಮೊದಲು ಸೋಮವಾರ ಮೆಡಿಕಲ್ ಬುಲೆಟಿನ್ ಜಾರಿಗೊಳಿಸಿದ್ದ ಆಸ್ಪತ್ರೆ, ಪ್ರಣಬ್ ದಾ ಅವರ ಆರೋಗ್ಯ ಸ್ಥಿತಿ ಮತ್ತಷ್ಟು ಗಂಭೀರವಾಗಿದೆ ಎಂದು ಹೇಳಿತ್ತು. ಈ ಕುರಿತು ಹೇಳಿಕೆ ಬಿಡುಗಡೆ ಮಾಡಿದ್ದ ಆರ್ಮಿ ರಿಸರ್ಚ್ ಅಂಡ್ ರೆಫಾರಲ್ ಆಸ್ಪತ್ರೆ, ಶ್ವಾಸಕೋಶದ ಸೋಂಕಿನ ಕಾರಣ ಅವರ ಶರೀರ ಸೆಪ್ಟಿಕ್ ಆಘಾತದ ಸ್ಥಿತಿಗೆ ಜಾರಿದೆ ಎಂದು ಹೇಳಿತ್ತು. ಕಳೆದ 21 ದಿನಗಳಿಂದ ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಮೆದುಳಿನ ಶಸ್ತ್ರ ಚಿಕಿತ್ಸೆಯ ಬಳಿಕ ಅವರ ಸ್ಥಿತಿ ಇನ್ನಷ್ಟು ಗಂಭೀರವಾಗಿ ಮುಂದುವರೆದಿತ್ತು.
पूर्व राष्ट्रपति, श्री प्रणब मुखर्जी के स्वर्गवास के बारे में सुनकर हृदय को आघात पहुंचा। उनका देहावसान एक युग की समाप्ति है। श्री प्रणब मुखर्जी के परिवार, मित्र-जनों और सभी देशवासियों के प्रति मैं गहन शोक-संवेदना व्यक्त करता हूँ।
— President of India (@rashtrapatibhvn) August 31, 2020
ಈ ಕುರಿತು ಹೇಳಿಕೆ ನೀಡಿರುವ ಆಸ್ಪತ್ರೆಯ ಅಧಿಕಾರಿಗಳು, "ನಿನ್ನೆಯಿಂದಲೇ ಪ್ರಣಬ್ ಮುಖರ್ಜಿ ಅವರ ಆರೋಗ್ಯ ಸ್ಥಿತಿ ಕುಸಿಯುತ್ತ ಬಂದಿತ್ತು" ಎಂದಿದ್ದಾರೆ. ಅಷ್ಟೇ ಅಲ್ಲ ಶ್ವಾಸಕೋಶದ ಸೋಂಕಿನ ಕಾರಣ ಅವರ ಶರೀರ ಸೇಪ್ಟಿಕ್ ಆಘಾತದ ಸ್ಥಿತಿಗೆ ಜಾರಿತ್ತು ಎಂದು ವೈದ್ಯರು ಹೇಳಿದ್ದಾರೆ.
ರಾಜಕೀಯ ಪಯಣ
ಮೊದಲ ಬಾರಿಗೆ ರಾಜ್ಯಸಭಾ ಸಂಸದ 1969
ಮೊದಲ ಬಾರಿಗೆ ಕೇಂದ್ರ ಸಚಿವ 1973
ಮೊದಲ ಬಾರಿಗೆ ಕ್ಯಾಬಿನೆಟ್ ಮಂತ್ರಿ 1984
ಮೊದಲ ಬಾರಿಗೆ ಲೋಕಸಭಾ ಸಂಸದ 2004
ಪ್ರಣಬ್ ದಾ ಅವರಿಗೆ ಲಭಿಸಿದ ಸನ್ಮಾನಗಳು
ಭಾರತ್ ರತ್ನ - 2019
ಪದ್ಮವಿಭೂಷಣ - 2008
ಅತ್ಯುತ್ತಮ ಸಂಸದ - 1997
ಅತ್ಯುತ್ತಮ ಹಣಕಾಸು ಮಂತ್ರಿ - 1984
ರಾಜಕೀಯದ 'ದಾದಾ'
1969 ಮೊದಲ ಬಾರಿಗೆ ರಾಜ್ಯಸಭಾ ಸದಸ್ಯ
1973 ಇಂದಿರಾಗಾಂಧಿ ಸರ್ಕಾರದಲ್ಲಿ ಉಪ ಮಂತ್ರಿ
1975 ಎರಡನೇ ಬಾರಿಗೆ ರಾಜ್ಯಸಭಾ ಸಂಸದ
1981 ಮೂರನೇ ಬಾರಿಗೆ ರಾಜ್ಯಸಭಾ ಸಂಸದ
1984 ರ ಹಣಕಾಸು ಸಚಿವ
1984 ರ ಸಮೀಕ್ಷೆಯಲ್ಲಿ ವಿಶ್ವದ ಅತ್ಯುತ್ತಮ ಹಣಕಾಸು ಸಚಿವ
1991 ಯೋಜನಾ ಆಯೋಗದ ಉಪಾಧ್ಯಕ್ಷ
1993 ನಾಲ್ಕನೇ ಬಾರಿಗೆ ರಾಜ್ಯಸಭಾ ಸಂಸದ
1995 ನರಸಿಂಹ ರಾವ್ ಸರ್ಕಾರದಲ್ಲಿ ವಿದೇಶಾಂಗ ಸಚಿವ
1999 ಐದನೇ ಬಾರಿಗೆ ರಾಜ್ಯಸಭಾ ಸಂಸದ
2004 ಮೊದಲ ಬಾರಿಗೆ ಲೋಕಸಭಾ ಸಂಸದ
2004 ಯುಪಿಎ -1 ಸರ್ಕಾರದಲ್ಲಿ ರಕ್ಷಣಾ ಸಚಿವ
2006 ರ ಯುಪಿಎ -1 ಸರ್ಕಾರದಲ್ಲಿ ವಿದೇಶಾಂಗ ಸಚಿವ
2009 ರ ಯುಪಿಎ -2 ಸರ್ಕಾರದಲ್ಲಿ ಹಣಕಾಸು ಸಚಿವ
2012 ಭಾರತದ 13 ನೇ ರಾಷ್ಟ್ರಪತಿಯಾಗಿ ಆಯ್ಕೆ
2017 ರ ರಾಷ್ಟ್ರಪತಿಯಾಗಿ ಕಾರ್ಯಕಾಲದ ಮುಕ್ತಾಯ.