ನವದೆಹಲಿ: ಮಾಜಿ ಪ್ರಧಾನಿ ಡಾ. ಮನಮೋಹನ್ ಸಿಂಗ್ 3,500 ಪುಸ್ತಕಗಳನ್ನು ತಮ್ಮ ವೈಯಕ್ತಿಕ ಸಂಗ್ರಹದಿಂದ ಪಂಜಾಬ್ ವಿಶ್ವವಿದ್ಯಾನಿಲಯಕ್ಕೆ ಕೊಡುಗೆಯಾಗಿ ನೀಡಿದ್ದಾರೆ.
ಪಂಜಾಬ್ ವಿವಿ ಅಧಿಕಾರಿಗಳ ಪ್ರಕಾರ, ಶೀಘ್ರದಲ್ಲೇ ನವದೆಹಲಿಯಿಂದ ವಿಶ್ವವಿದ್ಯಾನಿಲಯದ ಕ್ಯಾಂಪಸ್ಗೆ ಪುಸ್ತಕಗಳು,ಸ್ಮರಣಿಕೆಗಳು, ಛಾಯಾಚಿತ್ರಗಳು ಮತ್ತು ವರ್ಣಚಿತ್ರಗಳನ್ನು ಸಾಗಿಸಲು ಈ ವ್ಯವಸ್ಥೆ ಮಾಡಲಾಗುವುದು ಎಂದು ತಿಳಿಸಿದ್ದಾರೆ. ಪುಸ್ತಕಗಳು ಮತ್ತು ಇತರ ವಸ್ತುಗಳನ್ನು ಪಂಜಾಬ್ ವಿಶ್ವವಿದ್ಯಾಲಯ ಆವರಣದಲ್ಲಿರುವ ಗುರು ತೇಜ್ ಬಹದ್ದೂರ್ ಭವನದಲ್ಲಿ ಇರಿಸಲಾಗುವುದು ಎಂದು ಹೇಳಲಾಗಿದೆ.
ಈ ಕುರಿತಾಗಿ ಐಎನ್ಎಸ್ಗೆ ಮಾತನಾಡಿದ ಇತಿಹಾಸ ವಿಭಾಗದ ಪ್ರಾಂಶುಪಾಲರು "ಛಾಯಾಚಿತ್ರಗಳು ಮತ್ತು ವರ್ಣಚಿತ್ರಗಳನ್ನು ಒಳಗೊಂಡಂತೆ 3,500 ಪುಸ್ತಕಗಳು ಮತ್ತು ಸ್ಮಾರಕಗಳು, ಗುರು ತೇಜ್ ಬಹದ್ದೂರ್ ಭವನದಲ್ಲಿ ಇಡಲಾಗುವುದು ,ಅದಕ್ಕೆ ಸೂಕ್ತ ಸಿದ್ಧಪಡಿಸುವವರೆಗೆ ಎಲ್ಲ ಪುಸ್ತಕಗಳನ್ನು ಮುಖ್ಯ ಗ್ರಂಥಾಲಯದಲ್ಲಿ ಇರಿಸಲಾಗುವುದು" ಎಂದು ಅವರು ಹೇಳಿದರು.
ಮನಮೋಹನ್ ಸಿಂಗ್ ರವರು ಪಂಜಾಬ್ ವಿಶ್ವವಿಧ್ಯಾನಿಲಯದಿಂದ 1952 ರಲ್ಲಿ ಅರ್ಥಶಾಸ್ತ್ರದಲ್ಲಿ ಪದವಿಯನ್ನು ಪಡೆದುಕೊಂಡಿದ್ದರು