ಆರ್ಥಿಕ ದುರ್ಬಲ ವರ್ಗಗಳಿಗೆ ಗುಜರಾತ್'ನಲ್ಲಿ ಇಂದಿನಿಂದ ಸಿಗಲಿದೆ 10% ಮೀಸಲಾತಿ ಪ್ರಯೋಜನ

ಈ ಮೀಸಲಾತಿಯನ್ನು ಕಾರ್ಯಗತಗೊಳಿಸುವ ಮೊದಲ ರಾಜ್ಯ ಗುಜರಾತ್.

Last Updated : Jan 14, 2019, 10:27 AM IST
ಆರ್ಥಿಕ ದುರ್ಬಲ ವರ್ಗಗಳಿಗೆ ಗುಜರಾತ್'ನಲ್ಲಿ ಇಂದಿನಿಂದ ಸಿಗಲಿದೆ 10% ಮೀಸಲಾತಿ ಪ್ರಯೋಜನ title=

ನವದೆಹಲಿ: ಇತ್ತೀಚೆಗೆ ಆರ್ಥಿಕವಾಗಿ ದುರ್ಬಲ ವರ್ಗಗಳಿಗೆ 10% ಮೀಸಲಾತಿ ನೀಡುವ ಬಗ್ಗೆ ನರೇಂದ್ರ ಮೋದಿ ಸರಕಾರ ಘೋಷಿಸಿದ ಬಳಿಕ ಗುಜರಾತ್ ಶೀಘ್ರದಲ್ಲೇ ಅದನ್ನು ಕಾರ್ಯಗತಗೊಳಿಸುವ ಮೊದಲ ರಾಜ್ಯವಾಯಿತು. ಮೇಲ್ಜಾತಿ ಮೀಸಲಾತಿ ಮಸೂದೆ ಲೋಕಸಭೆ ಮತ್ತು ರಾಜ್ಯಸಭೆಯ ಅಂಗೀಕಾರದ ನಂತರ ರಾಷ್ಟ್ರಪತಿ ರಮಾನಾಥ್ ಕೋವಿಂದ್ ಈ ಮಸೂದೆಗೆ ಶನಿವಾರ ಅಂಕಿತ ಹಾಕಿದ್ದಾರೆ. ರಾಜ್ಯದಲ್ಲಿ ಈ ಮೀಸಲಾತಿಯನ್ನು ಜನವರಿ 14 ರಿಂದ ಸರ್ಕಾರಿ ಉದ್ಯೋಗಗಳು ಮತ್ತು ಶೈಕ್ಷಣಿಕ ಸಂಸ್ಥೆಗಳಲ್ಲಿ ಜಾರಿಗೆ ತರಲಾಗುವುದು ಎಂದು ಗುಜರಾತ್ ಮುಖ್ಯಮಂತ್ರಿ ವಿಜಯ್ ರುಪಾನಿ ಶನಿವಾರ ತಿಳಿಸಿದ್ದಾರೆ. ಇದು ಆರ್ಥಿಕವಾಗಿ ದುರ್ಬಲ ವರ್ಗಗಳಿಗೆ ಪ್ರಯೋಜನವನ್ನು ನೀಡುತ್ತದೆ.

ಮೋದಿ ಸರ್ಕಾರದ ಮುಖ್ಯವಾದ ಸ್ಟ್ರೋಕ್ ಆಗಿರುವ ಸಾಮಾನ್ಯ ಮೀಸಲಾತಿ ಮಸೂದೆಯನ್ನು ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅನುಮೋದಿಸಿದ್ದಾರೆ. ಅದೇ ಸಮಯದಲ್ಲಿ, ಒಂದು ವಾರದೊಳಗೆ ಸರ್ಕಾರಿ ಉದ್ಯೋಗಗಳು ಮತ್ತು ಶೈಕ್ಷಣಿಕ ಸಂಸ್ಥೆಗಳಲ್ಲಿ ಹತ್ತು ಪ್ರತಿಶತದಷ್ಟು ಮೀಸಲಾತಿ ಆರಂಭವಾಗುವುದೆಂದು ಹೇಳಲಾಗಿದೆ. ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯ ಈ ವಾರದೊಳಗೆ ನಿಬಂಧನೆಗಳನ್ನು ಅಂತಿಮಗೊಳಿಸುತ್ತದೆ ಎನ್ನಲಾಗಿದೆ.

ಮಸೂದೆ ಪ್ರಕಾರ, ಮೀಸಲಾತಿ ಸೂತ್ರವು 50% + 10%. 8 ಲಕ್ಷಕ್ಕೂ ಕಡಿಮೆ ವಾರ್ಷಿಕ ಆದಾಯ ಹೊಂದಿರುವವರು ಮೀಸಲಾತಿಯ ಲಾಭ ಪಡೆದುಕೊಳ್ಳುತ್ತಾರೆ. 5 ಎಕರೆ ಭೂಮಿಗಿಂತ ಕಡಿಮೆ ಭೂಮಿ ಹೊಂದಿರುವ ಮೇಲ್ವರ್ಗದವರು ಮೀಸಲಾತಿಯ ಪ್ರಯೋಜನ ಪಡೆಯುತ್ತಾರೆ. ಈ ಮೀಸಲಾತಿಯ ಲಾಭಗಳು 1000 ಚದರ ಅಡಿಗಳಷ್ಟು ಕಡಿಮೆ ವಸತಿ ಭೂಮಿಯನ್ನು ಹೊಂದಿರುವವರಿಗೆ ಲಭ್ಯವಿರುತ್ತವೆ.

Trending News